Bomb blast: ಭಾರತದಲ್ಲಿ ಷರಿಯಾ ಕಾನೂನು ಜಾರಿಗೆ ಮುಂದಾಗಿದ್ದ ಉಗ್ರ ಶಾರೀಖ್

ಮಂಗಳೂರು: (Bomb blast) ಮಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಶಾರೀಖ್‌ ನ ಮೊಬೈಲ್‌ ಫೋನ್‌ ಹಾಗೂ ಪೆನ್‌ ಡ್ರೈವ್‌ ಅನ್ನು ಶಾರೀಖ್‌ ವಾಸವಿದ್ದ ಮೈಸೂರಿನ ಬಾಡಿಗೆ ಮನೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಉಗ್ರ ಶಾರೀಖ್‌ ನ ಮೊಬೈಲ್‌ ಪರಿಶೀಲನೆ ನಡೆಸಿದ ವೇಳೆ ಆತನಿಗೆ ಭಾರತದಲ್ಲಿ ಷರಿಯಾ ಕಾನೂನನ್ನು ತರಬೇಕು ಎಂಬ ಮನಸ್ಥಿತಿ ಇದ್ದು, ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಮಾಡುವ ಕನಸು ಕಂಡಿದ್ದ ಎಂದು ತಿಳಿದು ಬಂದಿದೆ.

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ(Bomb blast)ದ ಆರೋಪಿ, ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಐಸಿಸ್‌ ಜತೆ ಸೇರಿಕೊಂಡು ಭಾರತದಲ್ಲಿ ಶರಿಯಾ ಕಾನೂನು ಜಾರಿಗೆ ತರಬೇಕು ಎಂಬ ಮನಸ್ಥಿತಿಯನ್ನು ಹೊಂದಿದ್ದ. ಮತಾಂಧತೆಯನ್ನು ಮೈಗೂಡಿಸಿಕೊಂಡಿದ್ದ ಶಾರೀಖ್‌, ಶಿವಮೊಗ್ಗದಲ್ಲಿ ತನ್ನ ಮನೆ ಮಂದಿಗೂ ಮನರಂಜನೆಯನ್ನೇ ನಿಷೇಧಿಸಿದ್ದ, ಷರಿಯಾ ಕಾನೂನು ಪಾಲಿಸುವಂತೆ ತಾಕೀತು ಮಾಡುತ್ತಿದ್ದ ಎಂಬ ಸಂಗತಿ ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸದ್ಯ ಪೊಲೀಸ್‌ ವಶದಲ್ಲಿರುವ ಶಂಕಿತ ಉಗ್ರ ಶಾರೀಕ್‌ನ ಮೊಬೈಲ್‌ ಹಾಗೂ ಪೆನ್‌ಡ್ರೈವ್‌ ವಶಕ್ಕೆ ಪಡೆದುಕೊಂಡಿದ್ದು, ಪರಿಶೀಲನೆ ವೇಳೆ ಒಂದೊಂದೇ ಆಘಾತಕಾರಿ ಸಂಗತಿಗಳು ಬಯಲಿಗೆ ಬರುತ್ತಿವೆ. ಆತನ ಮೊಬೈಲ್‌ನಲ್ಲಿ ಸಾವಿರಕ್ಕೂ ಅಧಿಕ ಜಿಹಾದ್‌ ವಿಡಿಯೋ ಪತ್ತೆಯಾಗಿದ್ದು, ಜಿಹಾದಿ ಸಾಹಿತ್ಯಗಳನ್ನೂ ಪತ್ತೆ ಮಾಡಲಾಗಿದೆ. 55 ಜಿಬಿಗೂ ಹೆಚ್ಚು ವಿಡಿಯೋ ಮತ್ತು ಫೋಟೋಗಳು ಪತ್ತೆಯಾಗಿವೆ. ಸಾವಿರಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಕಂಡುಬಂದಿದ್ದು, ಫೋರ್ನ್‌ ವಿಡಿಯೋಗಳನ್ನು ಸಂಗ್ರಹಿಸಿಟ್ಟಿದ್ದ ಎಂದು ತಿಳಿಯಲಾಗಿದೆ. ಭಾರತದಲ್ಲಿ ಮುಸ್ಲಿಮರು ನೆಮ್ಮದಿಯಿಂದ ಇರಬೇಕಾದರೆ ಷರಿಯಾ ಕಾನೂನು ಜಾರಿಯಾಗಬೇಕಾದ ಅಗತ್ಯವಿದೆ. ಇದಕ್ಕಾಗಿ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರ ಮಾಡುವ ಕನಸನ್ನು ಶಾರೀಖ್ ಹೊಂದಿದ್ದ ಎಂದು ಆತನ ಮೊಬೈಲ್‌ ಮೂಲಕ ತಿಳಿದುಬಂದಿದೆ.

ಇದನ್ನೂ ಓದಿ : Delhi Murder case: ಪತಿಯ ಕೊಲೆಗೈದು 22 ತುಂಡುಗಳಾಗಿ ಕತ್ತರಿಸಿದ ಪತ್ನಿ, ಮಗ : ಶ್ರದ್ಧಾ ಮಾದರಿಯಲ್ಲೇ ಮತ್ತೊಂದು ಹತ್ಯೆ

ಇದನ್ನೂ ಓದಿ : Terrorist Fake ID: ದಾಖಲೆ ಕಳೆದುಕೊಂಡಿದ್ರೆ ಹುಷಾರ್ ! ನಿಮ್ಮ ಹೆಸರಲ್ಲಿ ಸಿದ್ದವಾಗುತ್ತೆ ಉಗ್ರರ ನಕಲಿ ಐಡಿ

ಚಾರ್ಮಾಡಿ ತಪ್ಪಲಿನಲ್ಲಿ ಯಾವುದೇ ಟ್ರಯಲ್‌ ಬ್ಲಾಸ್ಟ್‌ ನಡೆದಿಲ್ಲ: ಅಧಿಕಾರಿಗಳ ಸ್ಪಷ್ಟನೆ
ಚಾರ್ಮಾಡಿಯ ಬೆಂದ್ರಾಳ ಅರಣ್ಯ ಪ್ರದೇಶದಲ್ಲ ಉಗ್ರರು ಟ್ರಯಲ್‌ ಬ್ಲಾಸ್ಟ್‌ ನಡೆಸಿದ್ದರು ಎಂದು ಸ್ಥಳೀಯರ ಪೊಲೀಸರಿಗೆ ದೂರು ನೀಡಿದ್ದರು. ಇದರ ಬಗ್ಗೆ ಪರಿಶೀಲನೆ ನಡೆಸಿದ್ದು, ಚಾರ್ಮಾಡಿ ತಪ್ಪಲಿನಲ್ಲಿ ಯಾವುದೇ ಬಾಂಬ್‌ ಟ್ರಯಲ್‌ ಬ್ಲಾಸ್ಟ್‌ ನಡೆದಿಲ್ಲ. ಅಲ್ಲಿ ಕೇಳಿಸಿರುವ ಸದ್ದು ಕಾಡುಪ್ರಾಣಿಗಳನ್ನು ಓಡಿಸಲು ಸಿಡಿಸಿದ ಪಟಾಕಿಗಳದ್ದು ಎಂದು ಅಧಿಕಾರಿಗಳು ಸುದ್ದಿಗಾರರಿಗೆ ಭಾನುವಾರ ಸ್ಪಷ್ಟಪಡಿಸಿದ್ದಾರೆ.

(Bomb blast) In connection with the Mangalore bomb blast case, the police seized the mobile phone and pen drive of the extremist Shareekh from the rented house of Shareekh in Mysore. While checking the mobile phone of Ugra Sharikh, it was found that he had the mindset of bringing Sharia law in India and dreamed of making India an Islamic country.

Comments are closed.