Work at Home : ಶೇ.50ರಷ್ಟು ಸರಕಾರಿ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸ : ಸರಕಾರದ ಆದೇಶ

ನವದೆಹಲಿ : (Work at Home) ಕೋವಿಡ್‌ ಸಮಸ್ಯೆಗಿಂತ ಭೀಕರವಾದ ಸಮಸ್ಯೆಯೊಂದು ದೇಶಕ್ಕೆ ವಕ್ಕರಿಸಿದೆ . ದೇಶದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗಿದ್ದು, ಇದೀಗ ದೆಹಲಿಯಲ್ಲಿ ತೀವ್ರ ಪ್ರಮಾಣದ ವಾಯು ಮಾಲಿನ್ಯದಿಂದ ಪರಿಸ್ಥಿತಿ ಕೈಮೀರಿದೆ. ಮಕ್ಕಳು ಸೇರಿದಂತೆ ಬಹುತೇಕ ಜನರು ತೀವ್ರ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ದೆಹಲಿಯಲ್ಲಿ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ವಾಯು ಮಾಲಿನ್ಯ ವಿಪರೀತವಾಗಿದೆ. ಆದ್ದರಿಂದ ವಾಹನ ಸಂಚಾರ ಕಡಿಮೆ ಮಾಡಲು ದೆಹಲಿ ಸರ್ಕಾರ ಇದೀಗ ಸರ್ಕಾರಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ(Work at Home)ಮಾಡುವಂತೆ ತಿಳಿಸಿದೆ. ಶೇ.50ರಷ್ಟು ಉದ್ಯೋಗಿಗಳಿಗೆ ಕಡ್ಡಾಯವಾಗಿ ಮನೆಯಲ್ಲೇ ಕೆಲಸ ಮಾಡಲು ಸರ್ಕಾರ ಆದೇಶ ನೀಡಿದೆ. ಅಲ್ಲದೆ ಇದೇ ನಿಯಮವನ್ನು ಖಾಸಗಿ ಕಂಪನಿಗಳು ಕೂಡ ಪಾಲಿಸುವಂತೆ ಪರಿಸರ ಖಾತೆ ಸಚಿವ ಗೋಪಾಲ್‌ ರೈ ಆದೇಶ ಹೊರಡಿಸಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಹಲವರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಇದೀಗ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ದೆಹಲಿಯ ಪರಿಸ್ಥಿತಿ ಕುರಿತು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಆತಂಕ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ದೆಹಲಿಯಲ್ಲಿ ಇಂದು ಉನ್ನತ ಮಟ್ಟದ ಸಭೆಯನ್ನು ನಡೆಸಲಾಗಿದ್ದು, ದೆಹಲಿ ಮಾಲಿನ್ಯ ನಿಯಂತ್ರಣದ ಕುರಿತು ಗೋಪಾಲ್‌ ರೈ ಅವರು ಅಧಿಕಾರಿಗಳು ಹಾಗೂ ಸಚಿವರ ಸಮಿತಿ ಜೊತೆ ಚರ್ಚಿಸಿದ್ದಾರೆ . ಈ ಬಳಿಕ ಸುದ್ದಿಗೋಷ್ಟಿ ನಡೆಸಿದ ಗೋಪಾಲ್‌ ರೈ, ದೆಹಲಿಯಲ್ಲಿನ ವಾಯು ಮಾಲಿನ್ಯ ನಿಯಂತ್ರಣದ ಕುರಿತು ಹಾಗೂ ಜನರ ಆರೋಗ್ಯದ ಹಿತ ದೃಷ್ಠಿಯಿಂದ ಕೆಲವು ನಿರ್ಧಾರಗಳನ್ನು ತಕ್ಷಣಕ್ಕೆ ಜಾರಿಗೊಳಿಸುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ .

ಇದನ್ನೂ ಓದಿ : School Close : ನಾಳೆಯಿಂದ ಪ್ರಾಥಮಿಕ ಶಾಲೆಗಳು ಬಂದ್‌

ಇದನ್ನೂ ಓದಿ : Digital Voter ID Card : ಮೊಬೈಲ್‌ ನಲ್ಲೇ ಸಿಗುತ್ತೆ ಡಿಜಿಟಲ್‌ ವೋಟರ್‌ ಐಡಿ : ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಮಾಲಿನ್ಯ ತಡೆಗಟ್ಟಲು ಸಚಿವರು ತೆಗೆದುಕೊಂಡ ಹೊಸ ನಿರ್ಧಾರಗಳು ಈ ಕೆಳಗಿನಂತಿವೆ

  • ಸಂಚಾರ ಹೆಚ್ಚಳದಿಂದ ಆಗುತ್ತಿರುವ ಮಾಲಿನ್ಯವನ್ನು ನಿಯಂತ್ರಿಸಲು ಸಂಚಾರ ವ್ಯತ್ಯಯವನ್ನು ಮಾಡಲು ಆದೇಶದಲ್ಲಿ ಸೂಚಿಸಲಾಗಿದೆ .
  • ಶೇಕಡ ಐವತ್ತರಷ್ಟು ಸರ್ಕಾರಿ ಉದ್ಯೋಗಿಗಳಿಗೆ ಮನೆಯಲ್ಲೇ ಕಡ್ಡಾಯವಾಗಿ ಕೆಲಸ ಮಾಡಲು ಸೂಚಿಸಲಾಗಿದ್ದು, ಖಾಸಗಿ ಸಂಸ್ಥೆಗಳು ಕೂಡ ಇದೇ ನಿಯಮವನ್ನು ಪಾಲಿಸಲು ಸೂಚಿಸಲಾಗಿದೆ .
  • ಸಾರಿಗೆ ಇಲಾಖೆಯಿಂದ ಆದಷ್ಟು ಬೇಗ 500 ಎಲೆಕ್ಟ್ರಿಕ್‌ ಬಸ್‌ ರಸ್ತೆಗಿಳಿಸಲು ಸೂಚನೆ ನೀಡಲಾಗಿದೆ .
  • ಹೆಚ್ಚಿನ ಭಾಗಗಳಲ್ಲಿ ಚಳಿಗೆಂದು ಕಲ್ಲಿದ್ದಲು ಮತ್ತು ಕಟ್ಟಿಗೆಗಳನ್ನು ಸುಡಲಾಗುತ್ತದೆ . ಇದನ್ನು ತಡೆಯಲು ಎಲೆಕ್ಟ್ರಿಕ್‌ ಹೀಟರ್‌ ಗಳನ್ನು ಒದಗಿಸಲು ನಿರ್ಧರಸಲಾಗಿದೆ .
  • ಪ್ರಾಥಮಿಕ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚಿಸಲಾಗಿದೆ .
  • ಕೈಗಾರಿಕೆಯಿಂದ ವಾಯು ಮಾಲಿನ್ಯವನ್ನು ಕಡಿಮೆಗೊಳಿಸಲು 33 ತಂಡಗಳನ್ನು ರಚಿಸಲಾಗಿದೆ .

ಹಿಂದಿನ ವರ್ಷಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ವಾಯುಮಾಲಿನ್ಯ ಸುಧಾರಣೆಯಾಗಿತ್ತು . ಈ ಭಾರೀ ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸಲು ಅವಕಾಶ ನೀಡಿರದ ಕಾರಣ ಕಳೆದ ವರ್ಷಕ್ಕಿಂತ ಈ ಭಾರೀ ವಾಯುಮಾಲಿನ್ಯ ಕಡಿಮೆಯಾಗಿತ್ತು ಎಂದು ಗೋಪಾಲ್‌ ರೈ ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದಾದ ಬಳಿಕ ಕೆಲವು ದಿನಗಳಲ್ಲೇ ಇದೀಗ ದೆಹಲಿ ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ ಎಂದಿದ್ದಾರೆ.

ಇದನ್ನೂ ಓದಿ : Facebook India: ಫೇಸ್ ಬುಕ್ ಇಂಡಿಯಾ ಮುಖ್ಯಸ್ಥನ ಸ್ಥಾನ ತೊರೆದ ಅಜಿತ್ ಮೋಹನ್; ಇಲ್ಲಿದೆ ಅಸಲಿ ಕಾರಣ

ಇದನ್ನೂ ಓದಿ : Gujarat Election: ಗುಜರಾತ್ ಚುನಾವಣೆ ದಿನಾಂಕ ಘೋಷಣೆ; 2 ಹಂತದಲ್ಲಿ ಮತದಾನ: ಡಿ.8ರಂದು ಫಲಿತಾಂಶ ಪ್ರಕಟ

(Work from Home) A problem worse than the covid problem has hit the country. Air pollution has increased in most of the cities of the country, and now the situation is out of control in Delhi due to severe air pollution. Most of the people including children are facing the problem of severe illness. The traffic in Delhi is increasing and the air pollution is high. Therefore, the Delhi government has now asked the government employees to work from home to reduce the vehicular traffic. The government has ordered 50% of the employees to work at home compulsorily. Also, Environment Minister Gopal Rai has issued an order for private companies to follow the same rule.

Comments are closed.