Actor Vishal visits Kukke: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಲ್ಲಿ ಆಶ್ಲೇಷಾ ಬಲಿ ನೆರವೇರಿಸಿದ ತಮಿಳು ನಟ ವಿಶಾಲ್

ದಕ್ಷಿಣ ಕನ್ನಡ: Actor Vishal visits Kukke: ನಿನ್ನೆಯಷ್ಟೆ ಧರ್ಮಸ್ಥಳ ಮಂಜುನಾಥ ದೇವರ ದರ್ಶನ ಪಡೆದಿದ್ದ ತಮಿಳು ನಟ ವಿಶಾಲ್ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಲ್ಲಿ ಪೂಜೆ ಸಲ್ಲಿಸಿದ್ದಾರೆ. ನಿನ್ನೆಯಷ್ಟೆ ರಾಜ್ಯಕ್ಕೆ ಆಗಮಿಸಿದ್ದ ವಿಶಾಲ್ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಆ ಬಳಿಕ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ದೈವಿಕ ಕಾರ್ಯದಲ್ಲಿ ಭಾಗಿಯಾಗಿ ನಾಗನಿಗೆ ಆಶ್ಲೇಷಾ ಬಲಿ ಪೂಜೆ ನೆರವೇರಿಸಿದರು.

ಇದನ್ನೂ ಓದಿ: Rayan Raj Sarja superstar : ಚಿರು- ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ ಸೂಪರ್ ಸ್ಟಾರ್ ಆಗ್ತಾನೆ : ಸುಂದರರಾಜ್ ಭವಿಷ್ಯ

ಅವರ ಜಾತಕದಲ್ಲಿ ನಾಗದೋಷ ಕಂಡುಬಂದ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ನಾಗದೇವರಿಗೆ ಆಶ್ಲೇಷಾ ಬಲಿ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಪಂಚೆ ಹಾಗೂ ಶಲ್ಯವನ್ನು ಧರಿಸಿ ಪೂಜೆಯಲ್ಲಿ ಕುಳಿತಿದ್ದ ವಿಶಾಲ್ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಇದನ್ನು ಅವರ ಸಂಗಡಿಗರು ಫೋಟೋ ತೆಗೆದು, ವಿಡಿಯೋ ಸಹಿತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಇತ್ತೀಚೆಗಷ್ಟೆ ವಿಶಾಲ್ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ್ದರು. ನಿನ್ನೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ವಿಶಾಲ್ ಅಲ್ಲಿ ಕೂಡಾ ಅಣ್ಣಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲಿಂದ ನೇರವಾಗಿ ಕುಕ್ಕೆಗೆ ಆಗಮಿಸಿದ್ದ ಅವರು ನಾಗದೇವರಿಗೆ ಆಶ್ಲೇಷಾ ಬಲಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: Naga Chaitanya and Samantha : ಮತ್ತೆ ಒಂದಾಗ್ತಾರಾ ನಾಗ ಚೈತನ್ಯ ಮತ್ತು ಸಮಂತಾ?.: ವಿಚ್ಚೇದನದ ಬಳಿಕ ಒಂದೇ ಸಿನಿಮಾದಲ್ಲಿ ಮಾಜಿ ದಂಪತಿ ನಟನೆ

ಇದನ್ನೂ ಓದಿ : Naga Chaitanya and Samantha : ಮತ್ತೆ ಒಂದಾಗ್ತಾರಾ ನಾಗ ಚೈತನ್ಯ ಮತ್ತು ಸಮಂತಾ?.: ವಿಚ್ಚೇದನದ ಬಳಿಕ ಒಂದೇ ಸಿನಿಮಾದಲ್ಲಿ ಮಾಜಿ ದಂಪತಿ ನಟನೆ

ಇದನ್ನೂ ಓದಿ : Fake Twitter Account : ಟ್ವೀಟರ್ ನಲ್ಲಿ ಹೆಚ್ಚಾಯ್ತು ನಕಲಿ ಖಾತೆ :ಟ್ವೀಟರ್ ಬ್ಲೂ ಟಿಕ್‌ ಚಂದಾದಾರಿಕೆ ಸ್ಥಗಿತ

Actor Vishal visits Kukke: Tamil actor Vishal performed Ashlesha Bali at Kukke Subrahmanya temple

Comments are closed.