JEE Main 2022 Session 1: ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ : ರಿಸಲ್ಟ್​ ವೀಕ್ಷಿಸಲು ಇಲ್ಲಿದೆ ಮಾರ್ಗ

JEE Main 2022 Session 1 : ಜೆಇಇ ಮೇನ್​ ಒಂದನೇ ಸೆಷನ್​ನ ಫಲಿತಾಂಶ ಇಂದು ಬಿಡುಗಡೆಯಾಗಿದೆ. ಈ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು jeemain.nta.nic.in. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ತಮ್ಮ ಫಲಿತಾಂಶಗಳನ್ನು ವೀಕ್ಷಿಸಬಹುದಾಗಿದೆ . ಈ ವೆಬ್​ಸೈಟ್​ಗೆ ಭೇಟಿ ನೀಡಿ ಜೆಇಇ ಮೇನ್​ ರಿಸಲ್ಟ್​ 2022 ಜೂನ್​ ಲಿಂಕ್​​ ಮೇಲೆ ಕ್ಲಿಕ್​ ಮಾಡಿದರೆ ನಿಮ್ಮ ಫಲಿತಾಂಶ ಲಭ್ಯವಾಗಲಿದೆ .
ಜೆಇಇ ಫಲಿತಾಂಶವನ್ನು ವೀಕ್ಷಣೆ ಮಾಡುವ ಮುನ್ನ ನಿಮ್ಮ ಜನ್ಮ ದಿನಾಂಕವನ್ನು ನಮೂದಿಸುವುದು ಕಡ್ಡಾಯವಾಗಿದೆ. ಇದಾದ ಬಳಿಕ ನೀವು ಒಮ್ಮೆ ಸಬ್​ಮಿಟ್​ ಎಂಬ ಆಯ್ಕೆಯ ಮೇಲೆ ಕ್ಲಿಕ್​ ಮಾಡಿದಲ್ಲಿ ಪರದೆಯ ಮೇಲೆ ನಿಮ್ಮ ಜೆಇಇ ಮುಖ್ಯ ಪರೀಕ್ಷೆ ಸೆಷನ್​ ಒಂದರ ಫಲಿತಾಂಶ ಪ್ರದರ್ಶಿತಗೊಳ್ಳಲಿದೆ.

NITಗಳು, IIITಗಳು ಮತ್ತು ಇತರ ಕೇಂದ್ರೀಯ ಅನುದಾನಿತ ತಾಂತ್ರಿಕ ಸಂಸ್ಥೆಗಳು (CFTIs) ನೀಡುವ ಹಲವಾರು BE/BTech ಕೋರ್ಸ್‌ಗಳಿಗೆ JEE ಮುಖ್ಯ ಸ್ಕೋರ್ ಅನ್ನು ಪರಿಗಣಿಸಲಾಗುತ್ತದೆ.
ಜೆಇಇ ಮುಖ್ಯ ಪರೀಕ್ಷೆಗಳನ್ನು ಜೂನ್​ 23ರಿಂದ 29ರವರೆಗೆ ವಿವಿಧ ದಿನಾಂಕಗಳಲ್ಲಿ ನಡೆಸಲಾಗಿದೆ. ಜೆಇಇ ಮುಖ್ಯ ಪರೀಕ್ಷೆ ಸೆಷನ್ ಒಂದರ ಕೀ ಉತ್ತರಗಳನ್ನು ಜುಲೈ 2ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬಿಡುಗಡೆಗೊಳಿಸಿದೆ.

ಕೀ ಉತ್ತರದ ವಿರುದ್ಧ ಆಕ್ಷೇಪವನ್ನು ಎತ್ತಲು ಅಭ್ಯರ್ಥಿಗಳಿಗೆ ಜುಲೈ 4ರವರೆಗೆ ಸಮಯಾವಕಾಶವನ್ನು ನೀಡಲಾಗಿತ್ತು. ಬಳಿಕ ಎನ್​ಟಿಎ ಇದನ್ನು ಪರಿಷ್ಕರಣೆ ಮಾಡಿದೆ. ಇದರ ಜೊತೆಯಲ್ಲಿ ಜೆಇಇ ಮುಖ್ಯ ಪರೀಕ್ಷೆ ಸೆಷನ್​ 2ಕ್ಕೆ ನೋಂದಣಿ ಪ್ರಕ್ರಿಯೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಈಗಾಗಲೇ ಕೊನೆಗೊಳಿಸಿದೆ. ಜೆಇಇ ಮುಖ್ಯ ಪರೀಕ್ಷೆ ಸೆಷನ್​ 2 ಜುಲೈ 21 ರಿಂದ ಜುಲೈ 30ರವರೆಗೆ ನಡೆಯಲಿದೆ.

ಅಭ್ಯರ್ಥಿಗಳ ಅಂಕಗಳ ಆಧಾರದ ಮೇಲೆ ಯೋಜಿತ ಶ್ರೇಣಿಗಳನ್ನು JEE ಮುಖ್ಯ ಅಂಕಗಳು ಮತ್ತು ಶ್ರೇಣಿಯ ಕೋಷ್ಟಕದಲ್ಲಿ ಸೇರಿಸಲಾಗಿದೆ.

ಜೆಇಇ ಫಲಿತಾಂಶ ವೀಕ್ಷಿಸಲು ಇಲ್ಲಿದೆ ಮಾರ್ಗ :

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ jeemain.nta.nic.in. ಭೇಟಿ ನೀಡಬೇಖು
‘JEE ಮುಖ್ಯ 2022 ಸೆಷನ್ 1 ಫಲಿತಾಂಶ ಡೌನ್‌ಲೋಡ್’ ಎಂದು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ರೋಲ್ ಸಂಖ್ಯೆ, ಹುಟ್ಟಿದ ದಿನಾಂಕ, ಕ್ಯಾಪ್ಚಾ ಕೋಡ್ ಮತ್ತು ಇತರ ವಿವರಗಳನ್ನು ನಮೂದಿಸಬೇಕು.
JEE ಮುಖ್ಯ 2022 ಸೆಷನ್ 1 ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಅಭ್ಯರ್ಥಿಗಳು JEE ಮುಖ್ಯ 2022 ಸೆಷನ್ 1 ಫಲಿತಾಂಶವನ್ನು ಮುಂದಿನ ಉಪಯೋಗಕ್ಕಾಗಿ ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಬೇಕು.

ಇದನ್ನು ಓದಿ : Actress Ramya on Hoysala : ಹೊಯ್ಸಳ ಸೆಟ್ ನಲ್ಲಿ ನಟಿ ರಮ್ಯ: ಡಾಲಿ 25 ನೇ ಚಿತ್ರಕ್ಕೆ ಬಣ್ಣ ಹಚ್ಚಿದ್ರಾ ಸ್ಯಾಂಡಲ್ ವುಡ್ ಪದ್ಮಾವತಿ

ಇದನ್ನೂ ಓದಿ : ವಿಭಿನ್ನವಾಗಿ ಬಕ್ರೀದ್ ಹಬ್ಬದ ಶುಭಾಶಯ ಹೇಳಿದ ಟೀಮ್ ಇಂಡಿಯಾ ತ್ರಿವಳಿ ವೇಗಿಗಳು

JEE Main 2022 Session 1 Results Declared: Here’s How To Check Your Scores

Comments are closed.