ಆಸ್ಕರ್ ವೇದಿಕೆಯಲ್ಲಿ ಪತ್ನಿ ಬಗ್ಗೆ ತಮಾಷೆ ಮಾಡಿದ್ದಾರೆ ಎಂಬ ಕಾರಣಕ್ಕೆ ನಟ ವಿಲ್ ಸ್ಮಿತ್ (Will Smith) ಹಾಸ್ಯ ನಟ ಕ್ರಿಸ್ ರಾಕ್ಗೆ ಕಪಾಕ್ಷ ಮೋಕ್ಷ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಚಾರವಾಗಿ ಇದೀಗ ಆಸ್ಕರ್ ಅಕಾಡೆಮಿ ವಿಲ್ ಸ್ಮಿತ್ರಿಗೆ ಬರೋಬ್ಬರಿ 10 ವರ್ಷಗಳ ಕಾಲ ಆಸ್ಕರ್ ಸಮಾರಂಭದಿಂದ ನಿಷೇಧ ಹೇರಿದೆ.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ & ಸೈನ್ಸಸ್ ಈ ಬಗ್ಗೆ ಅಧಿಕೃತ ಹೇಳಿದೆ ನೀಡಿದೆ. ಈ ಆದೇಶವು 2022 ಏಪ್ರಿಲ್ 8ರಿಂದ ಮುಂದಿನ 10 ವರ್ಷಗಳ ಕಾಲ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ವಿಲ್ ಸ್ಮಿತ್ ಅಕಾಡೆಮಿಯ ಯಾವುದೇ ಸಮಾರಂಭಗಳಿಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ ಎಂದು ಅಕಾಡೆಮಿಯ ಅಧ್ಯಕ್ಷ ಡೇವಿಡ್ ರೂಬಿನ್ ಹಾಗೂ ಸಿಇಓ ಡಾನ್ ಹಡ್ಸನ್ ಹೇಳಿಕೆ ನೀಡಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸಭೆಯನ್ನು ಈ ಮೊದಲು ಏಪ್ರಿಲ್ 18ನೇ ತಾರೀಖಿನಂದು ನಿಗದಿ ಪಡಿಸಲಾಗಿತ್ತು. ಅಕಾಡೆಮಿಗೆ ಕಳೆದ ವಾರ ಸ್ಮಿತ್ ರಾಜೀನಾಮೆ ನೀಡಿದ ಬಳಿಕ ಇದೀಗ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ದಶಕಗಳ ಕಾಲ ಆಸ್ಕರ್ ಸಮಾರಂಭದಿಂದ ನಿಷೇಧವನ್ನು ಹೊಂದಿರುವುದರ ಬಗ್ಗೆ ಹೇಳಿಕೆ ನೀಡಿದ ವಿಲ್ ಸ್ಮಿತ್, ನಾನು ಅಕಾಡೆಮಿಯ ನಿರ್ಧಾರವನ್ನು ಸ್ವಾಗತಿಸುತ್ತಿದ್ದೇನೆ ಹಾಗೂ ಈ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನು ಓದಿ : Yogi Adityanath : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಚೇರಿಯ ಟ್ವಿಟರ್ ಖಾತೆ ಹ್ಯಾಕ್
ಇದನ್ನೂ ಓದಿ : KGF 2 : ಕೆಜಿಎಫ್ ಅನ್ನು ಪಾನ್ ಇಂಡಿಯಾ, ಸೌತ್ ಇಂಡಿಯಾ ಸಿನಿಮಾ ಅನ್ನ ಬೇಡಿ! ಅದು ಅದ್ಭುತ ಹಿಂದೂಸ್ತಾನ್ ಮೂವಿ ಎಂದ ಸಂಜಯ್ ದತ್