WhatsApp Ban : 17 ಲಕ್ಷಕ್ಕೂ ಹೆಚ್ಚು ಭಾರತೀಯ ಅಕೌಂಟ್‌ಗಳನ್ನು ಬ್ಯಾನ್ ಮಾಡಿದ ವಾಟ್ಸಾಪ್!

ಇನ್ಸ್ಟಾಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ನವೆಂಬರ್ 21ರಂದು ಐಟಿ ರೂಲ್ಸ್ ಪ್ರಕಾರ ಸುಮಾರು 17,59,000 ಅಕೌಂಟ್‌ಗಳನ್ನು ಬ್ಯಾನ್ (WhatsApp Ban) ಮಾಡಿದೆ. ವರದಿಯ ಪ್ರಕಾರ, ವಾಟ್ಸಾಪ್ ಕುಂದು ಕೊರತೆಯನ್ನು ಹೇಳಿ 609 ಕಂಪ್ಲೇಂಟ್ ಪಡೆದಿದೆ. ಅದರಲ್ಲಿ ಈಗಾಗಲೇ 36ರ ವಿರುದ್ಧ ಆಕ್ಷನ್ ಕೈಗೊಂಡಿದ್ದಾರೆ. ಈ ಹಿಂದೆ 2021 ಅಕ್ಟೊಬರ್‌ನಲ್ಲಿಯೂ ಮೆಟಾ (Meta) ಅಧೀನದ ವಾಟ್ಸಾಪ್ ಭಾರತದಲ್ಲಿ ಸುಮಾರು ಇನ್ನೂರು ಮಿಲಿಯನ್ ಅಕೌಂಟ್ ಬ್ಯಾನ್ ಮಾಡಿತ್ತು. ಇಷ್ಟೆಲ್ಲಾ ಬ್ಯಾನ್ ಆದರೂ, ವಾಟ್ಸಾಪ್ ಭಾರತದಲ್ಲಿ ಹೊಂದಿರುವ ಬಳಕೆದಾರರ ಸಂಖ್ಯೆಯಲ್ಲೇನೂ ಅಪಾರ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ.

ಐಟಿ ರೂಲ್ಸ್ 2021 ರ ಪ್ರಕಾರ, ನಾವು ಆರು ತಿಂಗಳ ರಿಪೋರ್ಟ್ ಪಬ್ಲಿಶ್ ಮಾಡಿದ್ದೇವೆ. ಅದರಲ್ಲಿ ಜನರ ದೂರು ಹಾಗೂ ಅದಕ್ಕೆ ತೆಗೆದುಕೊಂಡ ಆಕ್ಷನ್ ಬಗ್ಗೆ ಮಾಹಿತಿ ನೀಡಿದ್ದೇವೆ. ಇದರ ಜೊತೆಗೆ ವಾಟ್ಸಾಪ್ ನಿಯಮಗಳನ್ನು ಸೇರಿಸಲಾಗಿದೆ” ಎಂದು ವಾಟ್ಸಾಪ್ ಉದ್ಯೋಗಿಯೊಬ್ಬರು ಹೇಳಿದ್ದಾರೆ. ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ ರಿಪೋರ್ಟ್ ಗ್ರಾಹಕರ ದೂರು ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಿದೆ.

ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಮೆಸೇಜಿಂಗ್ ಪ್ಲಾಟ್ ಫಾರ್ಮ್‌ಗಳ.ಪೈಕಿ ವಾಟ್ಸಾಪ್ ಸಾಕಷ್ಟು ಸೆಕ್ಯೂರ್ ಆಗಿದೆ. ಇದರಲ್ಲಿ ಮಾನಹಾನಿ ಹಾಗೂ ಬೆದರಿಕೆಯ ಸಂದೇಶಗಳನ್ನು ತಡೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಆರ್ಟಿಫಿಶಿಯಲ್ ಇಂಟಲಿಜನ್ಸ್, ಕಟಿಂಗ್ ಏಡ್ಜ್ ಟೆಕ್ನಾಲಜಿ ಹಾಗೂ ಉನ್ನತ ತಜ್ಞರ ಸಮಿತಿ ಇದೆ.

ಭಾರತದಲ್ಲಿ ಇಷ್ಟೊಂದು ಅಕೌಂಟ್ಸ್ ಬ್ಯಾನ್ ಆಗಲು ಕಾರಣ ಏನು?
ಪ್ರಸ್ತುತ ಬ್ಯಾನ್ ಆದ ಅಕೌಂಟ್‌ಗಳಲ್ಲಿ 95% ಅಕೌಂಟ್‌ಗಳು ಕಾನೂನುಬಾಹಿರ ಬಳಕೆಗೆ ಸಂಬಂಧಿಸಿವೆ. ಮೆಸೇಜಿಂಗ್ ಅಪ್ಲಿಕೇಶನ್ ಅಕ್ಟೋಬರ್‌ನಲ್ಲಿ 500 ದೂರುಗಳ ವರದಿಗಳನ್ನು ಸ್ವೀಕರಿಸಿದೆ. ತನ್ನ ಇತ್ತೀಚಿನ ವರದಿಯಲ್ಲಿ, ವಾಟ್ಸಾಪ್ ನವೆಂಬರ್ 2021 ರಂದು 602 ಬಳಕೆದಾರರ ವರದಿಗಳನ್ನು ಸ್ವೀಕರಿಸಿದೆ ಎಂದು ಹೇಳಿಕೊಂಡಿದೆ. 149 ಖಾತೆಗಳಿಗೆ ಅಕೌಂಟ್ ಸಪೋರ್ಟ್ ಸಮಸ್ಯೆಗಳು, 357 ನಿಷೇಧ ಮನವಿ, 48 ಪ್ರಾಡಕ್ಟ್ ಸಪೋರ್ಟ್ ವರದಿಗಳು ಮತ್ತು 27 ಸುರಕ್ಷತಾ ಸಮಸ್ಯೆಗಳ ವರದಿಗಳು. ಸ್ವೀಕರಿಸಿದ ವರದಿಗಳ ಆಧಾರದ ಮೇಲೆ, ಈ ಸಮಯದಲ್ಲಿ ನಿಷೇಧ ಮೇಲ್ಮನವಿ ವರ್ಗದ ಅಡಿಯಲ್ಲಿ 36 ಖಾತೆಗಳ ವಿರುದ್ಧ ಆಕ್ಷನ್ ಕೈಗೊಳ್ಳಲಾಗಿದೆ.

ಮೇ ತಿಂಗಳಲ್ಲಿ ಜಾರಿಗೆ ಬರಲಿರುವ ಹೊಸ ಐಟಿ ಮಾರ್ಗಸೂಚಿಗಳು, 5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಸ್ವೀಕರಿಸಿದ ದೂರುಗಳು ಮತ್ತು ತೆಗೆದುಕೊಂಡ ಕ್ರಮಗಳನ್ನು ವಿವರಿಸುವ ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸಬೇಕೆಂದು ಒತ್ತಾಯಿಸುತ್ತದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಸಿಸ್ಟಮ್ ಪ್ಲಾಟ್‌ಫಾರ್ಮ್ ಹೊಂದಿದ್ದರೂ, ಇದು ವಿಷಯ ಅಥವಾ ಸಂದೇಶಗಳಿಗೆ ಯಾವುದೇ ಗೋಚರತೆಯನ್ನು ಖಾತ್ರಿಪಡಿಸುವುದಿಲ್ಲ. ಅದರ ನೆಟ್‌ವರ್ಕ್‌ನಲ್ಲಿ ದುರ್ಬಳಕೆಯನ್ನು ಪತ್ತೆಹಚ್ಚಲು ಮತ್ತು ತಡೆಯಲು, ಬಳಕೆದಾರರ ವರದಿಗಳು, ಪ್ರೊಫೈಲ್ ಚಿತ್ರಗಳು, ಗುಂಪು ಫೋಟೋಗಳು ಮತ್ತು ವಿವರಣೆಗಳು, ಡೇಟಾವನ್ನು ವಾಟ್ಸಾಪ್ ಬಳಸುತ್ತದೆ.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

(WhatsApp ban 1759000 Indian Accounts)

Comments are closed.