ಸೋಮವಾರ, ಏಪ್ರಿಲ್ 28, 2025
HomeCinemaಅಜಾಗ್ರತ ಸಿನಿಮಾಕ್ಕೆ ಬಣ್ಣಹಚ್ಚಿದ ನಟಿ ರಾಧಿಕಾ ಕುಮಾರಸ್ವಾಮಿ

ಅಜಾಗ್ರತ ಸಿನಿಮಾಕ್ಕೆ ಬಣ್ಣಹಚ್ಚಿದ ನಟಿ ರಾಧಿಕಾ ಕುಮಾರಸ್ವಾಮಿ

- Advertisement -

ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಕುಮಾರಸ್ವಾಮಿ ಒಂದು ಕಾಲದಲ್ಲಿ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದರು. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನು ವಿವಾಹದ ನಂತರ ಸಿನಿಮಾರಂಗದಿಂದ ದೂರ ಉಳಿದಿದ್ದರು. ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಮತ್ತೆ ಸಿನಿರಂಗಕ್ಕೆ ರೀ ಎಂಟ್ರಿ ನೀಡಿದ್ದಾರೆ. ಇದೀಗ ನಟಿ ರಾಧಿಕಾ ಅಭಿನಯದ ಹೊಸ ಸಿನಿಮಾ ಅಜಾಗ್ರತ (Ajagrata Movie) ಮುಹೂರ್ತ ಕೂಡ ನೆರವೇರಿದೆ. ಈ ಅದ್ದೂರಿ ಸಿನಿಮಾ ಮುಹೂರ್ತ ಕಾರ್ಯಕ್ರಮವನ್ನು ರಾಮಾನಾಯ್ಡು ಸ್ಟುಡಿಯೋದಲ್ಲಿ ನಡೆಸಲಾಗಿದೆ.

ಇನ್ನು ಈ ಸಿನಿಮಾದಲ್ಲಿ ಬಾಲಿವುಡ್‌ ಖ್ಯಾತ ನಟ ಶ್ರೇಯಸ್‌ ತಲ್ಪಡೆ ನಟಿ ರಾಧಿಕಾ ಕುಮಾರಸ್ವಾಮಿಗೆ ಜೊತೆಯಾಗಲಿದ್ದಾರೆ. ಸಿನಿಮಾ ಮುಹೂರ್ತ ಸಂದರ್ಭದಲ್ಲಿ ತೆಗೆದ ಪೋಟೋಸ್‌ನಲ್ಲಿ ನಟಿ ರಾಧಿಕಾ ಸಖತ್‌ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಹೆಸರಾಂತ ವಿತರಕ ಸಂಸ್ಥೆಯ ಟ್ಯಾಗೋರ್‌ ಕ್ಯಾಮೆರಾ ಚಾಲನೆ ಮಾಡಿದರು. ಇನ್ನುಳಿದಂತೆ ಸಿನಿರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ.

ಇದನ್ನೂ ಓದಿ : ದಿ‌ ಕೇರಳ ಸ್ಟೋರಿ ನಟಿ ಆದ ಶರ್ಮಾಗೆ ಅಪಘಾತ

ಇದನ್ನೂ ಓದಿ : ವೇಶ್ಯಾವಾಟಿಕೆ ತೊಡಗಿಸಿಕೊಂಡ ಖ್ಯಾತ ನಟಿ ಹಾಗೂ ಮಾಡೆಲ್‌ ಬಂಧನ

ಈ ಸಿನಿಮಾದಲ್ಲಿ ರಾವ್‌ ರಮೇಶ್‌, ಸುನೀಲ್‌, ಆದಿತ್ಯ ಮೆನನ್‌, ರಾಘವೇಂದ್ರ ಶ್ರವಣ್‌, ದೇವರಾಜ್‌, ಜಯಪ್ರಕಾಶ್‌, ವಿನಯಾಪ್ರಸಾದ್‌ ಮುಂತಾದವರನ್ನು ಒಳಗೊಂಡ ದೊಡ್ಡ ತಾರಾಬಳಗವಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಈ ಸಿನಿಮಾದ ನಿರ್ಮಾಣ ಹೊಣೆಯನ್ನು ರವಿರಾಜ್‌ ಅವರು ಹೊತ್ತಿದ್ದಾರೆ. ನಿರ್ದೇಶಕ ಎಂ. ಶಶಿಧರ್‌ ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಸದ್ಯ ಸಿನಿಮಾ ಕಥೆ ಪಾತ್ರದ ಬಗ್ಗೆ ಸಂಪೂರ್ಣವಾಗಿ ಇನ್ನಷ್ಟೇ ತಿಳಿಯಬೇಕಿದೆ.

Ajagrata Movie : Actress Radhika Kumaraswamy will appear in the new movie “Ajagrata”.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular