ಚಂದನವನದಲ್ಲಿ ಚೆಲುವಿನ ಚಿತ್ತಾರ ಮೂಡಿಸಿದ್ದ ನಟಿ ಅಮೂಲ್ಯ (Amulya ). ಬಾಲನಟಿಯಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಅಮೂಲ್ಯ ( Amulya ) ಬಳಿಕ ನಾಯಕಿಯಾಗಿ ಮಿಂಚಿದರು. ಮದುವೆಯ ಬಳಿಕ ಬೆಳ್ಳಿತೆರೆಯಿಂದ ಅಂತರ ಕಾಯ್ದುಕೊಂಡಿದ್ದರೂ ಅಭಿಮಾನಿಗಳ ಅಭಿಮಾನ ಮಾತ್ರ ತಗ್ಗಿಲ್ಲ. ಸದ್ಯ ತಾಯ್ತನದ ಸಂಭ್ರಮದಲ್ಲಿರೋ ಅಮೂಲ್ಯ ಸಖತ್ ಸ್ಟೈಲಿಸ್ ಹಾಗೂ ಬ್ಯೂಟಿಫುಲ್ ಪೋಟೋ ಶೂಟ್ ಮೂಲಕ ಗಮನಸೆಳೆದಿದ್ದಾರೆ.

ಸ್ಯಾಂಡಲ್‌ವುಡ್‌ನ ಐಶೂ ಎಂದೇ ಫೇಮಸ್ ಆಗಿರೋ ನಟಿ ಅಮೂಲ್ಯ ಕಳೆದ ಹಲವು ವರ್ಷಗಳಿಂದ ಬಣ್ಣ ಹಚ್ಚಿಲ್ಲ. ಆದರೂ ಅಭಿಮಾನಿಗಳು ಮಾತ್ರ ಇನ್ನೂ ಅಮೂಲ್ಯರನ್ನು ಮರೆತಿಲ್ಲ. ಸದ್ಯ ಮದುವೆಯಾದ ಐದು ವರ್ಷಗಳ ಬಳಿಕ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದಾರೆ ಅಮೂಲ್ಯ (Amulya ). ಮೊನ್ನೆಯಷ್ಟೇ ಅದ್ದೂರಿ ಸೀಮಂತ ಆಚರಿಸಿಕೊಂಡ ಅಮೂಲ್ಯ ಅದಾದ ಮೇಲೆ ಸಿನಿ ತಾರೆಯರ ಜೊತೆಗೊಂದು ಬೇಬಿ ಶೋವರ್ ಪಾರ್ಟಿಯಲ್ಲೂ ಮಿಂಚಿದ್ದರು.

ರಾಧಿಕಾ ಪಂಡಿತ್ ರಿಂದ ಆರಂಭಿಸಿ 90 ರ ದಶಕದ ಸುಧಾರಾಣಿ, ಶೃತಿ, ಮಾಳವಿಕಾರ ತನಕ ಸ್ಯಾಂಡಲ್ ವುಡ್ ನ ಎಲ್ಲ ಹಿರಿ ಕಿರಿಯ ತಾರೆಯರು ಬೇಬಿ ಶೋವರ್ ಪಾರ್ಟಿಯಲ್ಲಿ ಪಾಲ್ಗೊಂಡು ಅಮೂಲ್ಯ (Amulya ) ಗೆ ಶುಭಹಾರೈಸಿ ಸಂಭ್ರಮಿಸಿದ್ದರು.ಎಲ್ಲ ನಟಿಯರ ಜೊತೆ ಅಮೂಲ್ಯ ಬೇಬಿ ಬಂಪ್ ಹೊತ್ತು ಪೋಸ್ ಕೊಟ್ಟ ಪೋಟೋಗಳು ಸೋಷಿಯಲ್ ಮೀಡಿಯಾ ದಲ್ಲಿ ಫುಲ್ ವೈರಲ್ ಆಗಿತ್ತು.

ಕಳೆದ ಕೆಲ ತಿಂಗಳ ಹಿಂದೆ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ ತಾವು ಹೊಸ ಅತಿಥಿಯನ್ನು ಬರಮಾಡಿಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದರು. ಈಗ ಇನ್ನೇನು ಡೆಲಿವರಿ ಡೇಟ್ ಹತ್ತಿರವಿರುವಾಗಲೇ ನಟಿ ಅಮೂಲ್ಯ ಮತ್ತೊಂದು ನೇಚರ್ ಥೀಮ್ ನಲ್ಲಿ ಬೇಬಿ ಬಂಪ್ ಪೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ.

ದೊಡ್ಡ ಕೆರೆಯೊಂದರಲ್ಲಿ ಸುಂದರವಾದ ಹೂವಿನಿಂದ ಅಲಂಕೃತ ತೂಗೂಯ್ಯಾಲೆಯಲ್ಲಿ ಕೂತು ಬೇಬಿ ಬಂಪ್ ನಲ್ಲಿ ಅಮೂಲ್ಯ (Amulya )ಪೋಸ್ ನೀಡಿದ್ದಾರೆ. ನೇವಿಬ್ಲೂ ಕಲರ್ಸ್ ಪ್ರಿಲ್ಸ್ ಫ್ರಾಕ್ ನಲ್ಲಿ ಅಮೂಲ್ಯ ಮಾರ್ವಲೆಸ್ ಎನ್ನಿಸುವಂತೆ ಕಂಗೊಳಿಸಿದ್ದಾರೆ. ಅದೇ ಕಲರ್ ಶರ್ಟ್ ನಲ್ಲಿ ಪತಿ ಜಗದೀಶ್ ಕೂಡಾ ಅಮೂಲ್ಯಗೆ ಸಾಥ್ ನೀಡಿದ್ದಾರೆ. ಈ ಪೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ತಮ್ಮ ಪ್ರೀತಿಯ ಐಶೂಗೆ ಶುಭಹಾರೈಸುತ್ತಿದ್ದಾರೆ.

ಅಮೂಲ್ಯ ಕೊರೋನಾ ಸಮಯದಲ್ಲಿ ಕೆಲಸ ಮಾಡಿದ್ದ ಕೊರೋನಾ ವಾರಿಯರ್ಸ್ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದರು. ಆ ಹೆಣ್ಣುಮಕ್ಕಳು ಅಮೂಲ್ಯಗೆ ಬೆಳ್ಳಿ ತೊಟ್ಟಿಲಲ್ಲಿ ತೂಗುವ ಕೃಷ್ಣನನ್ನು ಇಟ್ಟು ಗಿಫ್ಟ್ ಮಾಡುವ ಮೂಲಕ ಚಿಕ್ಕದಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದರು. ಒಟ್ಟಿನಲ್ಲಿ ಅಮೂಲ್ಯ ತಾಯ್ತನದ ಖುಷಿಯ ಜೊತೆ ಎಲ್ಲರ ಅಪಾರ ಪ್ರೀತಿಯನ್ನು ಪಡೆದು ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ : ಸ್ಲಿಮ್ ಹಾಗೂ ಬ್ಯುಟಿ ಆಲಿಯಾ ಭಟ್ ಫಿಟ್ನೆಸ್ ಸೀಕ್ರೆಟ್ ಏನಿರಬಹುದು ಗೊತ್ತಾ!
ಇದನ್ನೂ ಓದಿ : ಪ್ರಥಮ್ ಮೂಲಕ ಹರ್ಷ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಧ್ರುವ ಸರ್ಜಾ
(actress Amulya baby bump photoshoot viral)