ಸ್ಯಾಂಡಲ್‌ವುಡ್‌ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ ಖ್ಯಾತಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸರಣಿ ಸಿನಿಮಾ ಕೆಜಿಎಫ್‌ಗೆ ಸಲ್ಲುತ್ತದೆ. ಇಡೀ ಭಾರತೀಯ ಸಿನಿರಂಗ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಈ ಸಿನಿಮಾ ಮಾಡಿದೆ. ಇದರಲ್ಲಿ ನಟಿಸಿದ ಪ್ರತಿಯೊಬ್ಬರು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಈ ಸರಣಿ ಸಿನಿಮಾದಲ್ಲಿ ನಟಿ ಶ್ರೀನಿಧಿ ಶೆಟ್ಟಿ (Actress Srinidhi Shetty) ನಾಯಕಿ ಪಾತ್ರದಲ್ಲಿ ಖಡಕ್ ಡೈಲಾಗ್ ಹೇಳುವ ಮೂಲಕ ತಮ್ಮ ಪಾತ್ರಕ್ಕೆ ಸಿನಿಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದಿದ್ದಾರೆ. ಸದ್ಯ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋದ ಜೊತೆಗೆ ಹಾಕಿರುವ ಪ್ರೀತಿ ತುಂಬಿದ ಸಾಲುಗಳು ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಕೂಡ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ನಟಿ ಶ್ರೀನಿಧಿ ಶೆಟ್ಟಿ ತಮ್ಮ ಟ್ವೀಟರ್ ಖಾತೆಯಲ್ಲಿ, “ನಾನು ನಿನ್ನೊಂದಿಗೆ ಸ್ವಲ್ಪ ಹೆಚ್ಚು ಪ್ರೀತಿಯಲ್ಲಿ ಬೀಳುತ್ತೇನೆ. ಸ್ವಲ್ಪ, ಸ್ವಲ್ಪ, ಸ್ವಲ್ಪ ಹೆಚ್ಚು ಪ್ರತಿ ಬಾರಿಯೂ ನಾನು ದಾರಿ ತಪ್ಪಿದೆ ಎಂದು ಭಾವಿಸುತ್ತೇನೆ. ನಾನು ನಿನ್ನೊಂದಿಗೆ ಸ್ವಲ್ಪ ಹೆಚ್ಚು ಪ್ರೀತಿಯಲ್ಲಿ ಬೀಳುತ್ತೇನೆ. ಮೊದಲಿಗಿಂತ ಸ್ವಲ್ಪ, ಸ್ವಲ್ಪ ಹೆಚ್ಚು ನಾನು ಖಚಿತವಾಗಿಲ್ಲದ ದಿನಗಳಲ್ಲಿ ಸಹ ನಾನು ನಿನ್ನೊಂದಿಗೆ ಸ್ವಲ್ಪ ಹೆಚ್ಚು ಪ್ರೀತಿಯಲ್ಲಿ ಬೀಳುತ್ತೇನೆ.”ಎಂದು ಬರೆದು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ಸಾಲುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದು, ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.
I fall in love with you a little bit more
— Srinidhi Shetty (@SrinidhiShetty7) March 9, 2023
Little bit, little bit, a little bit more
Every time I think I've lost my way
I fall in love with you a little bit more
Little bit, little bit more than before
Even on the days I'm not so sure
I fall in love with you a little bit more♥️ pic.twitter.com/7gZE5cdsNW
ಮಿಸ್ ಸೂಪರ್ ನ್ಯಾಷನಲ್ ಗೆದ್ದ ನಂತರ, ಶ್ರೀನಿಧಿ ಸಿನಿಮಾಗಳಲ್ಲಿ ನಟಿಸಲು ಬಂದ ಅವಕಾಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ಅವರು ಆಕ್ಷನ್ ಸಿನಿಮಾ ಕೆ.ಜಿ.ಎಫ್. 2018ರಲ್ಲಿ, ಪ್ರಶಾಂತ್ ನೀಲ್ ನಿರ್ದೇಶಿಸಿದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದು ಆ ಸಮಯದಲ್ಲಿ ಕನ್ನಡ ಸಿನಿರಂಗದ ಅತಿ ದೊಡ್ಡ ಬಜೆಟ್ ಸಿನಿಮಾವಾಗಿತ್ತು. ಸಿನಿಮಾದ ಮೊದಲ ಭಾಗ ಕೆ.ಜಿ.ಎಫ್ ಹಾಗೂ ಅಧ್ಯಾಯ 2 ರಲ್ಲಿ ಅವರು ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಚಿಯಾನ್ ವಿಕ್ರಮ್ ಅವರೊಂದಿಗೆ ತಮಿಳು ಸಿನಿಮಾ ‘ಕೋಬ್ರಾ’ದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ ತೂಗುದೀಪ್ ನಟನೆಯ ಕಾಟೇರ ಸಿನಿಮಾದಲ್ಲಿ ವಿಜಯ್ ಸೇತುಪತಿ !
ಇದನ್ನೂ ಓದಿ : ನಟ ರಕ್ಷಿತ್ ಶೆಟ್ಟಿ, ಸಿಂಪಲ್ ಸುನಿ ಕಾಂಬಿನೇಷನ್ ಸಿನಿಮಾ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿಗೆ ದಶಕದ ಸಂಭ್ರಮ
ಇದನ್ನೂ ಓದಿ : ಅರ್ಥಪೂರ್ಣ ಹೋಳಿ ಆಚರಿಸಿದ ಹಿರಿಯ ನಟಿ ಶ್ರುತಿ : ಕ್ಯೂಟ್ ವಿಡಿಯೋ ವೈರಲ್
ಇವರ ಪೂರ್ಣ ಹೆಸರು ಶ್ರೀನಿಧಿ ರಮೇಶ್ ಶೆಟ್ಟಿ ಭಾರತೀಯ ರೂಪದರ್ಶಿ, ನಟಿ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರರಾಗಿ ಗುರುತಿಸಿಕೊಂಡಿದ್ದಾರೆ. ಇವರು 2016 ರಲ್ಲಿ ಮಿಸ್ ದಿವಾ ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿಸಿ ಮಿಸ್ ಸೂಪರ್ ನ್ಯಾಷನಲ್ ಇಂಡಿಯಾ ಎಂದು ಕಿರೀಟವನ್ನು ಪಡೆದರು. ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
Actress Srinidhi Shetty: KGF Queen Actress Srinidhi Shetty’s Love Lines Are Viral