Samantha to do a dance number again :ಸಮಂತಾ ಪ್ರಭು ಸದ್ಯ ಪುಷ್ಪಾ ಸಿನಿಮಾದಲ್ಲಿ ಡ್ಯಾನ್ಸ್ ನಂಬರ್ ಊ ಅಂತೀಯಾ ಮಾವ ಹಾಡಿನ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ತಮ್ಮ ಸಿನಿಮಾ ಜೀವನದಲ್ಲಿಯೇ ಇದೇ ಮೊದಲಬಾರಿಗೆ ಡ್ಯಾನ್ಸ್ ನಂಬರ್ನಲ್ಲಿ ಕಾಣಿಸಿಕೊಂಡಿದ್ದ ನಟಿ ಸಮಂತಾ ಪ್ರೇಕ್ಷಕರ ಕಣ್ಣಲ್ಲಿ ಕಿಚ್ಚು ಹತ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ ಅಂದರೆ ತಪ್ಪಾಗಲಾರದು. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡುತ್ತಿದೆ. ಈ ಹಾಡಿಗೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದರೆ ಇಂದ್ರಾವತಿ ಚೌಹಾಣ್ ಹಾಡಿಗೆ ದನಿಯಾಗಿದ್ದರು . ಪುಷ್ಪಾ ಸಿನಿಮಾದ ಈ ಹಾಡಿನ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ನಟಿ ಸಮಂತಾ ಪ್ರಭು ಇದೀಗ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾದಲ್ಲಿಯೂ ಡ್ಯಾನ್ಸ್ ನಂಬರ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿದೆ.
ಊ ಅಂಟಾವಾ ಮಾವ ಹಾಡು 2021ನೇ ಸಾಲಿನ ಹಿಟ್ ಹಾಡುಗಳ ಪಟ್ಟಿಯಲ್ಲಿ ಈಗಾಗಲೇ ಸ್ಥಾನವನ್ನು ಪಡೆದಿದೆ. ಲೈಗರ್ ಸಿನಿಮಾದ ಡ್ಯಾನ್ಸ್ ನಂಬರ್ನಲ್ಲಿಯೂ ಸಮಂತಾ ಧೂಳೆಬ್ಬಿಸುತ್ತಾರಾ ಎಂದು ಅಭಿಮಾನಿಗಳು ಈಗಾಗಲೇ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಈಗಂತೂ ಸಮಂತಾ ಮೇಲೆ ನಿರೀಕ್ಷೆಗಳು ಇನ್ನಷ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಮಂತಾ ಈ ಆಫರ್ನ್ನು ಸ್ವೀಕರಿಸುತ್ತಾರಾ ಇಲ್ಲವಾ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇನ್ನು ಇದರ ಜೊತೆಯಲ್ಲಿ ನಟಿ ಸಮಂತಾ ಹಾಲಿವುಡ್ ಪ್ರಾಜೆಕ್ಟ್ ಒಂದಕ್ಕೂ ಸಹಿ ಹಾಕಿದ್ದಾರೆ. ಹಾಗೂ ತಮ್ಮ ಮುಂಬರುವ ಸಿನಿಮಾದಲ್ಲಿ ನಟಿ ಸಮಂತಾ ದ್ವಿಲಿಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಅರೆಂಜ್ಮೆಂಟ್ಸ್ ಆಫ್ ಲವ್ ಎಂದು ಹೆಸರಿಡಲಾಗಿದೆ. ಈ ಸಿನಿಮಾಗೆ ಟೈಮರಿ ಎನ್ ಮುರಾರಿ ಕತೆ ಹೆಣೆದಿದ್ದಾರೆ. ದಿ ಫ್ಯಾಮಿಲಿ ಪ್ಯಾನ್ ಸೀಸನ್ 2ರಲ್ಲಿಯೂ ತಮ್ಮ ಅದ್ಭುತ ಅಭಿಯನಯದ ಮೂಲಕ ನಟಿ ಸಮಂತಾ ಅಭಿಮಾನಿಗಳನ್ನು ರಂಜಿಸಿದ್ದರು .
After Oo Antava in Pushpa, Samantha to do a dance number again in Vijay Devarakonda’s Liger?
ಇದನ್ನು ಓದಿ : Rohit Sharma Slim : ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಸ್ಲಿಮ್ ಆಂಡ್ ಫಿಟ್ ಆದ ರೋಹಿತ್ ಶರ್ಮಾ
ಇದನ್ನೂ ಓದಿ : Vamika’s pics : ವೈರಲ್ ಆಗುತ್ತಿರುವ ವಮಿಕಾಳ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ ವಿರುಷ್ಕಾ ದಂಪತಿ