ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ, ಮಲೆನಾಡ ಬೆಡಗಿ ಅನಿತಾ ಭಟ್ ನಿರ್ಮಾಣದ ಬಹು ನಿರೀಕ್ಷಿತ ಸಿನಿಮಾ ಇಂದಿರಾ ತೆರೆಗೆ ಬಂದಿದೆ. ನಟಿಯಾಗಿ ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತಿ ಪಡೆದಿರುವ ಅನಿತಾ ಭಟ್ ಇಂದಿರಾ ಆಗಿ (Anita Bhat Produced Movie INDIRA) ಕಾಣಿಸಿಕೊಂಡಿದ್ದು, Voot Select ನಲ್ಲಿ ಇಂದು ಸಿನಿಮಾ ರಿಲೀಸ್ ಆಗಿದೆ. ಸೈಕೋ, ಟಗರು ಸೇರಿದಂತೆ ಕನ್ನಡ ಖ್ಯಾತ ಸಿನಿಮಾಗಳಲ್ಲಿ ನಟಿಸಿರುವ ನಟಿ ಅನಿತಾ ಭಟ್ ಇಂದಿರಾ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಟನೆಯ ಜೊತೆಗೆ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇಂದಿರಾ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದಲೂ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಹಲವು ವರ್ಷಗಳಿಂದಲೂ ಪ್ರೊಡಕ್ಷನ್ ಹೌಸ್ ಮಾಡಬೇಕೆಂಬ ಕನಸು ಇತ್ತು. ಆದರೆ ಯೋಗ ವೆಲ್‌ನೆಸ್ ಸೆಂಟರ್ ಮಾಡಿದ್ರು. ಆದರೆ ಕೋವಿಡ್ ಸಂದರ್ಭದಲ್ಲಿ ಪ್ರೋಡಕ್ಷನ್ ಹೌಸ್‌ವೊಂದು ಆರಂಭಿಸಿದ ಅನಿತಾ ಭಟ್, ಸಿನಿಮಾ ನಿರ್ಮಾಣದ ಕನಸನ್ನು ಸಾಕಾರಗೊಳಿಸಿದ್ದಾರೆ.
ಅನಿತಾ ಭಟ್ ಕ್ರಿಯೇಷನ್ಸ್ ಅಡಿಯಲ್ಲಿ ಈಗಾಗಲೇ ಹಲವು ಸಿನಿಮಾಗಳು ನಿರ್ಮಾಣವಾಗುತ್ತಿದ್ದು, ಯುವ ಪ್ರತಿಭಾನ್ವಿತರಿಗೆ ಅವಕಾಶವನ್ನು ಕಲ್ಪಿಸುತ್ತಿದ್ದಾರೆ. ಬಳೇಪೇಟೆ, ಸಮುದ್ರಂ ಸಿನಿಮಾದ ಬೆನ್ನಲ್ಲೇ ಸೆಟ್ಟೇರಿದ್ದ ಇಂದಿರಾ ಇದೀಗ ಒಟಿಟಿಯಲ್ಲಿ ತೆರೆ ಕಂಡಿದೆ. ಸಿನಿಮಾದಲ್ಲಿ ಪ್ರಜ್ಞಾನಂದ ಸ್ವರೂಪ್ ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ಕಲಾವಿದ ರಿಷಿಕೇಶ್ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಹಾಗೂ ಸಂಕಲದ ಹೊಣೆ ಹೊತ್ತದ್ದಾರೆ. ಸಿನಿಮಾದ ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ. ಮಡಿಕೇರಿಮ ಚಿಕ್ಕಮಗಳೂರು, ಬೆಂಗಳೂರಿನಲ್ಲಿನ ಚಿತ್ರೀಕರಣ ನಡೆದಿದ್ದು, ಸಿನಿಮಾ ಅದ್ಬುತವಾಗಿ ಮೂಡಿಬಂದಿದೆ.
Streaming on @VootSelect
— Anita Bhat (@IamAnitaBhat) July 8, 2022
My first movie as producer
INDIRA is all yours now
Watch and share your reviews with me. #Indira #movie #VOOTSelect pic.twitter.com/9HgLZkGCrK
ಇಂದಿರಾ ಪಾತ್ರಕ್ಕೆ ಅನಿತಾ ಭಟ್ ಜೀವ ತುಂಬಿದ್ದಾರೆ. ಪತಿಯ ಪಾತ್ರದಲ್ಲಿ ಖ್ಯಾತ ನಿರೂಪಕ ರೆಹಮಾನ್ ಹಾಸನ್ ಕಾಣಿಸಿಕೊಂಡಿದ್ದರೆ, ನೀತು, ಶಫಿ, ಚಕ್ರವರ್ತಿ ಚಂದ್ರಚೂಡ್ ಸೇರಿದಂತೆ ಹಲವು ನಟ ನಟಿಯರು ಸಿನಿಮಾದಲ್ಲಿದ್ದಾರೆ. ಓಟಿಟಿಗಾಗಿಯೇ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ಅನಿತಾ ಭಟ್. ಇಂದಿರಾ.. ನಿಜಕ್ಕೂ ಹೆಸರಿನಲ್ಲೇ ಕುತೂಹಲವನ್ನು ಸೃಷ್ಟಿಸಿತ್ತು. ಪಕ್ಕಾ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಆಗಿರೋ ಇಂದಿರಾ ಟೈಟಲ್ ಪೋಸ್ಟರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆಗೊಳಿಸಿ, ಅನಿತಾ ಭಟ್ ಹಾಗೂ ಅವರ ತಂಡಕ್ಕೆ ಶುಭ ಹಾರೈಸಿದ್ದರು.
ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಂಡಿರುವ ಅನಿತಾ ಭಟ್ ಅವರು ಹಳ್ಳಿ ಹುಡುಗಿಯಿಂದ ಗ್ಲಾಮರಸ್ ಪಾತ್ರಗಳಲ್ಲಿಯೂ ಮಿಂಚು ಹರಿಸಿದ್ದಾರೆ. ಆದ್ರೆ ಇಂದಿರಾ ಸಿನಿಮಾದಲ್ಲಿ ಅಪಘಾತದಲ್ಲಿ ಕಣ್ಣು ಕಳೆದುಕೊಂಡ ಅಂಧೆಯ ಬದಕನ್ನು ಸಿನಿಮಾದ ಮೂಲಕ ಹೇಳ ಹೊರಟಿದ್ದಾರೆ. ಅಲ್ಲದೇ ಅನಿತಾ ಭಟ್ ಅವರ ನಟನೆ ಪ್ರೇಕ್ಷಕರ ಗಮನ ಸೆಳೆದಿದೆ. ಸ್ಯಾಂಡಲ್‌ವುಡ್ ನಲ್ಲಿ ನಿರ್ಮಾಪಕಿಯಾಗಿ ಸದಬಿರುಚಿಯ ಸಿನಿಮಾ ನಿರ್ಮಾಣ ಮಾಡಬೇಕೆಂಬ ಅನಿತಾ ಭಟ್ ಅವರ ಕನಸು ಇದೀಗ ಇಂದಿರಾ ಮೂಲಕ ನನಸಾಗಿದೆ. ಇಂದಿರಾ ಸೂಪರ್ ಸಕ್ಸಸ್ ಸಿಗುವ ಮೂಲಕ ಇನ್ನಷ್ಟು ಸಿನಿಮಾಗಳು ಅನಿತಾ ಭಟ್ ನಿರ್ಮಾಣದಲ್ಲಿ ತೆರೆ ಕಾಣಲಿ. ಇನ್ಯಾಕೆ ತಡ ನೀವೂ ಒಮ್ಮೆ ಇಂದಿರಾ ಸಿನಿಮಾ ನೋಡಿ, ಯುವ ತಂಡವನ್ನು ಬೆಂಬಲಿಸಬೇಕಾಗಿದೆ.
ಇದನ್ನೂ ಓದಿ : A2 MUSICನಲ್ಲಿ ಬಿಡುಗಡೆಯಾಗಲಿದೆ ನಟಿ ಅನಿತಾ ಭಟ್ ನಿರ್ಮಾಣದ ಇಂದಿರಾ ಸಿನಿಮಾದ ಹಾಡು
ಇದನ್ನೂ ಓದಿ : ಅನಿತಾ ಭಟ್ ಇಂದಿರಾಗೆ ಜೊತೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
Actress Anita Bhat Produced Movie INDIRA Released On Voot Select