ದಿ‌ ಕೇರಳ ಸ್ಟೋರಿ ನಟಿ ಆದ ಶರ್ಮಾಗೆ ಅಪಘಾತ

ದಿ ಕೇರಳ ಸ್ಟೋರಿ ಬಿಡುಗಡೆಯಾದ ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಭರ್ಜರಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕಂಡಿದೆ. ನಿರ್ದೇಶಕ ಸುದೀಪ್ತೋ ಸೇನ್‌ ಅವರ ಆಕ್ಷನ್ ಕಟ್‌ನಲ್ಲಿ ಮೂಡಿ ಬಂದಿರುವ ದಿ ಕೇರಳ ಸ್ಟೋರಿ ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾ ಬಿಡುಗಡೆಯಾದ ದಿನದಿಂದ ಒಂದಾಲ್ಲೊಂದು ವಿಷಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಇಂದಿನವರೆಗೂ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಕಾಣುತ್ತಿದೆ. ಒಂದು ವಾರ ಮುಗಿಯುವುದರೊಳಗೆ ಒಟ್ಟು 113 ಕೋಟಿ ರೂಪಾಯಿ ಗಳಿಸುವ ಮೂಲಕ ಈ ಸಿನಿಮಾ ಬ್ಲಾಕ್‌ ಬಸ್ಟರ್‌ ಎನಿಸಿಕೊಂಡಿದೆ. ಸದ್ಯ ಸಿನಿತಂಡ ಸಕ್ಸಸ್‌ ಸಂಭ್ರಮದಲ್ಲಿ ಊರೂರು ಸುತ್ತಾಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದೆ. ಇದೆಲ್ಲದರ ನಡುವೆ ನಿರ್ದೇಶಕ ಸುದೀಪ್ತೋ ಸೇನ್‌ ಹಾಗೂ ನಟಿ ಅದಾ ಶರ್ಮಾ (Adah Sharma – Director Sudipto Sen) ರಸ್ತೆ ಅಪಘಾತದಿಂದ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮುಂಬೈನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಹೋಗುವಾಗ ಸಿನಿತಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿದೆ ಎಂದು ವರದಿ ಆಗಿದೆ. ಈ ಸಿನಿಮಾವು ಕೇರಳದಲ್ಲಿ ಬಲವಂತವಾಗಿ ಯುವತಿಯರನ್ನು ಮತಾಂತರ ಮಾಡಿ ಭಯೋತ್ಪಾದನೆ ಚಟುವಟಿಕೆ ನೂಕಲಾಗಿದೆ ಎನ್ನುವ ವಿಷಯವನ್ನು ಇಟ್ಟುಕೊಂಡು ಕಥೆಯನ್ನು ರಚಿಸಿ, ನಿರ್ಮಿಸಲಾಗಿದೆ. ಸದ್ಯ ಈ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವೀಕೆಂಡ್‌ ಮಾತ್ರವಲ್ಲದೇ ವಾರದ ನಡುವೆಯಲ್ಲೂ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ. ಕೆಲವು ಕಡೆಗಳಲ್ಲಿ ಪ್ರದರ್ಶನಕ್ಕೆ ಮುಟ್ಟುಗೋಲು ಹಾಕಿದರೆ ಇನ್ನು ಕೆಲವೆಡೆ ತೆರಿಗೆ ವಿನಾಯಿ ನೀಡಲಾಗಿದೆ.

ನಿನ್ನೆ(ಮೇ 14) ಸಿನಿತಂಡ ಮುಂಬೈನಲ್ಲಿ ಕಾರ್ಯಕ್ರಮ ಮುಗಿಸಿ ತೆಲಂಗಾಣದ ಕರೀಂ ನಗರಕ್ಕೆ ತೆರಳಬೇಕಿತ್ತು. ಅಪಘಾತವಾದ ಕಾರಣ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಇನ್ನು ದಿ ಕೇರಳ ಸ್ಟೋರಿ ತಂಡಕ್ಕೆ ಅಪಘಾತವಾಗಿರುವ ಸುದ್ದಿ ಸಖತ್‌ ವೈರಲ್‌ ಆಗಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಆದರೆ ಕೂಡಲೇ ಸಿನಿತಂಡವೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಎಲ್ಲದಕ್ಕೂ ತೆರೆ ಎಳೆದಿದೆ.

ಇದನ್ನೂ ಓದಿ : ವೇಶ್ಯಾವಾಟಿಕೆ ತೊಡಗಿಸಿಕೊಂಡ ಖ್ಯಾತ ನಟಿ ಹಾಗೂ ಮಾಡೆಲ್‌ ಬಂಧನ

ಇದನ್ನೂ ಓದಿ : ಮೆಕ್‌ ಡೊನಾಲ್ಡ್ಸ್‌ ಬ್ರಾಂಡ್‌ಗೆ ರಾಯಭಾರಿಯಾದ ಜೂ. ಎನ್‌ಟಿಆರ್‌ : ಸಂಭಾವನೆ ಎಷ್ಟು ಗೊತ್ತೆ ?

ಈ ಸಿನಿಮಾ ಗೆಲುವಿನಿಮದ ನಟಿ ಅದಾ ಶರ್ಮಾ ಸಖತ್‌ ಖುಷಿಯಲ್ಲಿ ಇದ್ದಾರೆ. ಇನ್ನು ನಿರ್ಮಾಪಕ ವಿಪುಲ್‌ ಅಮೃತ್‌ಲಾಲ್‌ ಶಾ ಅವರಿಗೆ ಈ ಸಿನಿಮಾದಿಂದ ಭರ್ಜರಿ ಲಾಭ ದೊರಕಿದೆ. ಹೀಗಾಗಿ ದಿ ಕೇರಳ ಸ್ಟೋರಿ ಸಿನಿಮಾದ ಅಬ್ಬರ ಮತ್ತಷ್ಟು ದಿನ ಮುಂದುವರೆಯುವಂತೆ ಕಾಣುತ್ತಿದೆ. ವಿಮರ್ಶಕರ ಪ್ರಕಾರ ಎರಡನೇ ವಾರಾಂತ್ಯದಲ್ಲಿ ಕೂಡ ಭರ್ಜರಿ ಕಲೆಕ್ಷನ್‌ ಕಾಣುವ ಸಾಧ್ಯತೆ ಇದೆ. ಶೀಘ್ರದಲ್ಲೇ ಈ ಸಿನಿಮಾ ನೂರು ಕೋಟಿ ರೂಪಾಯಿ ಕಲೆಕ್ಷನ್‌ ಮಾಡಲಿದೆ. ಅದಾ ಶರ್ಮಾ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಸಖತ್‌ ಮೈಲೇಜ್‌ ಸಿಕ್ಕಿದೆ. ಹೀಗಾಗಿ ಅವರಿಗೆ ಹೊಸ ಹೊಸ ಅವಕಾಶಗಳು ಅರಸಿ ಬರಲಿದೆ.‌

The Kerala Story Actress Adah Sharma, Director Sudipto Sen met with a road accident.

Comments are closed.