ಸೋಮವಾರ, ಏಪ್ರಿಲ್ 28, 2025
HomeCinemaActress Ramya on Hoysala : ಹೊಯ್ಸಳ ಸೆಟ್ ನಲ್ಲಿ ನಟಿ ರಮ್ಯ: ಡಾಲಿ...

Actress Ramya on Hoysala : ಹೊಯ್ಸಳ ಸೆಟ್ ನಲ್ಲಿ ನಟಿ ರಮ್ಯ: ಡಾಲಿ 25 ನೇ ಚಿತ್ರಕ್ಕೆ ಬಣ್ಣ ಹಚ್ಚಿದ್ರಾ ಸ್ಯಾಂಡಲ್ ವುಡ್ ಪದ್ಮಾವತಿ

- Advertisement -

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ತನ್ನ ನಟನೆ ಹಾಗೂ ಸೌಂದರ್ಯದಿಂದ ಆಳಿದ ಸ್ಯಾಂಡಲ್ ವುಡ್ ಪದ್ಮಾವತಿ ಖ್ಯಾತಿಯ ನಟಿ ರಮ್ಯ ಇದ್ದಕ್ಕಿದ್ದಂತೆ ಸಿನಿಮಾ ರಂಗದಿಂದ ಎದ್ದು ಹೋದರು. ಮಾತ್ರವಲ್ಲ ರಾಜಕೀಯದಲ್ಲಿ ಮಿಂಚಿ ಮೆರೆದು ಸಂಸದೆಯೂ ಆದರು. ಆದರೆ ರಾಜಕೀಯಕ್ಕೆ ಹೋದ್ರೂ ರಮ್ಯಗೆ ಬಣ್ಣದ ಸೆಳೆತ ಕಡಿಮೆಯಾಗಿಲ್ಲ. ಹೀಗಾಗಿ ರಮ್ಯ ಈಗ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯವಾಗೋ ಚಿಂತನೆಯಲ್ಲಿದ್ದು, ಇಷ್ಟು ದಿನ ಹೊಸ ನಟರ ಸಿನಿಮಾ ಬೆಂಬಲಿಸುತ್ತಿದ್ದ ರಮ್ಯ ಈಗ ಸೆಟ್ ಗೆ (Actress Ramya on Hoysala ) ಬಂದು ಅಚ್ಚರಿ‌ ಮೂಡಿಸಿದ್ದಾರೆ.

ಹೌದು ಕೆಲದಿನದಿಂದ ನಟಿ ರಮ್ಯ ಕನ್ನಡ ಚಿತ್ರರಂಗಕ್ಕೆ ಮರಳುತ್ತಾರೆ ಅನ್ನೋ ಮಾತು ಕೇಳಿಬಂದಿದೆ. ಅದಕ್ಕೆ ಪೂರಕ ಎಂಬಂತೆ ಕೆಲ ತಿಂಗಳುಗಳಿಂದ ರಮ್ಯ ಕನ್ನಡ ಚಿತ್ರರಂಗದ ಚಟುವಟಿಕೆಯಲ್ಲಿ ಸಕ್ರಿಯರಾಗುತ್ತಿದ್ದಾರೆ. ಹೊಸಬರ ಚಿತ್ರಗಳು, ಪ್ರೋಮೋ,ಟ್ರೇಲರ್, ಟೀಸರ್ ಗಳನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸುತ್ತಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಕಾರ್ಯಕ್ರಮ ಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಚಾರ್ಲಿ ಸಿನಿಮಾ‌ ನೋಡಿದ ರಮ್ಯ ತಮ್ಮ ಸಾಕು ನಾಯಿ ಜೊತೆ ಪೋಸ್ಟ್ ಹಾಕಿದ್ದರು. ಈಗ ಇನ್ನೊಂದು ಹೆಜ್ಜೆ ಮುಂದೇ ಹೋಗಿರೋ ನಟಿ ರಮ್ಯ ಟಗರು ಖ್ಯಾತಿಯ ನಟ ಡಾಲಿ ಧನಂಜಯ್ ಶೂಟಿಂಗ್ ನ ಸೆಟ್ ಗೆ ಭೇಟಿ ಕೊಟ್ಟು ಸಪ್ರೈಸ್ ನೀಡಿದ್ದಾರೆ.

ಡಾಲಿ ಧನಂಜಯ್ ಅವರ ಬಹುನೀರಿಕ್ಷಿತ ಚಿತ್ರ ಹೊಯ್ಸಳ ಸಿನಿಮಾಗೆ ರಮ್ಯ ಅನೀರಿಕ್ಷಿತವಾಗಿ ಭೇಟಿ ಕೊಟ್ಟಿದ್ದಾರೆ. ರಮ್ಯರನ್ನು ಕಂಡು ಸ್ವತಃ ಡಾಲಿ ಧನಂಜಯ್ ಕೂಡ ಸಪ್ರೈಸ್ ಆಗಿದ್ದಾರೆ. ಬಳಿಕ ಸಿನಿಮಾ ಶೂಟಿಂಗ್ ನ ಎಲ್ಲಾ ವಿವರವನ್ನು ರಮ್ಯ ಡಾಲಿ ಧನಂಜಯ್ ಜೊತೆ ಚರ್ಚಿಸಿದ್ದಾರೆ. ಹೀಗೆ ರಮ್ಯ ಡಾಲಿ ಸೆಟ್ ಗೆ ಭೇಟಿ ಕೊಟ್ಟ ಪೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಹೊಯ್ಸಳ ಸಿನಿಮಾ ಡಾಲಿ ಧನಂಜಯ್ 25 ನೇ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಕೆ.ಅರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಈ ಸಿನಿಮಾ‌ನಿರ್ಮಿಸುತ್ತಿದೆ. ವಿಜಯ್ ಎನ್ ಡಾಲಿ ಧನಂಜಯ್ ಗೆ ಆಕ್ಷ್ಯನ್ ಕಟ್ ಹೇಳ್ತಿದ್ದಾರೆ. ಸೆಟ್ ಗೆ ರಮ್ಯ ಬಂದ ವೇಳೆ ನಟಿ ಅಮೃತಾ ಅಯ್ಯಂಗಾರ್, ನಟ ಅಚ್ಯುತ್ ಕೂಡ ರಮ್ಯರನ್ನು ಭೇಟಿ ಮಾಡಿದ್ದು ರಮ್ಯ ಸಿನಿತಂಡಕ್ಕೆ ಶುಭಹಾರೈಸಿದ್ದಾರೆ.

ಇದನ್ನೂ ಓದಿ : Hudugi movie : ಕನ್ನಡದಲ್ಲೂ ಬರ್ತಿದೆ ರಾಮ್ ಗೋಪಾಲ್ ವರ್ಮಾ ಸಿನಿಮಾ : ಬೆಂಗಳೂರಿನಲ್ಲಿ ಹುಡುಗಿ ಚಿತ್ರದ ಪ್ರಚಾರ

ಇದನ್ನೂ ಓದಿ : Hudugi movie : ಕನ್ನಡದಲ್ಲೂ ಬರ್ತಿದೆ ರಾಮ್ ಗೋಪಾಲ್ ವರ್ಮಾ ಸಿನಿಮಾ : ಬೆಂಗಳೂರಿನಲ್ಲಿ ಹುಡುಗಿ ಚಿತ್ರದ ಪ್ರಚಾರ

Actress Ramya on Hoysala set, Sandalwood Padmavati painted for Dolly’s 25th film

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular