Kannada Rojyotsava : ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಆರ್‌ಸಿಬಿ, ಬೆಂಗಳೂರು ಬುಲ್ಸ್

ಬೆಂಗಳೂರು: ಇಂದು(Kannada Rojyotsava ) ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಆಚರಣೆ. ಕನ್ನಡಿಗರೆಲ್ಲರೂ ಸಂಭ್ರಮಿಸುವ ದಿನ. ಕನ್ನಡ ರಾಜ್ಯೋತ್ಸವವನ್ನು ರಾಜ್ಯದ ಮೂಲೆ ಮೂಲೆಗಳಲ್ಲೂ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.

ಕನ್ನಡದ ರಾಯಭಾರಿ ದಿವಂಗತ ಡಾ.ಪುನೀತ್ ರಾಜ್’ಕುಮಾರ್ ಅವರಿಗೆ ಕನ್ನಡ ರಾಜ್ಯೋತ್ಸವದ ದಿನವೇ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇಡೀ ರಾಜ್ಯಕ್ಕೆ ರಾಜ್ಯವೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಕನ್ನಡ ನಾಡಿನ ಕ್ರೀಡಾ ಫ್ರಾಂಚೈಸಿ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore – RCB) ಮತ್ತು ಬೆಂಗಳೂರು ಬುಲ್ಸ್ (Bengaluru Bulls) ತಂಡಗಳು ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ಕೋರಿವೆ.

“ಇದೇ ನಾಡು ಇದೇ ಭಾಷೆ, ಎಂದೆಂದೂ ನಮ್ಮದಾಗಿರಲಿ, ಎಲ್ಲೇ ಇರಲಿ ಹೇಗೆ ಇರಲಿ, ಕನ್ನಡವೇ ನಮ್ಮ ಉಸಿರಲ್ಲಿ! ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!” ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ವೀಟ್ ಮಾಡಿದೆ.

ಇದನ್ನೂ ಓದಿ : Syed Mushtaq Ali T20: ನಾಳೆ ಕರ್ನಾಟಕ Vs ಪಂಜಾಬ್ ಕ್ವಾರ್ಟರ್ ಫೈನಲ್; ಇಲ್ಲಿದೆ Team, Time, Live ಡೀಟೇಲ್ಸ್

ಇದನ್ನೂ ಓದಿ : Sehwag criticized Dinesh Karthik: “ಇದೇನು ಬೆಂಗಳೂರು ಪಿಚ್ ಅಲ್ಲ”, ದಿನೇಶ್ ಕಾರ್ತಿಕ್ ವಿರುದ್ಧ ಸೆಹ್ವಾಗ್ ಈ ರೀತಿ ಗುಡುಗಿದ್ದೇಕೆ ?

ಇದನ್ನೂ ಓದಿ : Pro Kabaddi League-9 : ಕೆಂಪುಗೂಳಿಗಳ ಗೆಲುವಿನ ಓಟಕ್ಕಿಲ್ಲ ಬ್ರೇಕ್, 5 ಪಂದ್ಯಗಳಿಂದ ಬೆಂಗಳೂರು ಬುಲ್ಸ್ ಅಜೇಯ

ಇನ್ನು ಪ್ರೊ ಕಬಡ್ಡಿ ಲೀಗ್’ನಲ್ಲಿ ಕನ್ನಡ ನಾಡಿನ ತಂಡವನ್ನು ಪ್ರತಿನಿಧಿಸುವ ಬೆಂಗಳೂರು ಬುಲ್ಸ್ ತಂಡವೂ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ಕೋರಿದೆ.
“ತವರಿನಿಂದ ದೂರವಿದ್ದರೂ, ಕರ್ನಾಟಕದ ಕಂಪನ್ನು ಅನುಭವಿಸೋ ಆಸೆ. ಮನೆ ಮನೆ ಮೇಲೆ ಕನ್ನಡ ಬಾವುಟ ಹಾರಿಸಿದವರೆಲ್ಲರು ದಯವಿಟ್ಟು ಅದರ ಛಾಯಾಚಿತ್ರಗಳನ್ನು ಟ್ವಿಟರ್ ಅಥವಾ ಇತರೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಹಾಗೂ ನಮ್ಮನ್ನು ಟಾಗ್ ಮಾಡಿ. ಆದಷ್ಟು ನೋಡಿ ಕಣ್ತುಂಬಿಕೊಳ್ಳುವ ಇಚ್ಛೆ ನಮ್ಮದು. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು” ಎಂದು ಬುಲ್ಸ್ ಬಳಗ ಟ್ವೀಟ್ ಮಾಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಬೆಂಗಳೂರು ತಂಡಗಳು ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ಕೋರಿದ್ರೆ, ಕನ್ನಡ ನಾಡನಲ್ಲಿ ಮತ್ತೊಂದು ಕ್ರೀಡಾ ಫ್ರಾಂಚೈಸಿ ತಂಡವಾಗಿರುವ ಬೆಂಗಳೂರು ಎಫ್’ಸಿ (Bengaluru FC), ಫುಟ್ಬಾಲ್ ತಂಡ ಇನ್ನೂ ರಾಜ್ಯೋತ್ಸವದ ಶುಭಾಶಯ ಕೋರಿಲ್ಲ.

RCB, Bangalore Bulls wish Kannada Rojyotsava to Kannadigas

Comments are closed.