ಕ್ರಿಸ್ಮಸ್ ಗಾಗಿ ಕೈಯಾರೆ ಕೇಕ್ ಸಿದ್ಧಪಡಿಸಿದ ಮೇಘನಾ ರಾಜ್ : ರಾಯನ್‌ ರಾಜ್ ಸರ್ಜಾಗೆ ಗೂಗಲ್ ಮಮ್ಮಿ ಸ್ಪೆಶಲ್ ಗಿಫ್ಟ್

Meghana Raj Sarja  : ಬಹುಭಾಷಾ ನಟಿ ಮೇಘನಾ ರಾಜ್ ಸರ್ಜಾ ಸದ್ಯ ತತ್ಸಮ ತದ್ಭವ ಗೆಲುವಿನ ಖುಷಿಯಲ್ಲಿ ಹೊಸತೊಂದು ಸಿನಿಮಾಕ್ಕೆ ಸಜ್ಜಾಗಿದ್ದಾರೆ. ಫರ್ಪೆಕ್ಟ್ ಮಮ್ಮಿ ಜೊತೆ ಯೂಟ್ಯೂಬರ್ ಕೂಡಾ ಆಗ್ತಿದ್ದಾರೆ. ಸದ್ಯ ಕ್ರಿಸ್ಮಸ್ (Christmas ) ಹೊಸ್ತಿಲಿನಲ್ಲಿ ಮೇಘನಾ ಟೇಸ್ಟಿ ಪ್ಲಂ ಕೇಕ್ ಜೊತೆ ಪ್ರೇಕ್ಷಕರಿಗೆ ಸಪ್ರೈಸ್ ನೀಡಿದ್ದಾರೆ.

Meghana Raj Sarja  : ಬಹುಭಾಷಾ ನಟಿ ಮೇಘನಾ ರಾಜ್ ಸರ್ಜಾ ಸದ್ಯ ತತ್ಸಮ ತದ್ಭವ ಗೆಲುವಿನ ಖುಷಿಯಲ್ಲಿ ಹೊಸತೊಂದು ಸಿನಿಮಾಕ್ಕೆ ಸಜ್ಜಾಗಿದ್ದಾರೆ. ಮಾತ್ರವಲ್ಲ ಶೂಟಿಂಗ್ ಬಿಡುವಿನಲ್ಲಿ ಮಗ ಹಾಗೂ ತಮ್ಮ ಯೂ ಟ್ಯೂಬ್ ಬ್ಲಾಗ್ ಗಳಿಗಾಗಿ ಸಮಯ ಮೀಸಲಿರಿಸಿ ಫರ್ಪೆಕ್ಟ್ ಮಮ್ಮಿ ಜೊತೆ ಯೂಟ್ಯೂಬರ್ ಕೂಡಾ ಆಗ್ತಿದ್ದಾರೆ. ಸದ್ಯ ಕ್ರಿಸ್ಮಸ್ (Christmas ) ಹೊಸ್ತಿಲಿನಲ್ಲಿ ಮೇಘನಾ ಟೇಸ್ಟಿ ಪ್ಲಂ ಕೇಕ್ ಜೊತೆ ಪ್ರೇಕ್ಷಕರಿಗೆ ಸಪ್ರೈಸ್ ನೀಡಿದ್ದಾರೆ.

ಬಿಡುವಿಲ್ಲದ ರಿಯಾಲಿಟಿ ಶೋದ ಮೂಲಕ ತಮ್ಮ ನೋವಿನ ಜೀವನದಿಂದ ಕ್ಯಾಮರಾ ಎದುರು ಬಂದ ಮೇಘನಾ ಸರ್ಜಾ, ಅಲ್ಲಿಂದ ನಿಧಾನವಾಗಿ ಜಾಹೀರಾತು ಹಾಗೂ ಸಿನಿಮಾ ಕ್ಷೇತ್ರಕ್ಕೆ ಮರಳಿದರು. ಇದೆಲ್ಲದರ ಜೊತೆಗೆ ನಟಿ ಮೇಘನಾ ಸರ್ಜಾ, ತಮ್ಮ ಬದುಕಿನ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡೋದಿಕ್ಕೆ ಹಾಗೂ ಮಗನ ಜೊತೆಗಿನ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳೋದಿಕ್ಕೆ ಅಂತ ಯೂ ಟ್ಯೂಬ್ ಚಾನೆಲ್ ಕೂಡ ತೆರೆದಿದ್ದಾರೆ.

Meghana Raj Sarja made a handmade cake for Christmas Google Mummy special gift for Rayan Raj Sarja
Image Credit : Meghanaraj Instagram

ಮೇಘನಾ ಸರ್ಜಾ , ಮೇಘನಾ ರಾಜ್ ಹೆಸರಿನಲ್ಲಿ ಆರಂಭಿಸಿದ ಯೂ ಟ್ಯೂಬ್ ಚಾನೆಲ್ ನಲ್ಲಿ ಈಗಾಗಲೇ ಹಲವಾರು ವಿಡಿಯೋ ಹಂಚಿಕೊಂಡಿದ್ದಾರೆ. ಮೇಕಪ್, ಹೋಂ ಟೂರ್, ರೂಂ ಟೂರ್, ಬ್ಯಾಗ್ ಕಲೆಕ್ಷನ್ ಹೀಗೆ ಎಲ್ಲ ರೀತಿಯ ಅಪ್ಡೇಟ್ ಗಳನ್ನು ತಮ್ಮ ಯೂಟ್ಯೂಬ್ ನಲ್ಲಿ ನೀಡುತ್ತಲೇ ಬಂದಿದ್ದಾರೆ.

ಇದನ್ನೂ ಓದಿ :ಬಿಗ್​​​ಬಾಸ್ ನನ್ನ ಪತಿಗೆ ಮೋಸ ಮಾಡಿಬಿಟ್ರು : ಹೀಗ್ಯಾಕ್​ ಅಂದ್ರು ವಿನಯ್​ ಪತ್ನಿ ಅಕ್ಷತಾ..?

ಸದ್ಯ ಕ್ರಿಸ್ಮಸ್ ಸಮೀಪಿಸಿದ್ದು ದೀಪಾವಳಿ,ಗಣೇಶ ಚತುರ್ಥಿಯಂತೆ ಮೇಘನಾ ರಾಜ್ ಸರ್ಜಾ ಮನೆಯಲ್ಲಿ ಕ್ರಿಸ್ಮಸ್ ನ್ನು ಕೂಡ ಸಂಭ್ರಮದಿಂದ ಆಚರಿಸಲಾಗುತ್ತದೆ. ಮೇಘನಾ ಸರ್ಜಾ ತಾಯಿ ಹಾಗೂ ರಾಯನ್ ರಾಜ್ ಸರ್ಜಾ ಅಜ್ಜಿ ಪ್ರಮೀಳಾ ಜೋಷಾಯ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು.

ಅವರು ಹಾಗೂ ಹಿರಿಯ ನಟ ಸುಂದರ್ ರಾಜ್ ಪ್ರೀತಿಸಿ ಮದುವೆಯಾಗಿದ್ದರಿಂದ ಅವರ ಮನೆಯಲ್ಲಿ ಕ್ರಿಶ್ಚಿಯನ್ ಹಾಗೂ ಹಿಂದೂ ಧರ್ಮದ ಎಲ್ಲ ಹಬ್ಬಗಳನ್ನು ಧಾರ್ಮಿಕ ಶೃದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಹೀಗಾಗಿ ಈಗಾಗಲೇ ಮೇಘನಾ ಸರ್ಜಾ ತವರು ಹಾಗೂ ಪ್ರಮೀಳಾ-ಸುಂದರ ರಾಜ್ ಮನೆಯಲ್ಲಿ ಕ್ರಿಸ್ಮಸ್ ಗೆ ಭವ್ಯವಾದ ಸಿದ್ಧತೆ ನಡೆದಿದೆ.

ಇದನ್ನೂ ಓದಿ : ಶ್ರೀನಗರ ಕಿಟ್ಟಿ ಜೊತೆ ಮೇಘನಾ ಸರ್ಜಾ: ಸೆಟ್ಟೇರಿದ ಹೊಸ ಸಿನಿಮಾ ಅಮರ್ಥ

ಸ್ವತಃ ಮೇಘನಾ ರಾಜ್ ಮನೆಯನ್ನು ಶೃಂಗರಿಸೋ ಕೆಲಸದಲ್ಲಿ ತೊಡಗಿಕೊಂಡಿದ್ದು ಮನೆಯ ಹಾಲ್ ಗಳಿಗೆ, ಗೋಡೆಗಳಿಗೆ ಕ್ರಿಸ್ಮಸ್ ಮಾಲೆಗಳು,ಟ್ರೀ ಹೀಗೆ ಎಲ್ಲ ಅಲಂಕಾರಿಕ ವಸ್ತು,ಲೈಟ್ ಅಳವಡಿಸಿ ಮನೆಗೆ ಕ್ರಿಸ್ಮಸ್‌ಕಳೆ ತರಲಾಗಿದೆ. ಇದರ ಜೊತೆಗೆ ತಮ್ಮ ಪುತ್ರ ರಾಯನ್ ರಾಜ್ ಸರ್ಜಾಗಾಗಿ ನಟಿ ಮೇಘನಾ ತಾವೇ ಕೈಯಾರೇ ಪ್ಲಮ್ ಕೇಕ್ ಸಿದ್ಧಪಡಿಸಿದ್ದಾರೆ.

Meghana Raj Sarja made a handmade cake for Christmas Google Mummy special gift for Rayan Raj Sarja
Image Credit : Meghanaraj Instagram

ರಾಯನ್ ರಾಜ್ ಸರ್ಜಾಗೆ ಮೇಘನಾ ಕೈಯ್ಯಾರೆ ಮಾಡಿರೋ ಕೇಕ್ ಇಷ್ಟವಂತೆ ಅದಕ್ಕಾಗಿ ಕ್ರಿಸ್ಮಸ್ ನೆಪದಲ್ಲಿ ಮೇಘನಾ ಮಗನಿಗಾಗಿ ಟೇಸ್ಟಿ ಕೇಕ್ ಮಾಡಿ ತಿನ್ನಿಸಿದ್ದಾರೆ. ಅಷ್ಟೇ ಅಲ್ಲ ಮೇಘನಾ ತಾವು ಕೈಯ್ಯಾರೆ ಕೇಕ್ ಮಾಡಿರೋದು ಹೇಗೆ ಅನ್ನೋದನ್ನು ವಿಡಿಯೋದ ಮೂಲಕ ಯೂಟ್ಯೂಬ್ ಗೆ ಅಪ್ಲೋಡ್ ಮಾಡಲು ಸಿದ್ಧವಾಗಿದ್ದಾರೆ.

ಇದನ್ನೂ ಓದಿ : ಶೂಟಿಂಗ್ ಮುಗಿಸಿದ ‘ಝೀಬ್ರಾ : ಶೀಘ್ರದಲ್ಲೇ ತೆರೆಗೆ ಡಾಲಿ-ಸತ್ಯದೇವ್ ಕಾಂಬಿಷೇನ್‌ ಸಿನಿಮಾ

ಕೇಕ್ ಮೇಕಿಂಗ್ ವಿಡಿಯೋ ಶೇರ್ ಮಾಡೋದಾಗಿ ನಟಿ ಮೇಘನಾ ಸರ್ಜಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು ಅಭಿಮಾನಿಗಳು ಖುಷಿಯಿಂದ ವಿಡಿಯೋ ಬೇಗ ಶೇರ್ ಮಾಡಿ ಲಿಂಕ್ ಕೊಡಿ ಎಂದು ಕಮೆಂಟ್ ಮಾಡ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಶ್ರೀನಗರ ಕಿಟ್ಟಿ ಜೊತೆ ಹೊಸ ಸಿನಿಮಾ ಶೂಟಿಂಗ್ ಆರಂಭಿಸಿರೋ ಮೇಘನಾ ಯೂಟ್ಯೂಬ್ ವಿಡಿಯೋ ಹಾಗೂ ಬ್ಲಾಗ್ ಗಳ ಮೂಲಕ ಪ್ರೇಕ್ಷಕರು ಮತ್ತು ಅಭಿಮಾನಿಗಳಿಗೂ ಹತ್ತಿರವಾಗ್ತಿದ್ದಾರೆ. ಒಟ್ಬಲ್ಲಿ ಮೇಘನಾ ಅದ್ದೂರಿ ಕ್ರಿಸ್ಮಸ್ ಆಚರಣೆಯನ್ನು ನೋಡೋಕೆ ಅಭಿಮಾನಿಗಳು ಕಾತುರರಾಗಿದ್ದಾರೆ.

Meghana Raj Sarja made a handmade cake for Christmas Google Mummy special gift for Rayan Raj Sarja

Comments are closed.