ಖ್ಯಾತ ಬಾಲಿವುಡ್ ದಂಪತಿ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್(Alia Bhatt-Ranbir Kapoor) ಈ ವರ್ಷದ ಏಪ್ರಿಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಆಲಿಯಾ ಭಟ್ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದಂಪತಿಗಳು ತಮ್ಮ ಮೊದಲ ಮಗುವಿನ ಹೆರಿಗೆಗಾಗಿ ಬೆಳಿಗ್ಗೆ 7.30ಕ್ಕೆ ಮುಂಬೈನ ಗಿರ್ಗಾಂವ್‌ನ ಹೆಚ್.ಎನ್.ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿದ್ದರು. ಆಲಿಯಾ ಭಟ್ ಸರ್ಜರಿ ಮೂಲಕ ಮಗು ಜನಿಸಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸುಮಾರು ಐದು ವರ್ಷಗಳ ಕಾಲ ಡೇಟಿಂಗ್‌ನ ನಂತರ ದಂಪತಿಗಳು ಏಪ್ರಿಲ್ 14ಕ್ಕೆ ವಿವಾಹವಾಗುತ್ತಾರೆ. ನಂತರ ಜೂನ್‌ನಲ್ಲಿ ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ನ್ನು ಹಂಚಿಕೊಳ್ಳುವ ಮೂಲಕ ತಾವು ಗರ್ಭಣಿಯಾಗಿರುವುದನ್ನು ಘೋಷಿಸಿಕೊಳ್ಳುತ್ತಾರೆ. ಆಲಿಯಾ ಭಟ್ ಆಸ್ಪತ್ರೆಯ ಬೆಡ್‌ನಲ್ಲಿ ಅಲ್ಟ್ರಾಸೌಂಡ್‌ಗೆ ಒಳಗಾಗಿರುವಾಗ ರಣಬೀರ್ ಅವಳ ಪಕ್ಕದಲ್ಲಿ ಕುಳಿತಿರುತ್ತಾರೆ. ಆಲಿಯಾ ದೊಡ್ಡ ಕೆಂಪು ಹೃದಯದ ಎಮೋಜಿಯೊಂದಿಗೆ ಪರದೆಯ ಮೇಲೆ ಇರುವ ಚಿತ್ರವನ್ನು ಮರೆ ಮಾಡುವ ಮೂಲಕ ಭವಿಷ್ಯದಲ್ಲಿ ತಾಯಿಯಾಗಲಿರುವ ಅವರು “ನಮ್ಮ ಮಗು ಶೀಘ್ರದಲ್ಲೇ ಬರಲಿದೆ ಎನ್ನುವ ಶೀರ್ಷಿಕೆಯೊಂದಿಗೆ ಪೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುತ್ತಾರೆ
ಆಲಿಯಾ ತನ್ನ ಆಪ್ತ ಸ್ನೇಹಿತರು ಮತ್ತು ಕುಟುಂಬದ ಜೊತೆಯಲಿ ಅಕ್ಟೋಬರ್‌ನಲ್ಲಿ ಬೇಬಿ ಶೋವರ್‌ನ್ನು ಮಾಡಿಕೊಂಡಿದ್ದಳು. ಆಲಿಯಾ ಬೇಬಿ ಶೋವರ್‌ನ ಸುಂದರವಾದ ಪೋಟೋಗಳನ್ನುಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುತ್ತಾರೆ. ಪೋಟೋಗಳಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್, ಇತರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಕಾಣಿಸಿಕೊಂಡಿರುತ್ತಾರೆ. ರಣಬೀರ್ ಕಪೂರ್ ತಂದೆಯಾದ ಕುರಿತು ಸಂತಸವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಆಸ್ಪತ್ರೆಗೆ ದಾಖಲಾದ ಆಲಿಯಾ ಭಟ್ : ಮೊದಲ ಮಗುವಿನ ನಿರೀಕ್ಷೆಯಲ್ಲಿ ರಣಬೀರ್ ಕಪೂರ್
ಇದನ್ನೂ ಓದಿ : Kantara Rishab Shetty : ಕಾಂತಾರ ಬಳಿಕ ಖುಲಾಯಿಸಿತು ರಿಶಬ್ ಅದೃಷ್ಟ: ಬಾಲಿವುಡ್ ಸಿನಿಮಾಗೂ ಬರ್ತಿದೆ ಆಫರ್
ಇದನ್ನೂ ಓದಿ : S.P. Sangliyana- 2: ಶಂಕರ್ ನಾಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಬಿಗ್ ಸ್ಕ್ರೀನ್ ಮೇಲೆ ಮತ್ತೆ ಬರಲಿದ್ದಾರೆ ಕರಾಟೆ ಕಿಂಗ್
ನಟ ರಣಬೀರ್ ಸಹ ಸಿನಿರಂಗದಿಂದ ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಪತ್ನಿ ಮತ್ತು ನವಜಾತ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುವ ಸಲುವಾಗಿ ಹೊಸ ಚಿತ್ರಕ್ಕೆ ಸಹಿ ಹಾಕುವುದಿಲ್ಲ ಎಂದು ವರದಿಯಾಗಿದೆ. ಆಲಿಯಾ ತನ್ನ ಗರ್ಭಾವಸ್ಥೆಯ ಉದ್ದಕ್ಕೂ ಕೆಲಸ ಮಾಡಿರುತ್ತಾರೆ. ಆಲಿಯಾ ಭಟ್ ಗರ್ಭಾವಸ್ಥೆಯಲ್ಲಿ ಗಾಲ್ ಗಡೋಟ್ ಅವರೊಂದಿಗೆ ತಮ್ಮ ಅಂತರರಾಷ್ಟ್ರೀಯ ಪ್ರಾಜೆಕ್ಟ್ ಹಾರ್ಟ್ ಆಫ್ ಸ್ಟೋನ್‌ಗಾಗಿ ಚಿತ್ರೀಕರಿಣದಲ್ಲಿ ಭಾಗಿಯಾಗಿದ್ದರು. ಅದರ ಜೊತೆಯಲಿ ‘ಡಾರ್ಲಿಂಗ್ಸ್’ ಮತ್ತು ‘ಬ್ರಹ್ಮಾಸ್ತ್ರ’ವನ್ನು ಸಹ ಪ್ರಚಾರ ಮಾಡಿದ್ದಾರೆ. ಇವರ ವಿವಾಹದ ನಂತರ ಈ ಜೋಡಿಯ ಮೊದಲ ಚಿತ್ರ ‘ಬ್ರಹ್ಮಾಸ್ತ್ರ’ ಬ್ಲಾಕ್ ಬಸ್ಟರ್ ಆಗಿ ತೆರೆಕಂಡು ಸಿನಿಮಾದ ಗಲ್ಲಾಪೆಟ್ಟಿಗೆ ಯಶಸ್ಸನ್ನು ಪಡೆದುಕೊಂಡಿರುತ್ತದೆ.
Alia Bhatt-Ranbir Kapoor : Actress Alia Bhatt gave birth to a baby girl: Father Ranbir Kapoor