horoscope today : ದಿನಭವಿಷ್ಯ 02 ಡಿಸೆಂಬರ್ 2023 : ಪುಷ್ಯ ನಕ್ಷತ್ರದ ಪ್ರಭಾವ, ಬ್ರಹ್ಮ ಯೋಗ ಈ ರಾಶಿಯವರಿಗೆ ಲಾಭ

Horoscope today : ದಿನಭವಿಷ್ಯ 02 ಡಿಸೆಂಬರ್ 2023 ಶನಿವಾರ. ಇಂದು ದ್ವಾದಶ ರಾಶಿಗಳ ಮೇಲೆ ಪುಷ್ಯ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಬ್ರಹ್ಮ ಯೋಗದಿಂದ ಕೆಲವು ರಾಶಿಯವರು ವಿಶೇಷ ಲಾಭವನ್ನು ಪಡೆಯುತ್ತಾರೆ.

Horoscope today : ದಿನಭವಿಷ್ಯ 02 ಡಿಸೆಂಬರ್ 2023 ಶನಿವಾರ. ಇಂದು ದ್ವಾದಶ ರಾಶಿಗಳ ಮೇಲೆ ಪುಷ್ಯ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಬ್ರಹ್ಮ ಯೋಗದಿಂದ ಕೆಲವು ರಾಶಿಯವರು ವಿಶೇಷ ಲಾಭವನ್ನು ಪಡೆಯುತ್ತಾರೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ಯಾವುದೇ ವ್ಯವಹಾರವನ್ನು ಮಾಡುವಾಗ ತಾಳ್ಮೆಯಿಂದ ಇರಿ. ಸಂಬಂಧಿಕರ ಜೊತೆಗಿನ ವ್ಯವಹಾರದಲ್ಲಿ ಹಣವನ್ನು ಮರಳಿ ಪಡೆಯುವ ಸಾಧ್ಯತೆ ತೀರಾ ಕಡಿಮೆ. ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಿ. ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ.

ವೃಷಭ ರಾಶಿ ದಿನಭವಿಷ್ಯ
ಸಂಗಾತಿಯಿಂದ ನೀವು ಅಚ್ಚರಿಯ ಉಡುಗೊರೆಯನ್ನು ಪಡೆಯುವಿರಿ. ಸಂಬಂಧಿಕರಿಗೆ ಸಹಾಯ ಮಾಡಲು ಹಣವನ್ನು ಹೊಂದಿಸುವಿರಿ. ಸಾಲವಾಗಿ ನೀಡಿರುವ ಹಣವು ಇಂದು ನಿಮಗೆ ಮರಳು ಬರುವುದು ಕಷ್ಟ. ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸುವ ಸಾಧ್ಯತೆಯಿದೆ.

ಮಿಥುನ ರಾಶಿ ದಿನಭವಿಷ್ಯ
ಉದ್ಯೋಗಿಗಳು ಇಂದು ಸಕಾರಾತ್ಮಕ ಫಲಿತಾಂಶವನ್ನು ಪಡೆಯುತ್ತಾರೆ. ಬಾಕಿ ಇರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಸಹೋದರರ ಸಹಕಾರ ದೊರೆಯಲಿದೆ. ಕುಟುಂಬ ಸದಸ್ಯರ ಜೊತೆಗೆ ಭಿನ್ನಾಭಿಪ್ರಾಯ ಎದುರಾಗಬಹುದು. ಯಾವುದಕ್ಕೂ ಮೌನವಾಗಿ ಇರುವುದು ಉತ್ತಮ.

ಕರ್ಕಾಟಕ ರಾಶಿ ದಿನಭವಿಷ್ಯ
ಆಸ್ತಿ ಖರೀದಿಸುವುದು ಭವಿಷ್ಯದಲ್ಲಿ ನಿಮಗೆ ದೊಡ್ಡ ಮಟ್ಟದ ಲಾಭವನ್ನು ತಂದುಕೊಡಲಿದೆ. ಆಧ್ಯಾತ್ಮಿಕ ವಿಚಾರದಲ್ಲಿ ಅನುಕೂಲ. ಮಕ್ಕಳ ಶಿಕ್ಷಣವ ವಿಚಾರದಲ್ಲಿ ಕುಟುಂಬದ ಹಿರಿಯ ಸದಸ್ಯರ ಸಲಹೆಯನ್ನು ಪಡೆಯುವಿರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

ಇದನ್ನೂ ಓದಿ : ಇಂಗ್ಲೆಂಡ್ ಟಿ20, ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಮಹಿಳಾ ತಂಡ ಪ್ರಕಟಿಸಿದ ಬಿಸಿಸಿಐ

ಸಿಂಹ ರಾಶಿ ದಿನಭವಿಷ್ಯ
ಐಷಾರಾಮಿ ವಸ್ತುಗಳ ಖರೀದಿಗಾಗಿ ಹಣ ವ್ಯಯಿಸುವಿರಿ. ಕುಟುಂಬ ಸದಸ್ಯರು ನಿಮ್ಮ ಬಗ್ಗೆ ಅಸೂಯೆ ಪಡುತ್ತಾರೆ. ಕುಟುಂಬದ ಸದಸ್ಯರ ಸಹಕಾರದಿಂದ ಅಮೂಲ್ಯವಾದ ವಸ್ತುವನ್ನು ಪಡೆಯುವಿರಿ. ವ್ಯವಹಾರದಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ದೂರದ ಬಂಧುಗಳ ಆಗಮನದಿಂದ ನಿಮಗೆ ಲಾಭವಿದೆ.

ಕನ್ಯಾ ರಾಶಿ ದಿನಭವಿಷ್ಯ
ಸಾಮಾಜಿಕವಾಗಿ ಖ್ಯಾತಿ, ಪ್ರತಿಷ್ಠೆ ಹೆಚ್ಚಲಿದೆ. ಖರ್ಚು ವೆಚ್ಚಗಳು ಅಧಿಕವಾಗಲಿದೆ. ಮಗುವಿನ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಪಡೆಯುತ್ತೀರಿ. ನಿಮ್ಮ ಮನಸಿನಲ್ಲ ನಕಾರಾತ್ಮಕ ಆಲೋಚನೆಗಳು ಬಾರದಂತೆ ಎಚ್ಚರಿಕೆಯನ್ನು ವಹಿಸಿ. ಆಗ ಮಾತ್ರ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.

ತುಲಾ ರಾಶಿ ದಿನಭವಿಷ್ಯ
ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಅನುಕೂಲ ಪರಿಸ್ಥಿತಿ. ಮೇಲಾಧಿಕಾರಿಗಳಿಂದ ಸಹಕಾರ ದೊರೆಯಲಿದೆ. ನಿಮ್ಮ ಮೇಲಿನ ಜವಾಬ್ದಾರಿಗಳು ಹೆಚ್ಚಳವಾಗಲಿದೆ. ಕುಟುಂಬದ ಸದಸ್ಯರಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ. ಸಾಮಾಜಿಕವಾಗಿ ಗೌರವ ದೊರೆಯಲಿದೆ. ಸಂಗಾತಿಯಿಂದ ಮನಸಿಗೆ ಸಂತಸ.

Horoscope Today 02 December 2023 Zodiac sign brahma yoga
Image Credit to Original Source

ವೃಶ್ಚಿಕ ರಾಶಿ ದಿನಭವಿಷ್ಯ
ಸಹೋದರ ಸಂಬಂಧಿಯಿಂದ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಅನಗತ್ಯ ಖರ್ಚುಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚುತ್ತಿರುವ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ನಿಮ್ಮ ಮಕ್ಕಳ ವಿಚಾರದಲ್ಲಿ ಕೆಲವೊಂದು ಶುಭ ಸುದ್ದಿಗಳನ್ನು ಕೇಳುವಿರಿ. ದೂರದ ಬಂಧುಗಳ ಆಗಮನದಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಧನಸ್ಸುರಾಶಿ ದಿನಭವಿಷ್ಯ
ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಿರಿ. ಯಾರೊಂದಿಗೂ ವ್ಯವಹಾರ ಮಾಡುವಾಗ ಜಾಗರೂಕರಾಗಿ ಇರಬೇಕು. ನಿಮಗೆ ಕೆಲವೊಬ್ಬರು ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆಯಿದೆ. ಧಾರ್ಮಿಕ ಕಾರ್ಯಗಳಿಂದ ಮನಸಿಗೆ ನೆಮ್ಮದಿ.

ಇದನ್ನೂ ಓದಿ : ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ: ಆತಂಕದಲ್ಲಿ ಪೋಷಕರು : ಡಿಸಿಎಂ ನಿವಾಸಕ್ಕೂ ತಟ್ಟಿದ ಬಿಸಿ

ಮಕರ ರಾಶಿ ದಿನಭವಿಷ್ಯ
ಬಾಕಿ ಇರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಮನಸಿಗೆ ಕೆಲವೊಂದು ವಿಚಾರಗಳು ಸಂತಸವನ್ನು ತರಲಿದೆ. ಕುಟುಂಬದ ಸದಸ್ಯರ ಜೊತೆಗೆ ಇಂದು ಸಂತಸದ ಕ್ಷಣಗಳನ್ನು ಕಳೆಯುತ್ತೀರಿ. ಶುಭ ಕಾರ್ಯಗಳಲ್ಲಿ ನೀವು ತೊಡಗುವ ಸಾಧ್ಯತೆಯಿದೆ.

ಕುಂಭ ರಾಶಿ ದಿನಭವಿಷ್ಯ
ಭವಿಷ್ಯದ ದೃಷ್ಟಿಯಿಂದ ಹೊಸ ಯೋಜನೆಗಳನ್ನು ಆರಂಭಿಸುತ್ತೀರಿ. ಮಕ್ಕಳು, ಪತ್ನಿಯ ವಿಚಾರದಲ್ಲಿ ನೆಮ್ಮದಿ ದೊರೆಯಲಿದೆ. ಹಲವು ಸಮಯಗಳಿಂದ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಹಿರಿಯ ಸದಸ್ಯರ ಸಲಹೆ ಇಂದು ವ್ಯವಹಾರಿಕವಾಗಿ ಫಲಕೊಡಲಿದೆ. ಅರ್ಪಿಸಬೇಕು.

ಇದನ್ನೂ ಓದಿ : ಭಾರತದಲ್ಲಿ ಟಾಪ್ 10 ಕಲುಷಿತ ನಗರಗಳ ಪಟ್ಟಿ : ದೆಹಲಿಗೆ ಅಗ್ರಸ್ಥಾನ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ ?

ಮೀನ ರಾಶಿ ದಿನಭವಿಷ್ಯ
ಕುಟುಂಬದ ಜೀವನ ಸಂತೋಷವಾಗಿ ಇರಲಿದೆ. ಬುದ್ದಿವಂತಿಕೆಯನ್ನು ಬಳಸಿಕೊಂಡು ವ್ಯವಹಾರಕ್ಕೆ ಸಂಬಂಧಿಸಿದ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳುವಿರಿ. ಕೆಲವೊಂದು ವಿಚಾರಗಳಲ್ಲಿ ನೀವು ಇಂದು ಯಶಸ್ವಿ ಆಗುತ್ತೀರಿ. ನಿಮ್ಮ ಚಿಂತೆ ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆ. ದೂರದ ಬಂಧುಗಳು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ.

Horoscope Today 02 December 2023 Zodiac sign brahma yoga

Comments are closed.