Rice Beauty tips :ಉಳಿದ ಅನ್ನ ಎಸೆಯುವ ಮುನ್ನ ಈ ಸ್ಟೋರಿ ಓದಿ

Rice Beauty tips)ಮನೆಯಲ್ಲಿ ಅನ್ನವನ್ನು ಮಾಡಿದಾಗ ಬೇಡವೆಂದರೂ ಪಾತ್ರೆಯಲ್ಲಿ ಅನ್ನ ಉಳಿಯುತ್ತದೆ. ಇದರಲ್ಲಿ ಕೆಲವರು ಬೆಳಿಗ್ಗೆ ಚಿತ್ರನ್ನಾ ಮಾಡಿ ತಿಂದರೆ ಇನ್ನು ಕೆಲವರು ಅನ್ನವನ್ನು ಆಚೆ ಬಿಸಾಡುತ್ತಾರೆ. ತಂಗಳು ಅನ್ನವನ್ನು ಆಚೆ ಬಿಸಾಡುವ ಬದಲು ಇದರಿಂದ ನಿಮ್ಮ ಕೂದಲನ್ನು ರಕ್ಷಿಸಿಕೊಳ್ಳಬಹುದು. ಹೇಗಪ್ಪಾ ಕೂದಲನ್ನು ಈ ಅನ್ನದಿಂದ ರಕ್ಷಿಸಿಕೊಳ್ಳಬಹುದು ಎಂದು ಚಿಂತಿಸುತ್ತಿದ್ದಿರಾ. ಇಲ್ಲಿದೆ ಅನ್ನದಿಂದ ನಿಮ್ಮ ಕೂದಲನ್ನು ರಕ್ಷಿಸಿಕೊಳ್ಳುವ ಮಾಹಿತಿ.

ಬೇಕಾಗುವ ಸಾಮಗ್ರಿಗಳು:
ಬೇಯಿಸಿಕೊಂಡ ಅನ್ನ(Rice Beauty tips)
ಅಲವೇರಾ
ಕೊಬ್ಬರಿ ಎಣ್ಣೆ

ಮಾಡುವ ವಿಧಾನ
ಒಂದು ಬೌಲ್ ನಲ್ಲಿ ಬೇಯಿಸಿಕೊಂಡ ಅನ್ನ,ಅಲವೇರಾ, ಕೊಬ್ಬರಿ ಎಣ್ಣೆ ಹಾಕಿಕೊಂಡು ಮಿಕ್ಸಿಯ ಸಣ್ಣ ಜಾರಿನಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ನಂತರ ರುಬ್ಬಿಕೊಂಡ ಮಿಶ್ರಣವನ್ನು ಫ್ರೀಡ್ಜ ಐಸ್ ಕ್ಯೂಬ್ ಬಟ್ಟಲಿಗೆ ಹಾಕಬೇಕು. ಇದು ಗಟ್ಟಿಯಾದ ಮೇಲೆ ಒಂದು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ತಲೆ ಸ್ನಾನ ಮಾಡುವಾಗ ಈ ಕ್ಯೂಬ್‌ ಅನ್ನು ಬಳಸಬೇಕು. ತಲೆ ಸ್ನಾನದ ಕೊನೆಯಲ್ಲಿ ಕ್ಯೂಬ್‌ ಅನ್ನು ಕೂದಲಿಗೆ ಹಚ್ಚಿ 5 ರಿಂದ 10 ನಿಮಿಷ ಬಿಟ್ಟು ತೊಳೆದರೆ ನಯವಾದ ಮತ್ತು ಹೊಳೆಯುವ ಕೂದಲು ನಿಮ್ಮದಾಗುತ್ತದೆ.

ಬೇಕಾಗುವ ಸಾಮಗ್ರಿಗಳು
ಶಾಂಪೂ
ಅಲವೇರಾ
ವಿಟಮಿನ್ ಇ ಟ್ಯಾಬ್ಲೆಟ್
ನಿಂಬೆಹಣ್ಣಿನ ರಸ
ಕಾಫಿ ಪೌಡರ್

ಮಾಡುವ ವಿಧಾನ
ಮಿಕ್ಸಿ ಜಾರಿನಲ್ಲಿ ಅಲವೆರಾ, ವಿಟಮಿನ್ ಇ ಟ್ಯಾಬ್ಲೆಟ್, ನಿಂಬೆಹಣ್ಣಿನ ರಸ, ಕಾಫಿ ಪೌಡರ್, ಶಾಂಪೂ ಎಲ್ಲವನ್ನೂ ಹಾಕಿ ರುಬ್ಬಿಕೊಳ್ಳಬೇಕು. ಇದನ್ನು ಕೂದಲಿಗೆ ಹಚ್ಚಿ ತೊಳೆದರೆ ಕೂದಲು ನಯವಾಗುತ್ತದೆ. ಕಂಡಿಶನರ್‌ ಬಳಸುವ ಅಗತ್ಯವಿರುವುದಿಲ್ಲ.

ಇದನ್ನೂ ಓದಿ:Lip Balm:ಮನೆಯಲ್ಲೇ ಕುಳಿತು ಲಿಪ್ ಬಾಲ್ಮ್ ತಯಾರಿಸಿ

ಇದನ್ನೂ ಓದಿ:Face Pack:ಟ್ಯಾನ್ ಆಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು‌ ಇಲ್ಲಿದೆ ಫೇಸ್ ಪ್ಯಾಕ್

ಅಕ್ಕಿಯ ನೀರಿನಿಂದ ನಿಮ್ಮ ಮುಖವನ್ನು ತೊಳೆಯುವುದರಿಂದ ನಿಮ್ಮ ಮುಖದಲ್ಲಿ ಸುಕ್ಕುಗಳಿದ್ದರೆ ಅದನ್ನು ಕಡಿಮೆ ಮಾಡುತ್ತದೆ ಜೊತೆಗೆ ಕಾಂತಿಯನ್ನು ಹೆಚ್ಚಿಸುತ್ತದೆ. ಅಕ್ಕಿಯ ನೀರಿನಲ್ಲಿ ವಿಟಮಿನ್‌ ಎ, ಸಿ ,ಡಿ ಮತ್ತು ಇ ಹೇರಳವಾಗಿರುವುದರಿಂದ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಇದರ ನೀರಿನಿಂದ ಕೂದಲನ್ನೂ ತೊಳೆದುಕೊಳ್ಳುವ ಮೂಲಕ ನಿಮ್ಮ ಕೂದಲಿನ ರಕ್ಷಣೆಯನ್ನು ಮಾಡಿಕೊಳ್ಳಿ.

ಅರ್ಧ ಕಪ್‌ ಅಕ್ಕಿ ನೀರನ್ನು ತೆಗೆದುಕೊಂಡು ಅದರಲ್ಲಿ ಎರಡು ಚಮಚ ಅಲವೇರಾ ಜೆಲ್‌ಅನ್ನು ಮಿಶ್ರಣ ಮಾಡಿ ಅದನ್ನು ಫೇಸ್‌ ಪ್ಯಾಕ್‌ ನಂತೆ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳನ್ನೂ ಕಡಿಮೆ ಮಾಡುತ್ತದೆ.ಮತ್ತು ಮುಖದಲ್ಲಿರುವ ಸುಕ್ಕನ್ನು ಕಡಿಮೆ ಮಾಡಿ ಮುಖದ ಕಾಂತಿಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡುತ್ತದೆ.

read this story before throwing away leftover rice

Comments are closed.