Dhanya Ramkumar : ಚಂದನವನಕ್ಕೆ ದೊಡ್ಮನೆ ಎನ್ನಿಸಿಕೊಂಡ ಡಾ.ರಾಜ್ ಕುಮಾರ್ ಕುಟುಂಬ ಕಲಾಸೇವೆಯಲ್ಲಿ ದಶಕಗಳಿಂದ ತೊಡಗಿಕೊಂಡಿದೆ. ಮೂರು ತಲೆಮಾರಿನ ಮಂದಿ ಸ್ಯಾಂಡಲ್ ವುಡ್ ನಲ್ಲಿ ಜನಮನಗೆದ್ದಿದ್ದಾರೆ. ಆದರೆ ಇಂಥ ದೊಡ್ಮನೆಯಿಂದ ಸ್ಯಾಂಡಲ್ ವುಡ್ ಗೆ ಬಂದ ಏಕೈಕ ನಾಯಕ ನಟಿ ಧನ್ಯ ರಾಮ್ ಕುಮಾರ್. ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಧನ್ಯಾ ರಾಮ್ ಕುಮಾರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು ಇಲ್ಲಿವೆ ಓದಿ.

ನಟ ರಾಮ್ ಕುಮಾರ್ ಪ್ರತಿಭಾನ್ವಿತ ನಟ. ಆದರೆ ಅಂದುಕೊಂಡಷ್ಟು ಯಶಸ್ಸು ನಟನೆಯಲ್ಲಿ ರಾಮ್ ಕುಮಾರ್ ಗೆ ಸಿಗಲಿಲ್ಲ. ಹೀಗಾಗಿ ನಟನೆ ಬಿಟ್ಟ ರಾಮ್ ಕುಮಾರ್ ವೈಯಕ್ತಿಕ ಬದುಕಿನಲ್ಲಿ ಡಾ.ರಾಜ್ ಕುಮಾರ್ ಕುಟುಂಬದ ಅಳಿಯನಾದ್ರು. ಹೀಗಾಗಿ ನಟನೆಯಲ್ಲಿ ಇಲ್ಲದೇ ಇದ್ದರೂ ದೊಡ್ಮನೆಯ ಭಾಗವಾದ್ರು. ಇಂಥಹ ಸುರದ್ರೂಪಿ ನಟ ರಾಮ್ ಕುಮಾರ್ ಪುತ್ರಿಯೇ ಧನ್ಯಾ ರಾಮ್ ಕುಮಾರ್. ನಟನೆಯನ್ನು ರಕ್ತದಲ್ಲೇ ಹೊತ್ತು ಬಂದ ಧನ್ಯಾ ನೋಡೋಕೆ ಅಪ್ಪಟ ಬಾಲಿವುಡ್ ಬೆಡಗಿಯರನ್ನು ಮೀರಿಸಬಲ್ಲ ಸುಂದರಿ.

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಹಲವು ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ನಟಿ ಧನ್ಯಾ 26 ನೇ ವರ್ಷದ ಸಂಭ್ರಮದಲ್ಲಿದ್ದಾರೆ.ನಿನ್ನ ಸನಿಹಕೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಧನ್ಯಾ ಮೊದಲ ಸಿನಿಮಾದಲ್ಲೇ ಸಾಕಷ್ಟು ಭರವಸೆ ಮೂಡಿಸಿದರು. ಧನ್ಯಾ ಮೊದಲ ಸಿನಿಮಾ ರಿಲೀಸ್ ಆದಾಗ ನಟ ಪುನೀತ್ ರಾಜ್ ಕುಮಾರ್ ಬದುಕಿದ್ದರು. ಸೋದರ ಸೊಸೆಯ ಸಿನಿಮಾ ನೋಡಿ ಪುನೀತ್ ಕೂಡ ಶ್ಲಾಘಿಸಿದ್ದರು.
ಇದನ್ನೂ ಓದಿ : ಕ್ರಿಸ್ಮಸ್ ಗಾಗಿ ಕೈಯಾರೆ ಕೇಕ್ ಸಿದ್ಧಪಡಿಸಿದ ಮೇಘನಾ ರಾಜ್ : ರಾಯನ್ ರಾಜ್ ಸರ್ಜಾಗೆ ಗೂಗಲ್ ಮಮ್ಮಿ ಸ್ಪೆಶಲ್ ಗಿಫ್ಟ್

ನಿನ್ನ ಸನಿಹಕೇ ಸಿನಿಮಾದ ಬಳಿಕ ಧನ್ಯಾ, ಕಾಲಾಪತ್ಥರ್, ಹೈಡ್ ಆಂಡ್ ಸೀಕ್ ಮತ್ತು ದ ಜಡ್ಡಮೆಂಟಲ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಹಾಗೇ ನೋಡಿದ್ರೇ ಸ್ಯಾಂಡಲ್ ವುಡ್ ಗೆ ಡಾ.ರಾಜ್ ಕುಮಾರ್ ಮೊಮ್ಮಕ್ಕಳು ಹಲವರು ಬಂದಿದ್ದಾರೆ. ಡಾ.ಶಿವ ರಾಜ್ ಕುಮಾರ್ ಪುತ್ರಿ ನಿವೇದಿತಾ ಕೂಡ ಬಾಲನಟಿಯಾಗಿ ಶಿವರಾಜ್ ಕುಮಾರ್ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಬಹುಕಾಲ ನಟನೆಯಲ್ಲಿ ನಿವೇದಿತಾ ಮುಂದುವರೆಯಲಿಲ್ಲ.

ಇದನ್ನೂ ಓದಿ : ರಮ್ಯ ಸ್ಪೆಶಲ್ ಬರ್ತಡೇ: ಸ್ಯಾಂಡಲ್ ವುಡ್ ಕ್ವೀನ್ ಗೆ ಜೊತೆಯಾದ ವಿನಯ್ ರಾಜ್ ಕುಮಾರ್
ಈಗ ರಾಘವೇಂದ್ರ ರಾಜ್ ಕುಮಾರ್ ಪುತ್ರರು ಹಾಗೂ ರಾಮ್ ಕುಮಾರ್ ಪುತ್ರಿ ಧನ್ಯಾ ಮತ್ತು ಪುತ್ರ ಧಿರೇನ್ ನಟನೆಯಲ್ಲಿ ಮುಂದುವರೆದಿದ್ದಾರೆ. ಈ ಪೈಕಿ ನಟಿ ಧನ್ಯಾ ಕೇವಲ ನಟನೆ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿದ್ದು ಸಖತ್ ಫಾಲೋವರ್ಸ್ ಹೊಂದಿದ್ಸಾರೆ. ಪ್ರವಾಸ ಪ್ರಿಯೆಯಾಗಿರೋ ನಟಿ ಧನ್ಯಾ ಸದಾ ಬೇರೆ ಪ್ರವಾಸಿ ತಾಣಗಳಿಗೆ, ದೇಶಗಳಿಗೆ ಪ್ರವಾಸಕ್ಕೆ ಹೋಗುತ್ತಲೇ ಇರುತ್ತಾರೆ.

ಇದನ್ನೂ ಓದಿ : ಅಬ್ಬಬ್ಬಾ… ಬಿಗ್ಬಾಸ್ ಮನೆಯಲ್ಲೇ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡ ಸ್ಪರ್ಧಿ
ಮಾತ್ರವಲ್ಲ ತಮ್ಮ ಟ್ರಿಪ್ ನ ಪೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಸಖತ್ ಮಾರ್ಡನ್ ಕೂಡ ಆಗಿರೋ ಧನ್ಯಾ ಹಾಟ್ ಹಾಟ್ ಪೋಸ್ ಕೊಡೋದನ್ನು ಮರೆಯೋದಿಲ್ಲ. ಅವರ ಇನ್ ಸ್ಟಾಗ್ರಾಂನಲ್ಲಿ ಧನ್ಯಾ ನಾನಾ ಅವತಾರದ ಪೋಟೋಗಳಿದ್ದು ಬರೋಬ್ಬರಿ ಒಂದೂವರೆ ಲಕ್ಷ ಜನ ಫಾಲೋವರ್ಸ್ ಇದ್ದಾರೆ.
ವರ್ಕೌಟ್,ಪೋಟೋಶೂಟ್ ಹೀಗೆ ಸಖತ್ ಪೋಟೋಗಳು ಧನ್ಯಾ ಅಭಿಮಾನಿಗಳ ಕಣ್ಮನ ಸೆಳೆಯುತ್ತಿದೆ. ಸದ್ಯ ಶೂಟಿಂಗ್ ನಡುವೆಯೂ ಬರ್ತಡೇ ಆಚರಿಸಿ ಕೊಳ್ತಿರೋ ಧನ್ಯಾಗೆ ಪಿಆರ್ ಕೆ ಪ್ರೊಡಕ್ಷನ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ನಟ-ನಟಿಯರು ಶುಭಹಾರೈಸಿದ್ದಾರೆ.
Actress Dhanya Ramkumar Happy Birthday wishes Sandalwood