ಬೆಂಗಳೂರು: Aditi Prabhudev: ತನ್ನ ಮುದ್ದಾನ ನಗುವಿನಿಂದಲೇ ಅಭಿಮಾನಿಗಳ ಹೃದಯ ಗೆದ್ದಿದ್ದ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ಬೆಡಗಿ ಅದಿತಿ ಪ್ರಭುದೇವ್ (Aditi Prabhudev) ಸದ್ಯದಲ್ಲೇ ಕಾಫಿ ಎಸ್ಟೇಟ್ ನ ಒಡತಿ ಆಗಲಿದ್ದಾರಂತೆ. ಅರೇ. ಏನಿದು.. ಹಾಗಿದ್ರೆ ಸಿನಿರಂಗಕ್ಕೆ ಗುಡ್ ಬೈ ಹೇಳ್ತಾರಾ ಅಂತ ಅಂದುಕೊಳ್ಬೇಡಿ. ಅಸಲಿ ವಿಷಯ ಏನಂದ್ರೆ ಅದಿತಿ ಪ್ರಭುದೇವ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನವೆಂಬರ್ 27ರ ಭಾನುವಾರದಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿ ವಿವಾಹ ನಡೆಯಲಿದೆ.
ಇದನ್ನೂ ಓದಿ: Heart Attack: ಸುಳ್ಯದಲ್ಲಿ 2ನೇ ತರಗತಿ ವಿದ್ಯಾರ್ಥಿಗೆ ಹೃದಯಾಘಾತ: ತಂದೆಯ ಎದುರೇ ಕುಸಿದುಬಿದ್ದ ಬಾಲಕ
ಗುರುಹಿರಿಯರ ಸಮ್ಮುಖದಲ್ಲಿ ಕಾಫಿ ಎಸ್ಟೇಟ್ ಮಾಲೀಕ ಹಾಗೂ ಬ್ಯುಸಿನೆಸ್ ಮ್ಯಾನ್ ಯಶಸ್ವಿ(ಯಶಸ್) ಜೊತೆ ಅದಿತಿ ಪ್ರಭುದೇವ್ ಹಸೆಮಣೆ ಏರಲಿದ್ದಾರೆ. ಮದುವೆ ತಯಾರಿಯಲ್ಲಿ ಬ್ಯುಸಿ ಆಗಿರುವ ಈ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಕೂಡಾ ರೆಡಿಯಾಗಿದೆ. ಕಳೆದ ವರ್ಷ ಡಿಸೆಂಬರ್ 26ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ‘ನಮ್ಮಿಬ್ಬರದ್ದೂ ಆರೆಂಜ್ಡ್ ಮದುವೆ. ನನಗೆ ಪ್ರಾಣಿ, ಪಕ್ಷಿಗಳೆಂದರೆ ತುಂಬಾ ಪ್ರೀತಿ. ನನ್ನ ವೃತ್ತಿ ಜೀವನಕ್ಕೆ ಯಶಸ್ ಹಾಗೂ ಆತನ ಮನೆಯವರು ತುಂಬಾ ಬೆಂಬಲ ನೀಡುತ್ತಾರೆ’ ಎಂದು ಸಂದರ್ಶನವೊಂದರಲ್ಲಿ ಅದಿತಿ ಪ್ರಭುದೇವ್ ಹೇಳಿಕೊಂಡಿದ್ದರು.
ಇದನ್ನೂ ಓದಿ: Death due to crane collapse : ಕ್ರೇನ್ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು
‘ಯಶಸ್ ಅವರು ಪರ್ಫೆಕ್ಟ್ ಗರ್ಲ್ ಆಲ್ಬಂ ಸಾಂಗ್ ನಲ್ಲಿ ಮೊದಲ ಬಾರಿ ನನ್ನ ನೋಡಿದ್ದರು. ನನ್ನನ್ನು ಇಷ್ಟಪಟ್ಟಿರುವ ವಿಚಾರವನ್ನು ಅವರ ಮನೆಯವರಿಗೆ ತಿಳಿಸಿದ್ದರು. ಬಳಿಕ ಯಶಸ್ವಿ ಪೋಷಕರು ನನಗೂ ಹುಡುಗ ಹುಡುಕುತ್ತಿರುವ ವಿಚಾರವನ್ನು ತಿಳಿದು ಮದುವೆ ಪ್ರಸ್ತಾಪ ಮಾಡಿದ್ದರು. ಈ ವೇಳೆ ನಾನೂ ಒಪ್ಪಿಗೆ ಕೊಟ್ಟು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡೆವು’ ಎಂದು ಅದಿತಿ ಪ್ರಭುದೇವ್ ಹೇಳಿಕೊಂಡಿದ್ದರು.
ಧೈರ್ಯಂ ಚಿತ್ರದಲ್ಲಿ ಅಜಯ್ ರಾವ್ ಗೆ ನಾಯಕಿಯಾಗಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು ಅದಿತಿ ಪ್ರಭುದೇವ್. ಅದಕ್ಕೂ ಮುನ್ನ ಕಿರುತೆರೆಯಲ್ಲಿ ಮಿಂಚಿದ್ದರು. ಬಜಾರ್, ಸಿಂಗಂ, ರಂಗನಾಯಕಿ, ಓಲ್ಡ್ ಮಾಂಕ್ ಹೀಗೆ ಹತ್ತು ಹಲವು ಚಿತ್ರಗಳಿಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದ ನಟಿ ಅದಿತಿ ಪ್ರಭುದೇವ್. ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ಸಮಯದಲ್ಲೇ ಅದಿತಿ ಪ್ರಭುದೇವ್ ದಾಂಪತ್ಯ ಜೀವನಕ್ಕೆ ಕಾಲಿಡುವ ವಿಚಾರವನ್ನು ಹಂಚಿಕೊಂಡಿದ್ದಾರೆ.
Aditi Prabhudev: Actress Aditi Prabhudev is set to tie the knot with Yashasvi on November 27