CM Basavaraj Bommai : ಸಂಪುಟ ರಚನೆ ಸರ್ಕಸ್ : ಮತ್ತೆ ದೆಹಲಿಗೆ ಹೊರಟ ಬೊಮ್ಮಾಯಿ

ಬೆಂಗಳೂರು : (CM Basavaraj Bommai)ರಾಜ್ಯ ಬಿಜೆಪಿಯಲ್ಲಿ ಸದಾ ಸದ್ದು ಮಾಡುವ ಸಿಎಂ ದೆಹಲಿ ಪ್ರಯಾಣ ಮತ್ತೊಮ್ಮೆ ಸುದ್ದಿಯಲ್ಲಿದೆ. ಇನ್ನೇನು ಚುನಾವಣೆಗೆ ದಿನಗಣನೆ ಹಂತದಲ್ಲಿ ಇರುವಾಗಲೇ ಮತ್ತೊಮ್ಮೆ ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಸಚಿವ(CM Basavaraj Bommai) ಸ್ಥಾನಾಕಾಂಕ್ಷಿಗಳ ಎದೆಯಲ್ಲಿ ಮತ್ತೊಮ್ಮೆ ಆಶಾಭಾವನೆ ಮೂಡಲು ಆರಂಭಿಸಿದೆ. ಮೂಲಗಳ ಮಾಹಿತಿ ಪ್ರಕಾರ ಸಿಎಂ ಬಸವರಾಜ್ ಬೊಮ್ಮಾಯಿ ಶನಿವಾರ ಮಧ್ಯಾಹ್ನದ ವೇಳೆಗೆ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಬಸವರಾಜ್ ಬೊಮ್ಮಾಯಿ ದೆಹಲಿಯಲ್ಲಿನ ಹೈಕಮಾಂಡ್ ಪ್ರಧಾನಿ ನರೇಂದ್ರ್ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಸಮಯ ಕೇಳಿದ್ದಾರಂತೆ. ಒಂದೊಮ್ಮೆ ಹೈಕಮಾಂಡ್ ನಾಯಕರ ಅನುಮತಿ ಸಿಕ್ಕಲ್ಲಿ ಬೊಮ್ಮಾಯಿ ಶನಿವಾರ ಮಧ್ಯಾಹ್ನ ದೆಹಲಿಗೆ ಹಾರಲಿದ್ದು ಭಾನುವಾರ ವರಿಷ್ಠರನ್ನುಭೇಟಿ ಮಾಡಲಿದ್ದಾರಂತೆ.

ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ಮಾಡಲಿದ್ದಾರೆ. ಈ ಭೇಟಿಯ ಕುರಿತು ಚರ್ಚೆಯ ನೆಪದಲ್ಲಿ ಬೊಮ್ಮಾಯಿ ದೆಹಲಿಗೆ ತೆರಳುತ್ತಿದ್ದಾರೆ. ಆದರೆ ಸಿಎಂ ದೆಹಲಿ ಭೇಟಿಯ ಅಸಲಿ ಕಾರಣ ಸಂಪುಟ ವಿಸ್ತರಣೆ(CM Basavaraj Bommai)ಯ ಕುರಿತು ಚರ್ಚೆ ಎಂದು ಹೇಳಲಾಗುತ್ತಿದೆ. ಚುನಾವಣೆ ಹೊತ್ತಿನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರ ಬಂಡಾಯದ ಭೀತಿ ಎದುರಾಗಿದೆ. ಸ್ವಲ್ಪ ಸಮಯದ ಅವಧಿಗಾದರೂ ಶಾಸಕರು ಸಚಿವರಾದರೇ ಅವರ ಚುನಾವಣೆಯ ಹುಮ್ಮಸ್ಸು ಹೆಚ್ಚಲಿದೆ. ಹೀಗಾಗಿ ಖಾಲಿ ಇರುವ ಸಚಿವ ಸ್ಥಾನವನ್ನು ತುಂಬುವಂತೆ ಬೊಮ್ಮಾಯಿ ವರಿಷ್ಠರಿಗೆ ಮನವಿ ಮಾಡಿದ್ದಾರಂತೆ.

ಇದನ್ನೂ ಓದಿ : ವಿಧಾನಸಭಾ ಚುನಾವಣೆ 2023 : ಕಾಪು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ Vs ರಾಜಶೇಖರ ಕೋಟ್ಯಾನ್ ಫೈಟ್

ಬೊಮ್ಮಾಯಿ ಈ ಬೇಡಿಕೆಗೆ ಹೈಕಮಾಂಡ್ ಅಸ್ತು ಎಂದಿರುವ ಕಾರಣ ಬೊಮ್ಮಾಯಿ ಸಚಿವ ಸ್ಥಾನಾಕಾಂಕ್ಷಿತರ ಪಟ್ಟಿ ಹೊತ್ತು ದೆಹಲಿಗೆ ತೆರಳುತ್ತಿದ್ದಾರಂತೆ‌. ಈ ಮಧ್ಯೆ ರಾಜ್ಯದಲ್ಲಿ ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡವೂ ಹೆಚ್ಚಿದ್ದು ಎಲ್ಲರೂ ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ. ಇತ್ತೀಚಿಗಷ್ಟೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನದ ನೀರಿಕ್ಷೆಯೊಂದಿಗೆ ಸಿಎಂ ಭೇಟಿ ಮಾಡಿದ್ದರು.

ಇದನ್ನೂ ಓದಿ : Bombay Team : ಕಾಂಗ್ರೆಸ್ ಯಾರಾದ್ರೂ ಬರಬಹುದು: ಪರೋಕ್ಷವಾಗಿ ಬಾಂಬೇ ಟೀಂ ಆಹ್ವಾನಿಸಿದ್ರಾ ಡಿಕೆಶಿ?!

ಇದನ್ನೂ ಓದಿ : D.K.Shivkumar: ಡಿಕೆಶಿಗೆ ಬಿಗ್ ರಿಲೀಫ್: ತನಿಖೆ ಕೈಬಿಡುವಂತೆ ಇ.ಡಿಗೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್

ಅವರೆಲ್ಲರಿಗೂ ಸಿಎಂ ಸಂಪುಟ ವಿಸ್ತರಣೆಯಾಗಲಿದೆ ಹಾಗೂ ನೀವೆಲ್ಲರೂ ಸಚಿವರಾಗಲಿದ್ದೀರಿ ಎಂದು ಭರವಸೆ ನೀಡಿದ್ದಾರೆ ಎನ್ನಲಾಗ್ತಿದೆ.ಹೀಗಾಗಿ ಎಲ್ಲರ ನೀರಿಕ್ಷೆಯೂ ಬೊಮ್ಮಾಯಿ ಮೇಲಿದ್ದು, ಸಿಎಂ ದೆಹಲಿ ಭೇಟಿ ಮತ್ತೊಮ್ಮೆ ಬಿಜೆಪಿ ವಲಯದಲ್ಲಿ ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ಈಗಾಗಲೇ ಹತ್ತಾರು ಭಾರಿ ಇಂತಹದೊಂದು ಚರ್ಚೆ ಬಿಜೆಪಿ ವಲಯದಲ್ಲಿ ಕಾವೇರಿ ತಣ್ಣಗಾಗಿದ್ದು, ಈ ಭಾರಿಯೂ ಹೈಕಮಾಂಡ್ ಬೊಮ್ಮಾಯಿ ಭಿನ್ನಹಕ್ಕೆ ಮಣ್ಣನೆ ನೀಡೋದು ಅನುಮಾನ ಎಂದೇ ಹೇಳಲಾಗ್ತಿದೆ

(CM Basavaraj Bommai) CM’s trip to Delhi, which is always making noise in the state BJP, is in the news again. CM Bommai will once again travel to Delhi while counting the days for the next election, and hope has once again started rising in the chests of the aspirants of the minister (CM Basavaraj Bommai). According to sources, CM Basavaraj Bommai will leave for Delhi on Saturday afternoon.

Comments are closed.