ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸದ್ಯ ಊಟಿಯಂತಹ ವಾತಾವರಣ ಇದೆ. ಆದರೆ ನಾಳೆ ಈ ತಣ್ಣಗಿನ ವಾತಾವರಣ ಬಿಸಿ ಏರಬಹುದು. ಯಾಕೆಂದರೇ ನಾಳೆ ಉದ್ಯಾನ ನಗರಿಗೆ ಮಾಜಿನೀಲಿ ಚಿತ್ರ ತಾರೆ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone ) ಬರ್ತಿದ್ದಾರೆ. ಗುರುವಾರ ನಗರದ ಒರಾಯನ್ ಮಾಲ್ ನಲ್ಲಿ ನಡೆಯಲಿರೋ ಸಿನಿಮಾ ಕಾರ್ಯಕ್ರಮವೊಂದಕ್ಕೆ ಸನ್ನಿ ಲಿಯೋನ್ ಬರ್ತಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ನಗರದ ಸನ್ನಿ ಲಿಯೋನ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಸನ್ನಿ ಲಿಯೋನ್ ಸ್ಯಾಂಡಲ್ ವುಡ್ ನಲ್ಲಿ ತೆರೆಗೆ ಬರಲಿರೋ ಛಾಂಪಿಯನ್ ಸಿನಿಮಾದ ಐಟಂ ಸಾಂಗ್ ವೊಂದರಲ್ಲಿ ಸೊಂಟ ಬಳುಕಿಸಿ ಕುಣಿದಿದ್ದಾರೆ. ಇದೆ ಸಿನಿಮಾ ಹಾಗೂ ಸಾಂಗ್ ಪ್ರಮೋಶನ್ ಗಾಗಿ ಸನ್ನಿ ಲಿಯೋನ್ ಬೆಂಗಳೂರಿಗೆ ಬರ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಹಾಟ್ ಹಾಟ್ ಬೆಡಗಿ ಸನ್ನಿ ಲಿಯೋನ್ (Sunny Leone) ಹುಟ್ಟುಹಬ್ಬ ಆಚರಿಸಿ ಕೊಂಡಿದ್ದಾರೆ. ಅವರ ಹುಟ್ಟುಹಬ್ಬವನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದರು.

ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಮಂಡ್ಯದ ತುಂಡ ಹೈಕ್ಳಳು ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬವನ್ನು ಊರ ಹಬ್ಬದಂತೆ ಸಂಭ್ರಮಿಸಿದ್ದರು. ಊರಿನಲ್ಲಿ ಕೇಕ್ ಕತ್ತರಿಸಿ, ಬಿರಿಯಾನಿ ಉಣಬಡಿಸಿ ಸನ್ನಿ ಹುಟ್ಟುಹಬ್ಬ ಅಚರಿಸಿದ್ದು ಮಾತ್ರವಲ್ಲದೇ ರಕ್ತದಾನ ಕೂಡ ಮಾಡಿ ಗಮನ ಸೆಳೆದಿದ್ದರು. ಇನ್ನು ಸನ್ನಿ ಲಿಯೋನ್ ಬರ್ತಡೇಯನ್ನು ಮಂಡ್ಯದಲ್ಲಿ ರಕ್ತದಾನದ ಮೂಲಕ ಸೆಲಿಬ್ರೇಟ್ ಮಾಡಿದ ವಿಚಾರ ನ್ಯಾಶನಲ್ ಮೀಡಿಯಾಗಳು ಸುದ್ದಿಮಾಡಿದ್ದವು. ಈ ವಿಚಾರ ತಿಳಿದ ನಟಿ ಸನ್ನಿ ಲಿಯೋನ್ ಈ ಸುದ್ದಿಯನ್ನು ಹಂಚಿಕೊಂಡು ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದರು.

ಹೀಗಾಗಿ ಗುರುವಾರ ನಗರಕ್ಕೆ ಬರ್ತಿರೋ ಸನ್ನಿ ಲಿಯೋನ್ (Sunny Leone) ಶೇಷಮ್ಮ ಮಂಡ್ಯ ಕ್ಕೆ ಭೇಟಿ ನೀಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ ಹುಡುಗರಿಗೆ ಧನ್ಯವಾದ ಹೇಳಲಿದ್ದಾರೆ ಎನ್ನಲಾಗ್ತಿದೆ. ಟ್ವೀಟ್ ನಲ್ಲಿ ತಾವು ರಕ್ತದಾನ ಮಾಡೋದಾಗಿ ಸನ್ನಿ ಲಿಯೋನ್ ಘೋಷಿಸಿದ್ದರು. ಹೀಗಾಗಿ ಸನ್ನಿ ಲಿಯೋನ್ ಸ್ವತಃ ಮಂಡ್ಯಗೆ ತೆರಳಿ ರಕ್ತದಾನ ಮಾಡ್ತಾರೆ ಅನ್ನೋ ಸುದ್ದಿಯೂ ಹರಡಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಹಾಗೇ ನೋಡಿದರೇ ಸನ್ನಿಲಿಯೋನ್ ಗೆ ಮಂಡ್ಯವೇನೂ ಹೊಸದಲ್ಲ ಈ ಹಿಂದೆ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ನಟಿ ಸನ್ನಿ ಲಿಯೋನ್ ಶೇಷಮ್ಮನಾಗಿ ಮಿಂಚಿ ಸಖತ್ ಸ್ಟೆಪ್ ಹಾಕಿ ಕುಣಿದಿದ್ದರು.
ಇದನ್ನೂ ಓದಿ : ನಟಿ Chethana Raj ಸಾವಿಗೆ ರಮ್ಯ ವಿಷಾದ : ಸ್ಯಾಂಡಲ್ ವುಡ್ ನಲ್ಲಿ ನಣಿಮಣಿಯರಿಗೆ ಮಾತ್ರ ಬ್ಯೂಟಿಪ್ರೆಶರ್
ಇದನ್ನೂ ಓದಿ : Cannes 2022 Red Carpet : ತೀರ್ಪುಗಾರರಾಗಿ ಗಮನ ಸೆಳೆದ ದೀಪಿಕಾ ಪಡುಕೋಣೆ! ವಿಷಯ ತಿಳಿದ ಅಭಿಮಾನಿಗಳು ಫುಲ್ ಖುಷ್..!!
Bollywood Actress Sunny Leone visit Bangalore