(Aditi Prabhudeva and Yashas) ಸ್ಯಾಂಡಲ್ ವುಡ್ ನ ಶಾನೆ ಟಾಪ್ ಬೆಡಗಿ ಅದಿತಿ ಪ್ರಭುದೇವ ಅವರು ಇಂದು ಯಶಸ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು (ನವೆಂಬರ್ 28) ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ನ ಗಾಯತ್ರಿ ವಿಹಾರ ಗ್ರ್ಯಾಂಡ್ನಲ್ಲಿ ಬೆಳಗ್ಗೆ 9.30 ರಿಂದ 10.32ರ ಮುಹೂರ್ತದಲ್ಲಿ ಈ ಜೋಡಿ ಮದುವೆ ಆಗಿದೆ. ಈ ಸುಂದರ ಜೋಡಿಗೆ ಸ್ಯಾಂಡಲ್‌ವುಡ್ ತಾರೆಗಳು ಸೇರಿದಂತೆ ಅವರ ಅಭಿಮಾನಿಗಳು ಮದುವೆಯ ಶುಭಾಶಯಗಳನ್ನು ಕೋರಿದ್ದಾರೆ. ಸದ್ಯ ಅಭಿಮಾನಿಗಳಿಗಾಗಿ ಅದಿತಿ ತಮ್ಮ ಮದುವೆಯ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಿನ್ನೆ (ನ.27) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಯಶಸ್ಸ್(Aditi Prabhudeva and Yashas) ಅವರ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ರಿಸೆಪ್ಷನ್ಗೂ ಮುನ್ನ ಈ ಜೋಡಿ ವಿಶೇಷವಾಗಿ ಫೋಟೋಶೂಟ್ ಮಾಡಿಸಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಉಡುಗೆ ಧರಿಸಿ ಫೋಟೋಗೆ ಪೋಸ್ ನೀಡಿದ್ದರು. ಈ ಕುರಿತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅಲ್ಲದೆ, ಅದಿತಿ ಅರಿಶಿಣ ಶಾಸ್ತ್ರದ ಫೋಟೋಸ್ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಟ್ರೇಂಡ್ ಕ್ರಿಯೆಟ್ ಮಾಡಿದ್ದವು. ನಿನ್ನೆ ನಡೆದ ಆರತಕ್ಷತೆ ಕಾರ್ಯಕ್ರಮಕ್ಕೂ ಕೂಡ ಯಶ್ ಹಾಗೂ ರಾಧಿಕಾ ಪಂಡಿತ್ ಸಾಕ್ಷಿಯಾಗಿದ್ದರು.

ಮದುವೆ ಕಾರ್ಯಕ್ರಮಗಳು ಪ್ರಾರಂಭವಾದ ದಿನಗಳಿಂದಲೇ ನಟಿ ಅದಿತಿ ಪ್ರಭುದೇವ ಅವರು ತಮ್ಮ ಅದ್ದೂರಿ ಮದುವೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅವರ ಮದುವೆ ಸಂಭ್ರಮ ನೋಡಲು ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳಿಗಾಗಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಅದಿತಿ ಫ್ಯಾನ್ಸ್ ಸೂಪರ್ ಅಂತ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : Amrutha Prem: ನಾಯಕಿಯಾಗಿ ಪ್ರೇಮ್ ಪುತ್ರಿ ಅಮೃತಾ ಸ್ಯಾಂಡಲ್ ವುಡ್ ಗೆ ಎಂಟ್ರಿ
ಇದನ್ನೂ ಓದಿ : Sunny Leone in UI Movie : ಸದ್ದಿಲ್ಲದೇ ಉಪೇಂದ್ರ ಸಿನಿಮಾಕ್ಕೆ ಕಾಲಿಟ್ಟ ಹಾಟ್ ತಾರೆ ಸನ್ನಿ ಲಿಯೋನ್
ಇನ್ನು ಸ್ಯಾಂಡಲ್‌ವುಡ್ ಕ್ಯೂಟ್ ಬೆಡಗಿಯ ಮದುವೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯತ್ರಿ ವಿಹಾರ್‌ನಲ್ಲಿ ಅದ್ದೂರಿಯಾಗಿ ಜರುಗಿದೆ. ಅದಿತಿಯ ಮದುವೆಗೆ ಸ್ಯಾಂಡಲ್‌ವುಡ್ ತಾರೆಯರು ಹಾಜರಾಗಿದ್ದರು. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಆಗಮಿಸಿ ದಂಪತಿಗೆ ಶುಭ ಕೋರಿದರು. ಅಲ್ಲದೆ, ಕಿರುತೆರೆಯ ನಟ ನಟಿಯರು ಅದಿತಿ ಮದುವೆಗೆ ಸಾಕ್ಷಿಯಾದರು.
(Aditi Prabhudeva and Yashas) Sandalwood’s Shane Top Bedagi Aditi Prabhudeva has entered married life with Yashas today. The couple got married today (November 28) at Gayatri Vihara Grand, Palace Grounds, Bangalore from 9.30 am to 10.32 am.