ಸೋಮವಾರ, ಏಪ್ರಿಲ್ 28, 2025
HomeCinemaShraddha Arya : ಪತಿ ಜೊತೆ ನಟಿ ಶ್ರದ್ಧಾ ಆರ್ಯಾ ಟ್ರಿಪ್ : ಅಭಿಮಾನಿಗಳಿಗೆ ಹಾಟ್...

Shraddha Arya : ಪತಿ ಜೊತೆ ನಟಿ ಶ್ರದ್ಧಾ ಆರ್ಯಾ ಟ್ರಿಪ್ : ಅಭಿಮಾನಿಗಳಿಗೆ ಹಾಟ್ ಪೋಟೋಸ್ ಗಿಫ್ಟ್

- Advertisement -

ಮಾಲ್ಡೀವ್ಸ್ ಅನ್ನೋದು ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ಸೆಲೆಬ್ರೆಟಿಗಳ ಹಾಟ್ ಫೆವರಿಟ್ ಪ್ಲೇಸ್. ಖುಷಿಗೆ ದುಃಖಕ್ಕೆ ಎಲ್ಲದಕ್ಕೂ ಸೆಲೆಬ್ರೆಟಿಗಳು ಮಾಲ್ಡೀವ್ಸ್ ಹಾರೋದು ಕಾಮನ್. ಈ ಸಾಲಿಗೆ ಕನ್ನಡದ ಡಾರ್ಲಿಂಗ್ ಕೃಷ್ಣಾನಿಂದ ಆರಂಭಿಸಿ ಬಾಲಿವುಡ್ ನ ದಿಶಾ, ಜಾಹ್ನವಿ ಎಲ್ಲರೂ ಸೇರುತ್ತಾರೆ. ಈಗ ಬಾಲಿವುಡ್ ನಟಿ ಶ್ರದ್ಧಾ ಆರ್ಯಾ ( Shraddha Arya ) ಮಾಲ್ಡೀವ್ಸ್ ನಲ್ಲಿ ಹಾಟ್ ಪೋಸ್ ಗಳಲ್ಲಿ ಕಾಣಿಸಿಕೊಳ್ಳೋ ಮೂಲಕ ಸೋಷಿಯಲ್ ಮೀಡಿಯಾಕ್ಕೆ ಕಿಚ್ಚು ಹಚ್ಚಿದ್ದಾರೆ.

ಪತಿ ಹಾಗೂ ಭಾರತೀಯ ನೌಕಾಪಡೆಯ ಅಧಿಕಾರಿ ರಾಹುಲ್ ನಗಲ್ ಜೊತೆ ವಿವಾಹವಾಗಿರುವ ಶ್ರದ್ಧಾ ಆರ್ಯ, ಪತಿಯ ಜೊತೆಗೆ ವೆಕೆಶನ್ ಗಾಗಿ ಮಾಲ್ಡೀವ್ಸ್ ತೆರಳಿದ್ದು ಹಾಟ್ ಪೋಟೋಗಳ ಮೂಲಕ ತಮ್ಮ ಟ್ರಿಪ್ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಬಾಲಿವುಡ್ ಮತ್ತು ಹಿಂದಿ ಕಿರುತೆರೆಯಲ್ಲಿ ಸಕ್ರಿಯವಾಗಿರೋ ಶ್ರದ್ಧಾ ಆರ್ಯಾ ತಮ್ಮ ಮಾದಕ ನೋಟ ಹಾಗೂ ಬೋಲ್ಡ್ ಲುಕ್‌ನಿಂದಲೇ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿರೋ ಶ್ರದ್ಧಾ 2004 ರಲ್ಲಿ ಬಾಲಿವುಡ್ ಗೆ ಪ್ರವೇಶಿಸಿದ್ದಾರೆ. ಯೂನಿವರ್ಸಿಟಿ ಆಫ್ ಮುಂಬೈನಿಂದ ಎಕಾನಿಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಶ್ರದ್ಧಾ. ತಮಿಳು, ತೆಲುಗು, ಕನ್ನಡ ಹಾಗೂ ಮಲೆಯಾಳಂ ಸಿನಿಮಾದಲ್ಲೂ‌ನಟಿಸಿದ್ದಾರೆ.

ಇದನ್ನೂ ಓದಿ : ಜೊತೆ ಜೊತೆಯಲಿ ಮೇಲೆ ಮುನಿಸಿಕೊಂಡ ಪ್ರೇಕ್ಷಕ: ಆರ್ಯವರ್ಧನ್ ಮೇಲೆಯೇ ವೀಕ್ಷಕರ ಆಕ್ರೋಶ

ಹಿಂದಿ ಕಿರುತೆರೆಯ ಕುಂಡಲಿ ಭಾಗ್ಯ ಸೀರಿಯಲ್ ಮೂಲಕ ಪ್ರಸಿದ್ಧಿಗೆ ಬಂದ ಶ್ರದ್ಧಾ ಆರ್ಯಾ ಹಲವು ರಿಯಾಲಿಟಿ ಶೋದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹನಿಮೂನ್ ನಲ್ಲೂ ಬಿಕನಿ ಪೋಟೋ ಶೇರ್ ಮಾಡುವ ಮೂಲಕ ತಮ್ಮ ಬೋಲ್ಡ್ ನಡೆ ಪ್ರದರ್ಶಿಸಿದ್ದ ಶ್ರದ್ಧಾ ಆರ್ಯಾ ಮತ್ತೊಮ್ಮೆ ಹಾಟ್ ಪೋಟೋಸ್ ಮೂಲಕ ಮಿಂಚಿದ್ದಾರೆ.

ಇದನ್ನೂ ಓದಿ : ಇದುವರೆಗೂ ನಿಮಗೆಷ್ಟು ಬ್ರೇಕ್ ಅಪ್ ಆಗಿದೆ: ಅಭಿಮಾನಿ ಪ್ರಶ್ನೆಗೆ ಶೃತಿ ಹಾಸನ್ ಉತ್ತರವೇನು ಗೊತ್ತಾ?!

ಇದನ್ನೂ ಓದಿ : ಸಖತ್ ಗಳಿಕೆ ಜೊತೆ ಸದ್ದು ಮಾಡಿದ ಪುಷ್ಪ: ಸಿನಿಮಾಗೆ ಅಲ್ಲೂ, ರಶ್ಮಿಕಾ, ಸಮಂತಾ ಪಡೆದ ಸಂಭಾವನೆ ಎಷ್ಟು ಗೊತ್ತಾ

ಇದನ್ನೂ ಓದಿ : ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ಅಪ್ಪು ಪೋಟೋ: ಕೆಎಂಎಫ್ ಅಧಿಕಾರಿಗಳು ಹೇಳಿದ್ದೇನು ಗೊತ್ತಾ?!

(Actress Shraddha Arya Trip With Her husband, Hot Potos Gift For Fans)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular