Exit Polls 2022 LIVE Updates : ಚುನಾವಣೋತ್ತರ ಸಮೀಕ್ಷೆ: ಯುಪಿಯಲ್ಲಿ ಅರಳಿದ ಕಮಲ

ನವದೆಹಲಿ : ಪಂಚ ರಾಜ್ಯ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳು (Exit Polls 2022) ವೇಗ ಪಡೆದುಕೊಂಡಿದ್ದು, ಎಕ್ಸಿಟ್ ಪೋಲ್‌ ಸದ್ದು ಮಾಡಲಾರಂಭಿಸಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಕಮಲ ಅರಳೋದು ಬಹುತೇಕ ಖಚಿತವಾಗಿದ್ದು, ಮೂರಕ್ಕೂ ಹೆಚ್ಚು ಸಮೀಕ್ಷೆಗಳು ಯುಪಿಯಲ್ಲಿ ಮತ್ತೊಮ್ಮೆ ಯೋಗಿ ಆದಿತ್ಯನಾಥ್ ಅಧಿಕಾರಕ್ಕೇರೋದು ಖಚಿತವಾಗಿದೆ.

ಉತ್ತರ ಪ್ರದೇಶದಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯಬೇಕೆಂದರೇ, ಕನಿಷ್ಠ 202 ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕಿದೆ. ಈ ಮಧ್ಯೆ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಟಿವಿ 9 ಭಾರತ್ ವರ್ಷ್ ಹಾಗೂ ಪೋಲ್ ಸ್ಟ್ಯಾಟ್ ಸಮೀಕ್ಷೆಯು ಬಿಜೆಪಿಗೆ ಉತ್ತರ ಪ್ರದೇಶದಲ್ಲಿ 211 ರಿಂದ 225 ಸ್ಥಾನ ಗಳು ಬರಲಿದೆ ಎಂದಿದೆ. ಆ ಮೂಲಕ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯೋದು ಖಚಿತ ಎನ್ನಲಾಗ್ತಿದೆ.

ಪೋಲ್ ಸ್ಟ್ರ್ಯಾಟ್ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 211-225 ಸ್ಥಾನ, ಎಸ್ ಪಿಗೆ 146 ರಿಂದ 160 ,ಬಿಎಸ್ ಪಿ ಗೆ 14 ರಿಂದ 24, ಕಾಂಗ್ರೆಸ್ ಗೆ 4-6 ಬರಲಿವೆ ಎಂದು ಊಹಿಸಲಾಗಿದೆ. ಪಿ.ಮಾರ್ಕ್ ಸಮೀಕ್ಷೆಯಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ಖಚಿತ ಎಂದಿದೆ. ಅಲ್ಲದೇ ರಿಪ್ಲಬಿಕ್ ಸಮೀಕ್ಷೆಯೂ ಉತ್ತರ ಪ್ರದೇಶದಲ್ಲಿ 262-277 ಸೀಟು ಬಿಜೆಪಿ ಪಾಲಾಗಲಿದೆ ಎಂದಿದೆ.ಇನ್ನು ಪಿ ಮಾರ್ಕ್ ನಲ್ಲೂ ಯುಪಿಯಲ್ಲಿ ಬಿಜೆಪಿ ಕಮಲ ಅರಳಿಸಿ ಮತ್ತೊಮ್ಮೆ ಯೋಗಿ ಆದಿತ್ಯನಾಥ್ ಅಧಿಕಾರಕ್ಕೇರೋದು ಖಚಿತ ಎಂಬ ಸಮೀಕ್ಷೆ ನೀಡಿದೆ.

Exit Polls 2022 LIVE Updates BJP back in Uttar Pradesh 1

ಇದಲ್ಲದೇ ಜನ್ ಕಿ ಬಾತ್ ನಲ್ಲೂ ಬಿಜೆಪಿ ಪಾಲಿಗೆ ಯುಪಿ ಗದ್ದುಗೆ ಎನ್ನಲಾಗಿದ್ದು, 226 ರಿಂದ 246 ವಿಧಾನಸಭಾ ಕ್ಷೇತ್ರಗಳನ್ನು ಉತ್ತರ ಪ್ರದೇಶದ ಪ್ರಸಕ್ತ ಅಢಳಿತಾರೂಡ ಬಿಜೆಪಿ ಗೆಲ್ಲಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಉತ್ತರ ಪ್ರದೇಶದಲ್ಲಿ 2017 ರ ಚುನಾವಣೆಯಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 297 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಸಮಾಜವಾದಿ ಪಕ್ಷ 70 ಹಾಗೂ ಬಿಎಸ್ಪಿ 4 ಹಾಗೂ ಕಾಂಗ್ರೆಸ್ 3 ಸ್ಥಾನಗಳಲ್ಲಿ ಜಯ ಸಾಧಿಸಿತ್ತು.

Exit Polls 2022 LIVE Updates BJP back in Uttar Pradesh
ಇಂಡಿಯಾ ಟಿವಿ ನಡೆಸಿದ ಸಮೀಕ್ಷೆ

ಉತ್ತರ ಪ್ರದೇಶದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಕನಿಷ್ಠ 202 ಸ್ಥಾನದಲ್ಲಿ ಗೆಲ್ಲಬೇಕು. ನಾಲ್ಕರಿಂದ ಐದು ಸ್ವತಂತ್ರ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ಪತಾಕೆ ಹಾರಿಸಲಿದೆ ಎನ್ನುತ್ತಿವೆ.

ಇದನ್ನೂ ಓದಿ : Karnataka Election : ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ : ಎಚ್.ಡಿ. ಕುಮಾರಸ್ವಾಮಿ ಭವಿಷ್ಯ

ಇದನ್ನೂ ಓದಿ : HD Kumaraswamy : ಯಾವ ಪಕ್ಷದ ಜೊತೆ ಜೆಡಿಎಸ್‌ ಮೈತ್ರಿ : ಸ್ಪಷ್ಟನೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ

( Exit Polls 2022 LIVE Updates BJP Again in Uttar Pradesh )

Comments are closed.