ತಲೈವಾ ರಜನಿಕಾಂತ್ ಬದುಕಿನಲ್ಲಿ ಇತ್ತೀಚಿಗೆ ಒಂದಾದ ಮೇಲೊಂದರಂತೆ ಸಂಕಷ್ಟಗಳು ತಲೆದೋರುತ್ತಲೇ ಇವೆ.ಅನಾರೋಗ್ಯದಿಂದ ಚೇತರಿಸಿಕೊಂಡ ರಜನಿಕಾಂತ್ ಇನ್ನೇನು ಎಲ್ಲ ಸರಿಹೋಯ್ತು ಎಂದುಕೊಳ್ಳುವಾಗ ಮಗಳ ಡಿವೋರ್ಸ್ ನಿಂದ ನೊಂದಿದ್ದರು.ಈಗ ಮತ್ತೆ ಮಗಳು ಐಶ್ವರ್ಯಾ(Aishwarya Rajinikanth) ಹಾಸ್ಪಿಟಲ್ ಸೇರಿದ್ದು ಸೂಪರ್ ಸ್ಟಾರ್ ಕಂಗಲಾಗಿದ್ದಾರೆ. ಇತ್ತೀಚಿಗಷ್ಟೇ ಸೂಪರ್ ಸ್ಟಾರ್ ಪುತ್ರಿ ಐಶ್ವರ್ಯಾ ಸುದ್ದಿಯಾಗಿದ್ದರು. ನಟ ಧನುಶ್ ಜೊತೆ ಬಹುಕಾಲದ ದಾಂಪತ್ಯಕ್ಕೆ ಅಂತ್ಯಹಾಡಿದ ಐಶ್ವರ್ಯಾ ವಿಚ್ಚೇಧನ ಪಡೆದುಕೊಂಡಿದ್ದರು. ಈ ಸಂಗತಿ ತಿಂಗಳುಗಳ ಕಾಲ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಇದರ ಬೆನ್ನಲ್ಲೇ ಅನಾರೋಗ್ಯಕ್ಕೆ ತುತ್ತಾಗಿರುವ ಐಶ್ವರ್ಯಾ ಹಾಸ್ಪಿಟಲ್ ಗೆ ದಾಖಲಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಜನಿಕಾಂತ್ (Rajinikanth) ಪುತ್ರಿ ಐಶ್ವರ್ಯ ತಮ್ಮ ಅನಾರೋಗ್ಯದ ಸುದ್ದಿ ಹಂಚಿಕೊಂಡಿದ್ದು, ಪೋಟೋ ಕೂಡ ಶೇರ್ ಮಾಡಿದ್ದಾರೆ.ಸದ್ಯ ತಲೆ ಸುತ್ತುವಿಕೆ ಹಾಗೂ ಜ್ವರದಿಂದ ಬಳಲುತ್ತಿರುವ ಐಶ್ವರ್ಯಾ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಕೊವೀಡ್ ಮತ್ತು ಕೊವೀಡ್ ನಂತರದ ಜೀವನದ ಜ್ವರ ಮತ್ತು ತಲೆ ಸುತ್ತುವಿಕೆ ಕಾಣಿಸಿಕೊಂಡ ಕಾರಣ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ.
ಆದರೆ ನಾನು ಅತ್ಯಂತ ಸುಂದರವಾದ ಹಾಗೂ ಸ್ಪೂರ್ತಿದಾಯಕವಾದ ಡೈನಾಮಿಕ್ ವೈದ್ಯರನ್ನು ಭೇಟಿ ಮಾಡಿದಾಗ ಮತ್ತು ಅವರೊಂದಿಗೆ ಸಮಯ ಕಳೆಯಲು ಅವಕಾಶ ಸಿಕ್ಕಾಗ ಅನಾರೋಗ್ಯ ದೊಡ್ಡ ಸಮಸ್ಯೆ ಎನ್ನಿಸುವುದಿಲ್ಲ ಎಂದಿದ್ದಾರೆ. ಮಾತ್ರವಲ್ಲ ಐಶ್ವರ್ಯಾ ತಮ್ಮ ಪ್ರೀತಿಯ ವೈದ್ಯೇ ಡಾ.ಪ್ರೀತಿಕಾ ಚೌದ್ರಿ ಅವರ ಜೊತೆಗಿನ ಪೋಟೋ ಶೇರ್ ಮಾಡಿದ್ದಾರೆ. ಐಶ್ವರ್ಯಾ ಅನಾರೋಗ್ಯದ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಾವಿರಾರು ಜನರು ಬೇಗ ಹುಶಾರಾಗಿ ಎಂದು ಶುಭಹಾರೈಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಐಶ್ವರ್ಯಾ ಅವರಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಈ ವೇಳೆಯೂ ಐಶ್ವರ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ಮಾತ್ರವಲ್ಲ ಎಲ್ಲ ಮುನ್ನೆಚ್ಚರಿಕೆಗಳ ಬಳಿಕವೂ ನನಗೇ ಕೊರೋನಾ ಪಾಸಿಟಿವ್ ಆಗಿದೆ. ಆಡ್ಮಿಟ್ ಮಾಡಲಾಗಿದೆ. ದಯವಿಟ್ಟು ಎಲ್ಲರೂ ಮಾಸ್ಕ್,ಲಸಿಕೆ ಹಾಕಿಸಿಕೊಳ್ಳಿ ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದರು. 2022 ರಲ್ಲಿ ಐಶ್ವರ್ಯಾ ಹಾಗೂ ಧನುಶ್ ವಿಚ್ಛೇಧನ ಪಡೆದಿದ್ದು ಇದು ತಲೈವಾ ಕುಟುಂಬಕ್ಕೆ ದುಃಖ ತಂದಿತ್ತು. ಇದಾದ ಮೇಲೆ ಇಬ್ಬರೂ ಕುಟುಂಬದವರು ಮಾತುಕತೆ ನಡೆಸಿ ಧನುಶ್ ಹಾಗೂ ಐಶ್ವರ್ಯಾ ಅವರನ್ನು ಮತ್ತೆ ಒಂದು ಮಾಡಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಸದ್ಯಕ್ಕೆ ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ.
ಇದನ್ನೂ ಓದಿ : Bhavana Menon : ಟಗರು ಬೆಡಗಿ ಭಾವನಾ ಕಣ್ಣೀರ ಕತೆ ಇದು : ಡಿಗ್ನಿಟಿಗಾಗಿ ಹೋರಾಡುತ್ತಿದ್ದೇನೆ ಎಂದ ನಟಿ
ಇದನ್ನೂ ಓದಿ : ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಮೊದಲ ಗಿಫ್ಟ್ ಎಲ್ಲಿಂದ ಬಂತು ಗೊತ್ತಾ?! ಇಲ್ಲಿದೆ ಡಿಟೇಲ್ಸ್
( Aishwarya Rajinikanth gets hospitalized again)