trying to buy minor girl : ಬಾಲಕಿಯನ್ನು ಖರೀದಿಸಲು ಮುಂದಾಗಿದ್ದ ವೃದ್ಧ ಅರೆಸ್ಟ್​

trying to buy minor girl :ಸರ್ಕಾರವು ಎಷ್ಟೇ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದರೂ ಸಹ ಅಲ್ಲಲ್ಲಿ ಮಕ್ಕಳ ಮಾರಾಟ ದಂಧೆಯು ನಡೆಯುತ್ತಲೇ ಇದೆ. ಬಹುತೇಕ ಕಡೆಗಳಲ್ಲಿ ಮಕ್ಕಳ ಮಾರಾಟಕ್ಕೆ ಪೋಷಕರೇ ಕುಮ್ಮಕ್ಕು ನೀಡುತ್ತಿರುವುದು ದುರಂತ. ಇಂತಹದ್ದೇ ಒಂದು ಪ್ರಕರಣ ತೆಲಂಗಾಣದ ಹೈದರಾಬಾದ್​​ನಲ್ಲಿ ನಡೆದಿದೆ. 14 ವರ್ಷದ ಬಾಲಕಿಯನ್ನು ಆಕೆಯ ಪೋಷಕರಿಂದ 3 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದ 61 ವರ್ಷದ ವ್ಯಕ್ತಿಯನ್ನು ಪೊಲೀಸರು ಹೈದರಾಬಾದ್​ನಲ್ಲಿ ಬಂಧಿಸಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬಾಲಾಪುರದಲ್ಲಿ ಅಪ್ರಾಪ್ತ ಬಾಲಕಿಯ ತಾಯಿ ಹಾಗೂ ಅಜ್ಜಿ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.


ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿ ಸೈಯದ್​ ಅಲ್ತಾಫ್​ ಅಲಿ ತನ್ನ ಇಳಿವಯಸ್ಸಿನಲ್ಲಿ ನನ್ನನ್ನು ನೋಡಿಕೊಳ್ಳುವವರು ಯಾರಾದರೂ ಬೇಕು ಎಂದು ಹುಡುಕುತ್ತಿದ್ದ ಎನ್ನಲಾಗಿದೆ. ಈತ ಆರು ವರ್ಷಗಳ ಹಿಂದೆ ತನ್ನ ಪತ್ನಿಗೆ ವಿಚ್ಚೇದನವನ್ನು ನೀಡಿದ್ದ. ಈತ ರೀತಿ ಹುಡುಕಾಟದಲ್ಲಿರುವುದನ್ನು ಅರಿತ ಸ್ನೇಹಿತರೊಬ್ಬರು ಬಾಲಾಪುರದ ಆಟೋ ಚಾಲಕ ಅಕೀಲ್​ ಅಹಮದ್​​ರ ಪರಿಚಯ ಮಾಡಿಸಿಕೊಟ್ಟಿದ್ದರು ಎನ್ನಲಾಗಿದೆ. ಈತನೇ ಬಾಲಕಿಯನ್ನು ಮಾರಾಟ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.


ಮೊದಲ ಬಾರಿಗೆ ಬಾಲಕಿಯ ಅಜ್ಜಿ ಹಾಗೂ ತಾಯಿಯನ್ನು ಭೇಟಿಯಾದ ಸೈಯದ್​ ಅಲ್ತಾಫ್​ ಅಲಿ ಬಾಲಕಿ ಮಾರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ ಬಾಲಕಿಯ ಅಜ್ಜಿ ಹಾಗೂ ತಾಯಿ ಮೊದಲು ತಮಗೆ ಐದು ಲಕ್ಷ ರೂಪಾಯಿ ಬೇಕು ಎಂದು ಹೇಳಿದ್ದಾರೆ. ಇದಕ್ಕೆ ಸೈಯದ್​ ಒಪ್ಪದ ಕಾರಣ ಮೂರು ಲಕ್ಷ ರೂಪಾಯಿಗೆ ಬಾಲಕಿ ಮಾರಾಟದ ಒಪ್ಪಂದವಾಗಿದೆ.


ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಬಾಲಕಿಯ ಕುಟುಂಬ ಈ ವ್ಯವಹಾರಕ್ಕೆ ಒಪ್ಪಿಗೆ ನೀಡಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಲಕಿಯನ್ನು ಖರೀದಿ ಮಾಡಲು ಸೈಯದ್​ ಅಲ್ತಾಫ್​ ಅಲಿ ಮುಂದಾಗುತ್ತಿದ್ದಂತೆಯೇ ಸೂಕ್ತ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿತ ಸೈಯದ್​ ಅಲ್ತಾಫ್​ ಅಲಿ ವಿರುದ್ಧ ಐಪಿಸಿ ಸೆಕ್ಷನ್​ 370, 370 (A) r/w 511, ಪೋಸ್ಕೋ ಸೇರಿದಂತೆ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Police arrests Mumbai man in Hyderabad for trying to buy minor girl to look after him

ಇದನ್ನು ಓದಿ : Rohit Sharma Slim : ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಸ್ಲಿಮ್‌ ಆಂಡ್‌ ಫಿಟ್‌ ಆದ ರೋಹಿತ್ ಶರ್ಮಾ

Comments are closed.