Eshwarappa vs Hariprasad : ಬಿ.ಕೆ. ಹರಿಪ್ರಸಾದ್‌ಗೆ ತಾಕತ್ತಿದ್ದರೆ ತಾಲೂಕು ಪಂಚಾಯತ್‌ ಚುನಾವಣೆ ಗೆಲ್ಲಲಿ : ಕೆ.ಎಸ್.ಈಶ್ವರಪ್ಪ ಸವಾಲು

ಬೆಂಗಳೂರು : ತಮ್ಮ ಸ್ಥಾನಕ್ಕೆ ಕುತ್ತು ತರುವಂತಾದ ಶಿವಮೊಗ್ಗದ ಹಿಂದೂಪರ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಈಶ್ವರಪ್ಪ ಸಖತ್ ಸ್ಟ್ರಾಂಗ್ ಆಗಿದ್ದು, ಈಶ್ವರಪ್ಪ (Eshwarappa ) ತಮ್ಮ ಸೀಟ್ ಬಿಟ್ಟುಕೊಡಲಿ ಎಂದ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ನನ್ನ ಸೀಟ್ ಕಸಿಯೋ ಬದಲು ಬಿ.ಕೆ.ಹರಿ ಪ್ರಸಾದ್ (Hariprasad) ಸ್ವಂತ ಸಾಮರ್ಥ್ಯದಿಂದ ಸೀಟು ಗಿಟ್ಟಿಸಿಕೊಂಡು ತಾಲೂಕು ಪಂಚಾಯತ್ ಎಲೆಕ್ಷನ್ ಗೆದ್ದು ಬರಲಿ ಎಂದು ಸವಾಲೊಡ್ಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಭಜರಂಗದಳ ಕಾರ್ಯಕರ್ತ ಹರ್ಷ ಕಗ್ಗೊಲೆ ಬಗ್ಗೆ ಸಿಎಂ ಬೊಮ್ಮಾಯಿ ಅವರು ದುಃಖ ವ್ಯಕ್ತಪಡಿಸಿದ್ದಾರೆ. ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ. ಭಾನುವಾರ ಯಡಿಯೂರಪ್ಪ ಅವರು ಹರ್ಷ ನಿವಾಸಕ್ಕೆ ಭೇಟಿ ನೀಡುತ್ತಾರೆ.ಈ ವೇಳೆ ನಾನು ಹಾಗು ಯಡಿಯೂರಪ್ಪ ಅವರು ಸರಕಾರದ ಪರವಾಗಿ 25 ಲಕ್ಷ ಪರಿಹಾರ ನೀಡ್ತೇವೆ ಎಂದಿದ್ದಾರೆ.

ಮಾತ್ರವಲ್ಲ ಟೀಕೆ ಟಿಪ್ಪಣಿಗಳು ಸ್ವಾಭಾವಿಕ ಆ ಸಂದರ್ಭದಲ್ಲಿ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ವಿಶ್ವನಾಥಶೆಟ್ಟಿ ಕುಟುಂಬಕ್ಕು ಸಹ ಹಿಂದು ಸಮಾಜ ಏನೇನು ಸಹಾಯ ಮಾಡಬಹುದೋ ಅದನ್ನು ಮಾಡ್ತೇವೆ ಎಂದಿದ್ದಾರೆ. ಅಲ್ಲದೇ ಕೆಲವು ಮುಸಲ್ಮಾನ್ ಗೂಂಡಾಗಳು ಗಾಜನೂರು ಬಳಿ ವಿಶ್ವನಾಥಶೆಟ್ಟಿ ಅವರ ಹತ್ಯೆ ನಡೆಸಿದ್ದರು. ಈ ಕೊಲೆ ಮಾಡಿದ ಮುಸಲ್ಮಾನ್ ಗೂಂಡಾಗಳ ಕೃತ್ಯವನ್ನು ಕಾಂಗ್ರೆಸ್ ಇದುವರೆಗೂ ಖಂಡನೆ ವ್ಯಕ್ತಪಡಿಸಿಲ್ಲ.ಅಲ್ಲಾಹೋ ಅಕ್ಬರ್ ಅಂತಾ ಕೂಗಿದವರ ಮನೆಗೆ ರಾಜ್ಯದ ನಾಯಕರ ತಂಡವೇ ಭೇಟಿ ನೀಡ್ತಲ್ಲ ಎಂದು ಟೀಕಿಸಿದ್ದಾರೆ.

ಈಶ್ವರಪ್ಪನವರು ಶಿವಮೊಗ್ಗ ಕ್ಷೇತ್ರದ ಟಿಕೇಟ್ ನ್ನು ಹರ್ಷ ಕುಟುಂಬಕ್ಕೆ ಬಿಟ್ಟು ಕೊಡಲಿ, ಹರಿಪ್ರಸಾದ್ ಹೇಳಿರೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಬಿ.ಕೆ.ಹರಿಪ್ರಸಾದ್ ಗೆ ಇದುವರೆಗೆ ನೇರ ಚುನಾವಣೆಯಲ್ಲಿ ಒಂದು ಟಿಕೇಟ್ ತಗೊಳ್ಳಕ್ಕಾಗಲಿಲ್ಲ. ತಾಕತ್ತಿದ್ದರೇ ಬಿ.ಕೆ.ಹರಿಪ್ರಸಾದ್ ಮೊದಲು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಟಿಕೇಟ್ ಪಡೆದು ಗೆದ್ದು ಬರಲಿ.

ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಬಾರಿ ನೇರ ಚುನಾವಣೆಯಲ್ಲಿ ಗೆದ್ದು ಬರಲು ಸಾಧ್ಯವಾಗಿಲ್ಲ.ಈ ಬಾರಿ 224 ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾದರೂ ಒಂದು ಕಡೆ ಟಿಕೇಟ್ ಪಡೆದು ಗೆದ್ದು ಬರಲಿ‌ ನೋಡೋಣ ಎಂದು ಸವಾಲು ಎಸೆದಿದ್ದಾರೆ.ಮಾತ್ರವಲ್ಲ, ಶಿವಮೊಗ್ಗ ಕ್ಷೇತ್ರ ಹರ್ಷ ಕುಟುಂಬಕ್ಕೆ ಬಿಟ್ಟು ಕೊಡಲಿ ಅಂತಾ ಹೇಳೋದಕ್ಕೆ ಇಬ್ರಾಹಿಂ, ಹರಿಪ್ರಸಾದ್ ಅವನು ಯಾವನು ಎಂದು ಈಶ್ವರಪ್ಪ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ : Hindu Harsha : ಬಿಜೆಪಿ ಸೂಚಿಸಿದರೇ ಹರ್ಷನ ಕುಟುಂಬಕ್ಕೆ ಸ್ಥಾನಬಿಡಲು ಸಿದ್ಧ ಎಂದ ಈಶ್ವರಪ್ಪ

ಇದನ್ನೂ ಓದಿ : Hindu Harsha : ಹರ್ಷ ತಾಯಿಗೆ ಬಿಜೆಪಿ ಕೊಟ್ಟರೇ ಕಾಂಗ್ರೆಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಲ್ಲ: ಬಿ.ಕೆ.ಹರಿಪ್ರಸಾದ್ ಸ್ಪೋಟಕ ಹೇಳಿಕೆ

(Bjp Minister KS Eshwarappa Challenge to congress leader B K Hariprasad)

Comments are closed.