ಭಾನುವಾರ, ಏಪ್ರಿಲ್ 27, 2025
HomeCinemaActress Rambha Car Accident : ಖ್ಯಾತ ನಟಿ ರಂಭಾ ಕಾರು ಅಪಘಾತ

Actress Rambha Car Accident : ಖ್ಯಾತ ನಟಿ ರಂಭಾ ಕಾರು ಅಪಘಾತ

- Advertisement -

ಹೈದ್ರಾಬಾದ್‌ : Actress Rambha Car Accident : ಖ್ಯಾತ ಹಿರಿಯ ನಟಿ ರಂಭಾ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಮಕ್ಕಳು ಹಾಗೂ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾ ಕಾರಿನಲ್ಲಿದ್ದರು. ಅದೃಷ್ಟವಶಾತ್‌ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹಿಂದಿರುಗುತ್ತಿದ್ದಾಗ ಎದುರಿನಿಂದ ಬಂದ ಕಾರು ರಂಭಾ ಪ್ರಯಾಣಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ನಮ್ಮ ಪಾಲಿಗೆ ಇದು ಕೆಟ್ಟ ಸಮಯ. ನಮಗಾಗಿ ದೇವರಲ್ಲಿ ಪ್ರಾರ್ಥಿಸಿ. ನನ್ನ ಸಣ್ಣ ಮಗು ಸಶಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅವಳು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ನಟಿ ರಂಭಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇನ್ನು ಆಸ್ಪತ್ರೆಯಲ್ಲಿರುವ ಮಗುವಿನ ಜೊತೆಗೆ ಇರುವ ಪೋಟೋ ಹಾಗೂ ಕಾರು ಅಪಘಾತದ ಪೋಟೋಗಳನ್ನು ರಂಭಾ ಹಂಚಿಕೊಂಡಿದ್ದಾರೆ. ರಂಭಾ ಎಸ್ ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ ಏರ್‌ ಬ್ಯಾಗ್‌ ತೆರೆದುಕೊಂಡಿದ್ದರಿಂದಾಗಿ ಬಾರೀ ಅನಾಹುತವೊಂದು ತಪ್ಪಿದಂತಾಗಿದೆ. ಕಾರಿನ ಬಾಗಿಲುಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿವೆ. ಇನ್ನು ಪೋಟೋಗಳನ್ನು ನೋಡಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಅಲ್ಲದೇ ಶೀಘ್ರದಲ್ಲಿಯೇ ಚೇತರಿಸಿಕೊಳ್ಳುವಂತೆ ಕಮೆಂಟ್‌ ಮಾಡುತ್ತಿದ್ದಾರೆ.

ತೆಲುಗು ಚಿತ್ರರಂಗದ ಖ್ಯಾತ ನಟಿಯಾಗಿರುವ ರಂಭಾ, ತೆಲುಗು ಮಾತ್ರವಲ್ಲದೇ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆ ‘ಬಾವಗಾರು ಬಾಗುನ್ನರಾ?’, ನಟ ಸಿಂಹಂ ಬಾಲಕೃಷ್ಣ ಜೊತೆ ‘ಭೈರವ ದ್ವೀಪ’, ಕಿಂಗ್ ನಾಗಾರ್ಜುನ ಜೊತೆ ‘ಹಲೋ ಬ್ರದರ್’, ವಿಕ್ಟರಿ ವೆಂಕಟೇಶ್ ಜೊತೆ ‘ಮುದ್ದುಲ ಪ್ರಿಯುಡು’, ಜೆಡಿ ಚಕ್ರವರ್ತಿ ಜೊತೆ ‘ಬಾಂಬೆ ಪ್ರಿಯುಡು’ ಮುಂತಾದ ಸಿನಿಮಾಗಳಲ್ಲಿ ರಂಭಾ ನಟಿಸಿದ್ದರು. ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಯಂಗ್ ಟೈಗರ್ ಎನ್‌ಟಿಆರ್ ‘ಯಮದೊಂಗ’ ಚಿತ್ರದಲ್ಲಿ ವಿಶೇಷ ಹಾಡುಗಳಲ್ಲಿ ಮತ್ತು ‘ದೇಶಮುದುರು’ ಚಿತ್ರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಡ್ಯಾನ್ಸ್ ಮಾಡಿದ್ದಾರೆ. ಆದರೆ ರಂಭಾ ನಟನೆಯಿಂದ ದೂರ ಉಳಿದು ವರ್ಷಗಳೇ ಕಳೆದು ಹೋಗಿದೆ.

ಒಂದು ಕಾಲದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದರೂ ಕೂಡ ನಟಿ ರಂಭಾ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ ಮಾಡುತ್ತಿಲ್ಲ. ಬದಲಾಗಿ ಅವರು ಕುಟುಂಬಕ್ಕೆ ತಮ್ಮ ಸಮಯವನ್ನು ಮೀಸಲಿಡುತ್ತಿದ್ದಾರೆ. ರಂಭಾ ಹಾಗೂ ಇಂದಿರಾ ಪದ್ಮನಾಭನ್‌ ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದಾನೆ. ಸದ್ಯ ಕೆನಡಾದಲ್ಲಿ ಅವರು ನೆಲೆಸಿದ್ದಾರೆ. ಇತ್ತೀಚಿಗಷ್ಟೇ ಅವರು ಚೆನ್ನೈಗೆ ಬಂದಿದ್ದು, ಹಿರಿಯ ನಟಿಯರಾದ ಖುಷ್ಬೂ ಅವರನ್ನು ಭೇಟಿಯಾಗಿದ್ದರು.

ಇದನ್ನೂ ಓದಿ : Ashwini Puneeth Rajkumar : ಅಪ್ಪು ಮೊದಲ ವರ್ಷ ಪುಣ್ಯಸ್ಮರಣೆ : ವೈರಲ್ ಆಯ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ಪತ್ರ

ಇದನ್ನೂ ಓದಿ : Priyanka Chopra : ಅಭಿಮಾನಿಗಳಿಗೆ ಸಿಹಿಸುದ್ದಿ : 3 ವರ್ಷಗಳ ಬಳಿಕ ಭಾರತಕ್ಕೆ ಬರಲಿದ್ದಾರೆ ಪ್ರಿಯಾಂಕಾ ಚೋಪ್ರಾ

Actress Rambha Car Accident Canada Daughter Sasha Hospital

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular