ಪ್ರೆಂಚ್ ಬಿರಿಯಾನಿ ನಟಿ ದಿಶಾ ಮದನ್ ( Disha Madan) ಸಿನಿಮಾಗಿಂತಲೂ ಹೆಚ್ಚು ತಮ್ಮ ಎರಡನೇ ಪ್ರೆಗೆನ್ಸಿಯಿಂದಲೇ ಸುದ್ದಿಯಾಗಿದ್ದರು. ವೈರೈಟಿ ವೈರೈಟಿ ಪೋಟೋಶೂಟ್ ಗಳ ಮೂಲಕ ಗಮನ ಸೆಳೆದಿದ್ದ ದಿಶಾ ಈಗ ಡೆಲಿವರಿಗೆ ದಾಖಲಾಗೋವಾಗಲೂ ತಾವೇ ಗಾಡಿ ಓಡಿಸಿಕೊಂಡು ಹೋಗಿರೋ ಸಂಗತಿ ರಿವೀಲ್ ಮಾಡಿದ್ದಾರೆ. ಫ್ರೆಂಚ್ ಬಿರಿಯಾನಿ ಸಿನಿಮಾದ ಮೂಲಕ ಪ್ರಸಿದ್ಧಿಗೆ ಬಂದ ನಟಿ ದಿಶಾ ಮದನ್, ಸದಾ ಕ್ರಿಯೇಟಿವ್ ಆಗಿರುತ್ತಾರೆ. ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿ ತಮ್ಮ ವಿಚಾರಗಳನ್ನು ಶೇರ್ ಮಾಡುತ್ತಾರೆ.
ಸದ್ಯ ಎರಡನೇ ಮಗುವಿನ ನೀರಿಕ್ಷೆಯಲ್ಲಿದ್ದ ದಿನಾ ಮದನ್ ಮಾರ್ಚ್ 1 ನೇ ತಾರೀಕು ಮಹಾಶಿವರಾತ್ರಿಯಂದು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಆ ವಿಚಾರವನ್ನು ಸ್ವತಃ ದಿಶಾ ಮದನ್ ಇನ್ ಸ್ಟಾಗ್ರಾಂ ನ ಸ್ಪೆಶಲ್ ಪೋಸ್ಟ್ ಮೂಲಕ ಶೇರ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ಸ್ವತಃ ತುಂಬು ಬಸುರಿ ದಿಶಾ ಮದನ್ ವೇಗವಾಗಿ ಕಾರ್ ಓಡಿಸಿಕೊಂಡು ಆಸ್ಪತ್ರೆಗೆ ತೆರಳುತ್ತಿರುವ ದೃಶ್ಯ ಇದೆ. ಮಾತ್ರವಲ್ಲ, ಆಸ್ಪತ್ರೆಗೆ ತಾವೇ ತೆರಳಿ ಆಡ್ಮಿಟ್ ಆಗಿದ್ದಾರೆ. ಆಸ್ಪತ್ರೆಗೆ ತೆರಳಿದ ಕೆಲವೇ ಗಂಟೆಯಲ್ಲಿ ದಿಶಾ ಮದನ್ (Disha Madan) ಹೆಣ್ಣುಮಗುವಿಗೆ ಜನ್ಮನೀಡಿದ್ದು ದಿಶಾ ಪತಿ ಶಶಾಂಕ್ ಮಗುವಿನ ನೀರಿಕ್ಷೆಯಲ್ಲಿ ಆಸ್ಪತ್ರೆಯಲ್ಲಿ ನಿಂತಿರೋ ದೃಶ್ಯವನ್ನು ಸಹ ದಿಶಾ ಹಂಚಿಕೊಂಡಿದ್ದಾರೆ.
ಇನ್ನೂ ತಮಗೆ ಹೆಣ್ಣುಮಗು ಹುಟ್ಟಿರೋ ಸಂಗತಿಯನ್ನು ವುಡ್ ಮೇಲೆ ಮಾರ್ಚ್ 1 ,2022 ಎಂದು ಹೆಣ್ಣು ಮಗು ಎಂದು ಹೇಳುತ್ತ ಮಗುವಿನ ಮುಖ್ಯ ವನ್ನು ದಿಶಾ ಮದನ್ ರಿವೀಲ್ ಮಾಡಿದ್ದಾರೆ. ಸಖತ್ ಫಾಸ್ಟ್ ಫಾರ್ವರ್ಡ್ ಇರೋ ದಿಶಾ ಮದನ್ (Disha Madan) ತುಂಬು ಗರ್ಭಿಣಿಯಾಗಿದ್ದರೂ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ತಾವೇ ಆಸ್ಪತ್ರೆಗೆ ಬಂದು ದಾಖಲಾದ ದೃಶ್ಯ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರೋದಿಕ್ಕೆ ಸಖತ್ ಮೆಚ್ಚುಗೆ ವ್ಯಕ್ತವಾಗಿದೆ.
ಹೆಣ್ಣು ಮಗುವಿಗೆ ಆಸ್ಪತ್ರೆಯಲ್ಲೇ ನಾಮಕರಣ ಮಾಡಿರೋ ದಿಶಾ (Disha Madan) ಮಗಳ ಹೆಸರು ಆವಿರಾ ಎಂದು ರಿವೀಲ್ ಮಾಡಿದ್ದಾರೆ. ಈಗಾಗಲೇ ಮೊದಲ ಗಂಡು ಮಗುವನ್ನು ಹೊಂದಿರೋ ದಿಶಾ ಮದನ್ ತಾಯ್ತನದ ಸಂಭ್ರಮದಲ್ಲಿ ಹತ್ತಾರು ಪೋಟೋಶೂಟ್ ಮಾಡಿಸಿಕೊಂಡು ಪೋಟೋಸ್ ಹಂಚಿಕೊಂಡಿದ್ದರು. ಮಾತ್ರವಲ್ಲ ಬೇಬಿ ಬಂಪ್ ಜೊತೆ ಡ್ಯಾನ್ಸ್ ಕೂಡ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದರು.
ಇದನ್ನೂ ಓದಿ : KGF Chapter 2 Yash : ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್ : ಮಾರ್ಚ್ 27 ಕ್ಕೆ ಕೆಜಿಎಫ್-2 ಟ್ರೇಲರ್ ರಿಲೀಸ್
ಇದನ್ನೂ ಓದಿ : Radhe Shyam : ರಾಧೆಶ್ಯಾಮ್ ಸಿನಿಮಾದಲ್ಲಿ ಶಿವಣ್ಣ: ಕನ್ನಡಿಗರಿಗೆ ಸಿಕ್ತು ಸಿಹಿಸುದ್ದಿ
( Actress Disha Madan hospitalized after driving her car in child birth)