ಟಾಲಿವುಡ್ ಸಿನಿಮಾದ ಜೊತೆ ಬಾಲಿವುಡ್ ಗೂ ಎಂಟ್ರಿಕೊಡೋ ಸಿದ್ಧತೆಯಲ್ಲಿರೋ ನಟಿ ಸಮಂತಾ ಈಗ ಇನ್ವೆಸ್ಟಮೆಂಟ್ ಬಗ್ಗೆ ಕೂಡ ಸಲಹೆ ಕೊಡಲು ಆರಂಭಿಸಿದ್ದಾರೆ. ವಿಚ್ಚೇಧನದ ಬಳಿಕ ಕೆರಿಯರ್, ಪ್ರವಾಸ ಎಂದೆಲ್ಲ ಬ್ಯುಸಿಯಾಗಿದ್ದ ಸಮಂತಾಗೆ ಹಲವು ಸಿನಿಮಾ ಹಾಗೂ ಐಟಂ ಸಾಂಗ್ ಗೆ ಅವಕಾಶ ಸಿಕ್ಕಿದ್ಷು ಸುದ್ದಿಯಾಗಿತ್ತು. ಈಗ ಅದೆಲ್ಲದರ ಜೊತೆಗೆ ಸಮಂತಾ ಹೂಡಿಕೆ ಬಗ್ಗೆಯೂ ಮಾತನಾಡಿದ್ದಾರೆ. ಹಾಗಿದ್ದರೇ ಸಮಂತಾ ( Samantha ) ಹೊಸ ಬ್ಯುಸಿನೆಸ್ ಗೆ ಎಂಟ್ರಿ ಕೊಟ್ರಾ ಅಂತ ನೀವಂದ್ಕೋಬೇಡಿ. ಸಮಂತಾ ಹೂಡಿಕೆ ಬಗ್ಗೆ ಮಾತಾಡಿರೋದು ಕ್ರಿಪ್ಟೋ ಕರೆನ್ಸಿ ಜಾಹೀರಾತಿನಲ್ಲಿ.
ಹೌದು ಟ್ರೆಂಡ್ ನಲ್ಲಿರೋ ಹೀರೋ ಹೀರೋಯಿನ್ಸ್, ಸೆಲೆಬ್ರೆಟಿಗಳು, ಕ್ರಿಕೆಟ್ ಪ್ಲೇಯರ್ಸ್ ಜಾಹೀರಾತು ಕಂಪನಿಗಳ ಪ್ರಮುಖ ಆಕರ್ಷಣೆ. ಪುಷ್ಪ ಸಿನಿಮಾದ ಐಟಂ ಸಾಂಗ್ ಹಿಟ್ ಅಗುತ್ತಿದ್ದಂತೆ ಸಮಂತಾ ಪಬ್ಲಿಸಿಟಿ ಆಕಾಶದೆತ್ತರಕ್ಕೆ ಏರಿದೆ. ಹೀಗಾಗಿ ಈಗ ಜಾಹೀರಾತು ಕಂಪನಿಗಳು ಸಮಂತಾ ಮನೆ ಮುಂದೇ ಕ್ಯೂ ನಿಂತಿವೆ. ಈ ಪೈಕಿ ಸದ್ಯ ಚಾಲ್ತಿಯಲ್ಲಿರೋ ಕ್ರಿಪ್ಟೋ ಕರೆನ್ಸಿ ಕೂಡ ಸಮಂತಾರನ್ನೇ ತನ್ನ ಜಾಹೀರಾತಿಗಾಗಿ ಆಯ್ಕೆ ಮಾಡಿಕೊಂಡಿದೆ.
ಜಿಮ್ ನಲ್ಲಿ ವರ್ಕೌಟ್ ಮಾಡೋ ಸಮಂತಾ ಒಳ್ಳೆಯ ಆರೋಗ್ಯಕ್ಕಾಗಿ ಜಿಮ್‌ನಲ್ಲಿ , ವ್ಯಾಯಾಮದಲ್ಲಿ ಟೈಂ ಇನ್ವೆಸ್ಟ್ ಮಾಡಿ. ಹಾಗೇಯೆ ಇನ್ನೊಂದು ಇನ್ವೆಸ್ಟ್ ಮಾಡಲೇಬೇಕಾದ ವಿಷಯ ಎಂದರೇ ಅದು ಹಣಕಾಸು ಎಂದಿದ್ದಾರೆ.ಮಾತ್ರವಲ್ಲ ಕ್ರಿಪ್ಟೋ ಕರೆನ್ಸಿಯಲ್ಲಿ ನೂರು ರೂಪಾಯಿಯಿಂದ ಇನ್ವೆಸ್ಟ್ಮೆಂಟ್ ಆರಂಭಿಸಿ ಭವಿಷ್ಯ ಸುಭದ್ರ ಮಾಡಿಕೊಳ್ಳಿ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಸಖತ್ ಆಕ್ಟಿವ್ ಆಗಿದ್ದು ಇನ್ ಸ್ಟಾಗ್ರಾಂನಲ್ಲಿ ಬರೋಬ್ಬರಿ 21.3 ಮಿಲಿಯನ್ ವೀವ್ವರ್ಸ್ ಹೊಂದಿದ್ದಾರೆ. ಹೀಗಾಗಿ ಒಂದೇ ಸಲಕ್ಕೆ 21.3 ಮಿಲಿಯನ್ ವೀವ್ಸರ್ಸ್ ತಲುಪೋದು ಜಾಹೀರಾತು ಕಂಪನಿಯ ಉದ್ದೇಶವಾಗಿದ್ದು ಅದಕ್ಕೆ ಸಮಂತಾ ಕೂಡ ಜೈ ಎಂದಿದ್ದಾರೆ. ಈ ಆ್ಯಡ್ ನಲ್ಲಿ ಸಮಂತಾ ಕ್ರಿಪ್ಟೋ ಕರೆನ್ಸಿ ಬಗ್ಗೆ ವಿವರವಾಗಿ ಮಾತನಾಡಿದ್ದು ಹಣ ಹೂಡಿಕೆಯಿಂದ ಹೇಗೆ ಲಾಭ ಗಳಿಸಬಹುದು ಎಂಬುದನ್ನು ವಿವರಿಸಿದ್ದಾರೆ.
ಕ್ರಿಪ್ಟೋ ಕರೆನ್ಸಿ ಆ್ಯಡ್ ನಲ್ಲಿ ಈಗಾಗಲೇ ರಣಬೀರ್ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ಸಮಂತಾ ಲೈಗರ್ ಸಿನಿಮಾದ ಐಟಂ ಸಾಂಗ್ ನಲ್ಲಿ ಮಿಂಚಲಿದ್ದಾರೆ ಎನ್ನಲಾಗಿದ್ದು ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಮೊನ್ನೆ ಮೊನ್ನೆಯಷ್ಟೇ ವಿದೇಶ ಪ್ರವಾಸ ಮುಗಿಸಿ ಬಂದ ಸಮಂತಾ ಸಿನಿಮಾ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರಂತೆ.
( After Pushpa movie Succuss Samantha busy with advertisement)