Rohit Sharma and Shikhar Dhawan : ಭಾರತೀಯ ಕ್ರಿಕೆಟ್‌ನ ಮತ್ತೊಂದು ಭಲೇ ಜೋಡಿ, ಸಚಿನ್ -ದಾದಾ ದಾಖಲೆ ಮುರೀತಾರ ರೋಹಿತ್-ಶಿಖರ್ ?

ಲಂಡನ್: ಏಕದಿನ ಕ್ರಿಕೆಟ್’ನಲ್ಲಿ ಭಲೇ ಜೋಡಿ ಎಂದು ಕರೆಸಿಕೊಂಡಿರುವುದು ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ. ಇದು ಏಕದಿನ ಕ್ರಿಕೆಟ್”ನ ಅತ್ಯಂತ ಯಶಸ್ವಿ ಆರಂಭಿಕ ಜೋಡಿ. ಆರಂಭಿಕರಾಗಿ 6,609 ರನ್”ಗಳ ಜೊತೆಯಾಟವಾಡಿರುವ ಸಚಿನ್ ಮತ್ತು ಸೌರವ್, ವಿಶ್ವದಾಖಲೆಯ ಜೋಡಿಯೂ ಹೌದು. ಭಾರತೀಯ ಕ್ರಿಕೆಟ್’ನಲ್ಲಿ ಮತ್ತೊಂದು ಭಲೇ ಜೋಡಿಯಿದೆ. ವಿಶೇಷ ಏನಂದ್ರೆ ಸಚಿನ್-ಸೌರವ್ ಅವರಂತೆ ಇದೂ ಕೂಡ ಬಲಗೈ-ಎಡಗೈ ಆರಂಭಿಕ ಜೋಡಿ. ನಾವು ಹೇಳುತ್ತಿರುವುದು ರೋಹಿತ್ ಶರ್ಮಾ-ಶಿಖರ್ ಧವನ್ (Rohit Sharma and Shikhar Dhawan) ಜೋಡಿಯ ಬಗ್ಗೆ.

ಇಂಗ್ಲೆಂಡ್ ವಿರುದ್ಧ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಶತಕದ ಜೊತೆಯಾಟವಾಡುವ ಮೂಲಕ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ, ಏಕದಿನ ಕ್ರಿಕೆಟ್”ನಲ್ಲಿ ಮೊದಲ ವಿಕೆಟ್”ಗೆ 5000 ರನ್”ಗಳ ಜೊತೆಯಾಟವಾಡಿದೆ. 112ನೇ ಇನ್ನಿಂಗ್ಸ್”ನಲ್ಲಿ 56 ಸಾವಿರದ ಗಡಿ ದಾಟಿರುವ ರೋಹಿತ್-ಶಿಖರ್ ಜೋಡಿ ಒಟ್ಟು 5,108 ರನ್’ಗಳ ಜೊತೆಯಾಟವಾಡಿದ್ದು, ಸಚಿನ್-ಗಂಗೂಲಿ ದಾಖಲೆಯನ್ನು ಮುರಿಯಲು ಬೇಕಿರುವುದಿನ್ನು 1,501 ರನ್. ಅಷ್ಟೇ ಅಲ್ಲ, ಪ್ರಥಮ ವಿಕೆಟ್”ಗೆ 18ನೇ ಬಾರಿ ಶತಕದ ಜೊತೆಯಾಟವಾಡಿದ ಹಿರಿಮೆಗೆ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಪಾತ್ರವಾಗಿದೆ.

2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿ ಭಾರತದ ಇನ್ನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್, 18 ಬಾರಿ ಶತಕದ ಜೊತೆಯಾಟವಾಡಿದ್ದು, 15 ಬಾರಿ ಅರ್ಧಶತಕದ ಜೊತೆಯಾಟವಾಡಿದೆ.

ಆರಂಭಿಕರಾಗಿ ಅತೀ ಹೆಚ್ಚು ರನ್:
ಸಚಿನ್ ತೆಂಡೂಲ್ಕರ್-ಸೌರವ್ ಗಂಗೂಲಿ (ಭಾರತ)
136 ಇನ್ನಿಂಗ್ಸ್
6,609 ರನ್
21 ಶತಕದ ಜೊತೆಯಾಟ
23 ಅರ್ಧಶತಕದ ಜೊತೆಯಾಟ

ಮ್ಯಾಥ್ಯೂ ಹೇಡನ್-ಗಿಲ್’ಕ್ರಿಸ್ಟ್ (ಆಸ್ಟ್ರೇಲಿಯಾ)
114 ಇನ್ನಿಂಗ್ಸ್
5,372 ರನ್
16 ಶತಕದ ಜೊತೆಯಾಟ
29 ಅರ್ಧಶತಕದ ಜೊತೆಯಾಟ

ಡೆಸ್ಮಂಡ್ ಹೇನ್ಸ್-ಗಾರ್ಡನ್ ಗ್ರೀನಿಡ್ಜ್ (ವೆಸ್ಟ್ ಇಂಡೀಸ್)
102 ಇನ್ನಿಂಗ್ಸ್
5,150 ರನ್
15 ಶತಕದ ಜೊತೆಯಾಟ
24 ಅರ್ಧಶತಕದ ಜೊತೆಯಾಟ

ರೋಹಿತ್ ಶರ್ಮಾ- ಶಿಖರ್ ಧವನ್ (ಭಾರತ)
112 ಇನ್ನಿಂಗ್ಸ್
5,108 ರನ್
18 ಶತಕದ ಜೊತೆಯಾಟ
15 ಅರ್ಧಶತಕದ ಜೊತೆಯಾಟ

ಆರಂಭಿಕನಾಗಿ ಮೊದಲ 145 ಏಕದಿನ ಇನ್ನಿಂಗ್ಸ್”ಗಳಲ್ಲಿ ಅತೀ ಹೆಚ್ಚು 50+ ಸ್ಕೋರ್
60: ರೋಹಿತ್ ಶರ್ಮಾ 56: ಹಶೀಮ್ ಆಮ್ಲಾ 52: ಶಿಖರ್ ಧವನ್
51: ಸಚಿನ್ ತೆಂಡೂಲ್ಕರ್

ಇದನ್ನೂ ಓದಿ : ‘’ಚಿರು ಹೇಗಿದ್ದೀಯಾ ?’’ 18 ವರ್ಷಗಳ ಹಿಂದಿನ ಗೆಳೆಯನನ್ನು ಇಂಗ್ಲೆಂಡ್’ನಲ್ಲಿ ಭೇಟಿ ಮಾಡಿದ ಕೊಹ್ಲಿ, ಖುಷಿ ಹಂಚಿಕೊಂಡ ಸ್ನೇಹಿತ..!

ಇದನ್ನೂ ಓದಿ : 20 Years for NatWest Final : ದಾದಾ ಶರ್ಟ್ ಬಿಚ್ಚಿ ಅಬ್ಬರಿಸಿದ್ದ ಕ್ಷಣಕ್ಕೆ.., ಭಾರತೀಯ ಕ್ರಿಕೆಟ್’ನ ಮಹೋನ್ನತ ಗೆಲುವಿಗೆ ತುಂಬಿತು 20 ವರ್ಷ

Rohit Sharma and Shikhar Dhawan may be Breaking Sachin And Ganguly Record

Comments are closed.