Actress Ramya Special Birthday : ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯ (Actress Ramya) ಚಂದನವನದ ದೊಡ್ಮನೆ ಡಾ.ರಾಜ್ ಕುಟುಂಬದ ಜೊತೆ ಒಂದು ವಿಶೇಷ ಬಾಂಧವ್ಯ ಹೊಂದಿದ್ದಾರೆ. ಈಗ ಈ ಮಾತಿಗೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಬರ್ತಡೇ ಸಂಭ್ರಮದಲ್ಲಿರೋ ನಟಿ ರಮ್ಯ, ದೊಡ್ಮನೆ ಯುವರಾಜ್ ನ ಜೊತೆ ಕೇಕ್ ಕತ್ತರಿಸಿ ಬರ್ತಡೇ ಸೆಲಿಬ್ರೆಟ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸ್ಪೆಶಲ್ ವಿಡಿಯೋ ಶೇರ್ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನ ಪದ್ಮಾವತಿ ನಟನೆ ಹಾಗೂ ಸಿನಿಮಾ ದಿಂದ ದೂರವಾದ್ರೂ ಅಭಿಮಾನಿಗಳಿಂದ ದೂರವಾಗಿಲ್ಲ. ಹೀಗಾಗಿ ಸದಾ ರಮ್ಯ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬದುಕಿನ ಅಪ್ಡೇಟ್ ನೀಡುತ್ತಲೇ ಇರುತ್ತಾರೆ.

ಸದ್ಯ 41 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ನಟಿ ರಮ್ಯ ಈ ಸಂಭ್ರಮದ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಚ್ಚರಿ ಅಂದ್ರೇ ರಮ್ಯ ಹುಟ್ಟುಹಬ್ಬದ ಈ ಸಂಭ್ರಮದಲ್ಲಿ ನಟ ಹಾಗೂ ದೊಡ್ಮನೆ ಯುವರಾಜ್ ಅಂದ್ರೇ ವಿನಯ್ ರಾಘವೇಂದ್ರ್ ರಾಜ್ ಕುಮಾರ್ ಕೂಡ ಜೊತೆಯಾಗಿದ್ದಾರೆ.
ವಿನಯ್ ರಾಜ್ ಕುಮಾರ್, ಹಾಗೂ ಇನ್ನಿಬ್ಬರು ಆತ್ಮೀಯರ ಜೊತೆ ನಟಿ ರಮ್ಯ ಫೈನ್ ಡೈನ್ ಫನ್ ಅಂತ ಬರ್ತಡೇ ಎಂಜಾಯ್ ಮಾಡಿದ್ದಾರೆ. ಹಿಲ್ ಸ್ಟೇಶನ್ ವೊಂದರಲ್ಲಿ ಸ್ಟೇ ಮಾಡಿರೋ ರಮ್ಯ ಅಲ್ಲಿ ಟೆಂಟ್ ನೈಟ್ ಔಟ್, ಡಿನ್ನರ್, ಕ್ಯಾಂಡಲ್ ಲೈನ್ ಡಿನ್ನರ್, ಔಟಿಂಗ್, ಯೋಗಾ,ಫನ್ ಅಂತೆಲ್ಲ ಸಂಭ್ರಮಿಸಿದ್ದಾರೆ. ಮಾತ್ರವಲ್ಲ ಮಧ್ಯರಾತ್ರಿಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಇದನ್ನೂ ಓದಿ : ಅಬ್ಬಬ್ಬಾ… ಬಿಗ್ಬಾಸ್ ಮನೆಯಲ್ಲೇ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡ ಸ್ಪರ್ಧಿ
ಈ ವಿಡಿಯೋವನ್ನು ನಟಿ ರಮ್ಯ ತಮ್ಮ ದಿವ್ಯಸ್ಪಂದನಾ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಶೇರ್ ಮಾಡಿದ್ದು, ವಿಡಿಯೋ ಶೇರ್ ಮಾಡ್ತಿದಂತೆ ಲಕ್ಷಾಂತರ ಜನರು ಈವಿಡಿಯೋ ಶೇರ್ ,ಲೈಕ್ ಮಾಡಿ ರಮ್ಯ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ.
ದೊಡ್ಮನೆಯಿಂದಲೇ ಸಿನಿ ಕೆರಿಯರ್ ಆರಂಭಿಸಿದ ನಟಿ ರಮ್ಯರನ್ನು ಅಭಿ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯಿಸಿದ್ದೇ ಪಾರ್ವತಮ್ಮ ರಾಜ್ ಕುಮಾರ್. ಪುನೀತ್ ಮೊದಲಚಿತ್ರದ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಬಂದ ರಮ್ಯ ಅಲ್ಲಿಂದಾಚೆಗೆ ಯಶಸ್ವಿ ನಟಿಯಾಗಿ, ಸಂಸದೆಯಾಗಿ ಹೀಗೆ ನಾನಾ ಆಯಾಮಗಳಲ್ಲಿ ವೃತ್ತಿ ಬದುಕಿನ ಉತ್ತುಂಗಕ್ಕೇರಿದರು.
ಇದನ್ನೂ ಓದಿ : ಶೂಟಿಂಗ್ ಮುಗಿಸಿದ ‘ಝೀಬ್ರಾ : ಶೀಘ್ರದಲ್ಲೇ ತೆರೆಗೆ ಡಾಲಿ-ಸತ್ಯದೇವ್ ಕಾಂಬಿಷೇನ್ ಸಿನಿಮಾ
ಸದ್ಯ ನಟನೆಯಿಂದ ದೂರವಿದ್ದರೂ ಸಿನಿಮಾ ರಂಗದ ಜೊತೆಗೇ ಇರುವ ರಮ್ಯ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ ಈಗ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿರೋ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಲ್ಲಿ ನಟಿ ರಮ್ಯ ಕಮ್ ಬ್ಯಾಕ್ ಮಾಡಬೇಕಿತ್ತು.

ಆದರೆ ಕೆಲ ಕಾರಣಗಳಿಂದಾಗಿನಟಿ ರಮ್ಯ ಆ ಸಿನಿಮಾದಲ್ಲಿ ಕೇವಲ ನಿರ್ಮಾಪಕಿಯಾಗಿ ಮಾತ್ರ ಉಳಿದುಕೊಂಡಿದ್ದಾರೆ. ಮುಂದಿನ ದಿನದಲ್ಲಿ ಸೂಕ್ತ ಚಿತ್ರಕಥೆ ಸಿಕ್ಕಾಗ ಮತ್ತೆ ಬಣ್ಣ ಹಚ್ಚೋದಾಗಿ ಹಲವು ಸಂದರ್ಭದಲ್ಲಿ ನಟಿ ರಮ್ಯ ಹೇಳಿಕೊಂಡಿದ್ದಾರೆ.
ಸದ್ಯ ಬೆಂಗಳೂರಿನಿಂದ ದೂರವುಳಿದಿರೋ ರಮ್ಯ ವಿದೇಶದಲ್ಲೇ ತಮ್ಮ ಲಾಂಗ್ ವೆಕೆಶನ್ ಕಳೆಯುತ್ತಿದ್ದಾರೆ. ಆಗಾಗ ಸಿನಿಮಾ ರಂಗದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ರಮ್ಯ ಕಿರಿಯರ ಸಿನಿಮಾಗಳಿಗೂ ಪ್ರೋತ್ಸಾಹ ನೀಡೋದ್ರಲ್ಲಿ ಹಿಂದೆಬಿದ್ದಿಲ್ಲ.
ಇದನ್ನೂ ಓದಿ : ರಾಜ್ ಕಪ್- 6 ಜರ್ಸಿ ಬಿಡುಗಡೆಗೊಳಿಸಿದ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್
ರಮ್ಯ ಯಾವಾಗ ಯಾರೊಂದಿಗೂ ಕಾಣಿಸಿಕೊಂಡರೂ ಗಾಸಿಪ್ ಸೃಷ್ಠಿಯಾಗೋದು ಸಹಜ. ಈಗಲೂ ರಮ್ಯ ಹುಟ್ಟುಹಬ್ಬದ ವಿಡಿಯೋ ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ. ಆದರೆ ದಿ. ಪುನೀತ್ ರಾಜಕುಮಾರ್ ರಿಂದ ಆರಂಭಿಸಿ ಎಲ್ಲರೊಂದಿಗೂ ಆತ್ಮೀಯ ಸ್ನೇಹ ಹೊಂದಿದ್ದ ರಮ್ಯ ಇಂತಹ ವಿವಾದ ಹಾಗೂ ಗಾಸಿಪ್ ಗಳ ಜೊತೆಗೆ ಬಹುದೂರ ಸಾಗಿ ಬಂದಿದ್ದಾರೆ ಅನ್ನೋದು ಕೂಡ ಅಷ್ಟೇ ಸತ್ಯ. ಏನೇ ಇರಲಿ ಅಭಿಮಾನಿಗಳಿಗಾಗಿ ರಮ್ಯ ಮತ್ತೊಮ್ಮೆ ಬೆಳ್ಳಿತೆರೆಗೆ ಬರಲಿ ಅನ್ನೋದಷ್ಟೇ ನಮ್ಮ ಆಶಯ.
Actress Ramya Special Birthday Vinay Raj Kumar Joins Sandalwood Queen