Actress Bipasha Basu : ಸದಾ ತಮ್ಮ ಹಾಟ್ ಲುಕ್ ಹಾಗೂ ಮಾದಕ ನೋಟ, ಬೋಲ್ಡ್ ಪಾತ್ರದಿಂದಲೇ ಗಮನ ಸೆಳೆದ ನಟಿ ಬಿಪಾಷಾ ಬಸು ಸದ್ಯ ಬದುಕಿನ ಹೊಸ ಅಧ್ಯಾಯವೊಂದಕ್ಕೆ ಅಣಿಯಾಗುತ್ತಿದ್ದಾರೆ. ಚೊಚ್ಚಲ ತಾಯ್ತನಕ್ಕೆ ಸಿದ್ಧವಾಗ್ತಿರೋ ಬಿಪಾಷಾ ಬಸು ಬೇಬಿ ಬಂಪ್ ಪೋಟೋ ಶೂಟ್ ನಲ್ಲೂ ಮಾದಕ ಮೈಮಾಟ ತೋರಿಸೋ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ. ತಮ್ಮ ಕಿಲ್ಲಿಂಗ್ ಲುಕ್ ಹಾಗೂ ಹಾಟ್ ಆ್ಯಂಡ್ ಬೋಲ್ಡ್ ಪಾತ್ರಗಳ ಮೂಲಕ ಬಾಲಿವುಡ್ ನಲ್ಲಿ ಮಿಂಚಿದ್ದ ಹಾಗೂ ವಿಶೇಷವಾಗಿ ಪಡ್ಡೆ ಹೈಕಳ ಹೃದಯ ಗೆದ್ದಿದ್ದ ನಟಿ ಬಿಪಾಷಾ ಬಸು (Actress Bipasha Basu)ಸದ್ಯ ಮುದ್ದಾದ ಮಗುವಿನ ನೀರಿಕ್ಷೆಯಲ್ಲಿದ್ದಾರೆ.
ಈಗಾಗಲೇ ತಾವು ತಾಯಿಯಾಗ್ತಿರೋ ಸಿಹಿಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ ನಟಿ ಬಿಪಾಷಾ ಬಸು(Actress Bipasha Basu), ಹಲವಾರು ಭಾರಿ ಪತಿ ಜೊತೆ ಬೇಬಿ ಬಂಪ್ ಹೊತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಿಂಚಿದ್ದಾರೆ. ಇನ್ನೇನು ತಾಯ್ತನದ ಕೊನೆ ಹಂತದಲ್ಲಿರೋ ಬಿಪಾಷಾಗೆ ಈಗಾಗಲೇ ಅದ್ದೂರಿ ಸೀಮಂತ ಶಾಸ್ತ್ರವನ್ನು ಪತಿ ಹಾಗೂ ತವರಿನವರು ನೆರವೇರಿಸಿದ್ದಾರೆ. ಇದರ ಮಧ್ಯೆಯೇ ನಟಿ ಬಿಪಾಷಾ 40 ರಲ್ಲೂ ಕುಂದದ ತಮ್ಮ ಮಾದಕ ಸೌಂದರ್ಯದ ಜೊತೆ ಬೇಬಿ ಬಂಪ್ ಪೋಟೋ ಮಾಡಿಸಿದ್ದು ಪೋಟೋಗಳು ಬಾಲಿವುಡ್ ಸೋಷಿಯಲ್ ಮೀಡಿಯಾಕ್ಕೆ ಕಿಚ್ಚು ಹಚ್ಚಿದೆ.
ಇದನ್ನೂ ಓದಿ : Jugalbandi Movie:ಜುಗಲ್ ಬಂದಿ’ ಮೊದಲ ಹಾಡು ಬಿಡುಗಡೆ- ವೈಕಂ ವಿಜಯಲಕ್ಷ್ಮಿ ದನಿಯಲ್ಲಿ ‘ಇಂಥವರ ಸಂತಾನ ಭಾಗ್ಯ’ ಹಾಡು
ಗೋಲ್ಡನ್ ಕಲರ್ ಒಫನ್ ಗೌನ್‌ನನ್ನು ಎದೆ ಭಾಗಕ್ಕೆ ಸುತ್ತಿಕೊಂಡು ಬೇಬಿ ಬಂಪ್ ತೋರುತ್ತ ಜೊತೆಗೆ ನೀಳಕಾಲುಗಳನ್ನು ಪ್ರದರ್ಶಿಸುತ್ತ ಬಿಪಾಷಾ ಪೋಟೋಗಳಿಗೆ ಪೋಸ್ ನೀಡಿದ್ದಾರೆ. ಮಾತ್ರವಲ್ಲ ತಿಳಿ ಗುಲಾಬಿ ಬಣ್ಣ ಹಾಫ್ ಸ್ಕರ್ಟ್ ಗೌನ್ ಮಾದರಿಯ ಡ್ರೆಸ್ ನಲ್ಲೂ ಬಿಪಾಷಾ ಬೇಬಿ ಬಂಪ್ ಜೊತೆ ಪೋಟೋ ಕ್ಲಿಕ್ಕಿಸಿಕೊಂಡಿದ್ದು ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಪೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. MomToBeVibes ಎಂಬ ಕ್ಯಾಪ್ಸನ್ ಜೊತೆ ಬಿಪಾಷಾ ತಮ್ಮ ಪೋಟೋಗಳನ್ನು ಹಂಚಿಕೊಂಡಿದ್ದು, ಲಕ್ಷಾಂತರ ಜನರು ಲೈಕ್ಸ್ ಒತ್ತಿದ್ದರೇ ಬಾಲಿವುಡ್ ನಟ-ನಟಿಯರು ಶುಭಹಾರೈಸಿದ್ದಾರೆ.
Bipasha Basu on Instagram: “❤️🧿🙏 #loveyourself #mamatobe #loveyourbody #grateful #blessed”
ಇದನ್ನೂ ಓದಿ : Aditi Prabhudev: ‘ಯಶಸ್ವಿ’ ಕಾಫಿ ಎಸ್ಟೇಟ್ ನ ಒಡತಿ ಆಗಲಿದ್ದಾರೆ ಅದಿತಿ ಪ್ರಭುದೇವ್..
ಇದನ್ನೂ ಓದಿ : Kantara Hindi Box Office Collections : ಕಾಂತಾರ ಹಿಂದಿ ಬಾಕ್ಸಾಫೀಸ್ ದಾಖಲೆ : ಹೊಸ ಮೈಲಿಗಲ್ಲು ಸೃಷ್ಟಿಸಿದ ರಿಷಬ್ ಶೆಟ್ಟಿ
ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಬಿಪಾಷಾ ಬಸು, 2016 ರಲ್ಲಿ ತಮ್ಮ ಬಹುಕಾಲದ ನಟ ಕರಣ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಬಿಪಾಸಾ ತಮ್ಮ ಪ್ರಗೆನ್ಸಿ ವಿಚಾರವನ್ನು ಹಂಚಿಕೊಂಡಿದ್ದು, ಡಿಸೆಂಬರ್ ನಲ್ಲಿ ಬಿಪಾಷಾ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ನೀರಿಕ್ಷಿಸಲಾಗುತ್ತಿದೆ.
Actress Bipasha Basu: Actress Bipasha Basu, who has always attracted attention with her hot look and sexy look, bold character, is currently entering a new chapter in her life. Bipasha Basu, who is ready for her first motherhood, surprised her fans by showing off her sexy body in the baby bump photo shoot. Actress Bipasha Basu, who shone in Bollywood with her killing looks and hot and bold roles and especially won the heart of Padde Haik, is currently expecting a cute baby.