Rashmika Mandanna : ಬಾಲಿವುಡ್ ನಟ ಟೈಗರ್​ ಶ್ರಾಫ್​ಗೆ ಶೀಘ್ರದಲ್ಲಿಯೇ ನಾಯಕಿಯಾಗಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ

Rashmika Mandanna : ಬಾಲಿವುಡ್​ ನಟ ಟೈಗರ್​ ಶ್ರಾಫ್​ ಧರ್ಮ ಪ್ರಾಡಕ್ಷನ್​​ನ ಮತ್ತೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಹೀಗಾಗಿ ಈಗಾಗಲೇ ಅವರು ತಮ್ಮ ಸಿನಿಮಾಗಾಗಿ ತಯಾರಿಯನ್ನು ಆರಂಭಿಸಿದ್ದಾರೆ. ವಿಶೇಷ ಅಂದರೆ ಇದೀಗ ಈ ಸಿನಿಮಾದ ನಾಯಕಿ ಯಾರು ಎಂಬ ವಿಚಾರವಾಗಿ ಬಿ ಟೌನ್​​ನಲ್ಲಿ ಗುಸು ಗುಸು ಆರಂಭವಾಗಿದ್ದು ಮೂಲಗಳ ಪ್ರಕಾರ ಈ ಬಾರಿ ಟೈಗರ್​ ಶ್ರಾಫ್​​ಗೆ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.


ಈ ಸಿನಿಮಾಗೆ ಶಶಾಂಕ್​ ಖೈತಾನ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದು ಟೈಗರ್​ ಶ್ರಾಫ್​ಗೆ ಈ ಬಾರಿ ಹೊಸ ನಾಯಕಿಯನ್ನು ಹುಡುಕಬೇಕು ಎಂದು ಯೋಚಿಸಿದ್ದರಂತೆ ಅದೇ ರೀತಿ ಈ ಸಿನಿಮಾಗೆ ಈ ಬಾರಿ ಟೈಗರ್ ಹಾಗೂ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡೋಣ ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಟೈಗರ್​ ಶ್ರಾಫ್​ ಹಾಗೂ ರಶ್ಮಿಕಾ ಮಂದಣ್ಣ ಶೀಘ್ರದಲ್ಲಿಯೇ ಆ್ಯಕ್ಷನ್​ ಪ್ಯಾಕ್ಡ್​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತ ಹಾಗೂ ವಿದೇಶಗಳಲ್ಲಿ ಸಿನಿಮಾ ಶೂಟಿಂಗ್​ ಮಾಡಲು ಚಿತ್ರತಂಡ ಉದ್ದೇಶಿಸಿದೆ. ಚಿತ್ರದಲ್ಲಿ ಟೈಗರ್​ ಯಂಗ್​ ಹಾಗೂ ಸ್ಪೋರ್ಟಿ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಟೈಗರ್​ ಸಾಕಷ್ಟು ಸಾಹಸ ದೃಶ್ಯಗಳನ್ನು ಪ್ರದರ್ಶಿಸಲಿದ್ದಾರೆ. ಟೈಗರ್​ ಇಲ್ಲಿಯವರೆಗೆ ನಿಭಾಯಿಸಿದ ಎಲ್ಲಾ ಸಿನಿಮಾ ಪಾತ್ರಗಳಿಗಿಂತ ಇದು ವಿಭಿನ್ನವಾಗಿದೆ ಎಂದು ಹೇಳಲಾಗ್ತಿದೆ.


ಇನ್ನೂ ಹೆಸರಿಡದ ಈ ಸಿನಿಮಾದ ಪಾತ್ರಗಳು ಹಾಗೂ ಕತೆಯ ಬಗ್ಗೆ ಚಿತ್ರತಂಡ ಇನ್ನು ಯಾವುದೇ ಹೆಚ್ಚಿನ ವಿವರಗಳನ್ನು ಬಾಯ್ಬಿಟ್ಟಿಲ್ಲ. ಕಳೆದ ಕೆಲವು ತಿಂಗಳಿನಿಂದ ಕರಣ್​ ಜೋಹರ್​ ಕಚೇರಿಯ ಆವರಣಗಳಲ್ಲಿ ಕಾಣಿಸಿಕೊಳ್ತಿದ್ದ ರಶ್ಮಿಕಾ ಮಂದಣ್ಣಗೆ ಇದು ಧರ್ಮ ಪ್ರಾಡಕ್ಷನ್​ನಡಿಯಲ್ಲಿ ಮೊದಲ ಸಿನಿಮಾವಾಗಿದೆ. ನಟಿ ರಶ್ಮಿಕಾ ಪುಷ್ಪಾ : ದಿ ರೂಲ್​ ಹಾಗೂ ಇನ್ನೂ ಹೆಸರಿಡದ ಈ ಬಾಲಿವುಡ್​ನ ಸಿನಿಮಾದ ಶೂಟಿಂಗ್​ನಲ್ಲಿ ಸಧ್ಯದಲ್ಲೇ ಬ್ಯುಸಿಯಾಗಲಿದ್ದಾರೆ . ಇತ್ತ ಟೈಗರ್​ ಶ್ರಾಫ್​ ವಿಕಾಸ್​ ಬಹ್ಲ್​ ನಿರ್ದೇಶನದ ಗಣಪತ್​ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇದು ಡಿಸೆಂಬರ್​ ತಿಂಗಳಲ್ಲಿ ರಿಲೀಸ್​ ಆಗಲಿದೆ.

ಇದನ್ನು ಓದಿ : Petrol will be banned : ದೇಶದಲ್ಲಿ ಶೀಘ್ರದಲ್ಲೇ ಪೆಟ್ರೋಲ್​ಗೆ ನಿಷೇಧ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಹೇಳಿಕೆ

ಇದನ್ನೂ ಓದಿ : ಬ್ಯಾಟಿಂಗ್ ದಿಗ್ಗಜನ ಮಹಾಪತನ, 6 ವರ್ಷಗಳಲ್ಲಿ ಮೊದಲ ಬಾರಿ ಟಾಪ್-10ನಿಂದ ವಿರಾಟ್ ಕೊಹ್ಲಿ ಔಟ್ !

Rashmika Mandanna teams up with Tiger Shroff on Shashank Khaitan’s next – Karan Johar to produce

Comments are closed.