Ambareesh Monument : ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸಿಎಂ ಚಾಲನೆ : ಸದ್ದಿಲ್ಲದೇ ಚುನಾವಣೆ ಸಿದ್ದವಾಗುತ್ತಿದೆ ಬಿಜೆಪಿ

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿವಾದಗಳ ನಡುವೆಯೂ ರಾಜ್ಯ ಬಿಜೆಪಿ ಈಗಾಗಲೇ ಚುನಾವಣಾ ರಣತಂತ್ರ ರೂಪಿಸಲಾರಂಭಿಸಿದ್ದು, ಬಿಬಿಎಂಪಿ ಹಾಗೂ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನೇತೃತ್ವದ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಆರಂಭಿಸಿದೆ. ಒಂದೇ ಕಲ್ಲಿಗೆ ಹಲವು ಹಕ್ಕಿ ಹೊಡೆಯೋದು ಸರ್ಕಾರದ ಮಾಸ್ಟರ್ ಪ್ಲ್ಯಾನ್ ಆಗಿದ್ದು, ಅದಕ್ಕಾಗಿಯೇ, ನಾಲ್ಕು ವರ್ಷಗಳ ಬಳಿಕ ಅಂಬರೀಶ್ ಸ್ಮಾರಕಕ್ಕೆ (Ambareesh Monument) ಚಾಲನೆ ನೀಡಿದೆ.

ಹೌದು, ರಾಜ್ಯದಲ್ಲಿ ಇನ್ನೇನು ಒಂದೂವರೆ ವರ್ಷದಲ್ಲಿ ವಿಧಾನಸಭಾ ಚುನಾವಣೆ ಬರಲಿದೆ. ಬಿಬಿಎಂಪಿ ಚುನಾವಣೆ ಯಾವಾಗ ಬೇಕಾದರೂ ನಡೆಯಬಹುದು ಎಂಬ ಸ್ಥಿತಿಯಲ್ಲಿದೆ. ಹೀಗಾಗಿ ಸದ್ದಿಲ್ಲದೇ ಬಿಜೆಪಿ ಚುನಾವಣಾ ತಯಾರಿ ಆರಂಭಿಸಿದೆ. ಚುನಾವಣೆಗೆ ಭರದ ಸಿದ್ಧತೆ ಎಂಬಂತೆ ನಗರದ ಹಲವೆಡೆ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಚಾಲನೆ ನೀಡುತ್ತಿದ್ದಾರೆ. ಈ ಮಧ್ಯೆ ಅಂಬರೀಶ್ ನಿಧನದ ನಾಲ್ಕು ವರ್ಷಗಳ ಬಳಿಕವೂ ನೆನೆಗುದಿಗೆ ಬಿದ್ದಿದ್ದ ಸ್ಮಾರಕ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ.

ಮಂಡ್ಯದ ಗಂಡು ಅಂಬರೀಶ್ ನಿಧನದ ಬಳಿಕ ಅಂಬರೀಶ್ ಸ್ಮಾರಕ (Ambareesh Monument ) ನಿರ್ಮಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.‌ಆದರೆ ಮಾಜಿಸಿಎಂ ಬಿಎಸ್ವೈ ತಮ್ಮ ಅಧಿಕಾರಾವಧಿಯಲ್ಲಿಯೇ ಅನುಮೋದನೆ ನೀಡಿದ್ದರೂ ಯೋಜನೆ ಮಾತ್ರ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡೋ ಮೂಲಕ ಸಿಎಂ ಬೊಮ್ಮಾಯಿ ಅಂಬರೀಶ್ ಪತ್ನಿ ಹಾಗೂ ಸಂಸದೆ ಸುಮಲತಾ ಹಾಗೂ ಚಿತ್ರರಂಗದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮಾತ್ರವಲ್ಲ ರಾಜ್ಯದಾದ್ಯಂತ ಇರೋ ಅಸಂಖ್ಯ ಅಂಬರೀಶ್ ಅಭಿಮಾನಿಗಳ ವಿಶ್ವಾಸ ಗೆದ್ದಿದ್ದಾರೆ.

ಅಂಬರೀಶ್ ಕೇವಲ ನಟರಾಗಿ ಮಾತ್ರವಲ್ಲ ರಾಜಕೀಯ ನಾಯಕರಾಗಿರಯೂ ರಾಜ್ಯಕ್ಕೆ ಚಿರಪರಿಚಿರತರು.‌ ಸಿನಿಮಾ ರಂಗದಲ್ಲಿ ಅಂಬರೀಶ್ ಅವರನ್ನು ಮನೆಯ ಸದಸ್ಯರಂತೆ, ಅಣ್ಣನಂತೆ ಆರಾಧಿಸುವವರ ಸಂಖ್ಯೆ ದೊಡ್ಡದಿದೆ. ಹೀಗಾಗಿ ಈ ಸ್ಮಾರಕ (Ambareesh Monument ) ನಿರ್ಮಾಣದ ಮೂಲಕ ಬಿಜೆಪಿ ಎಲ್ಲರ ಓಟನ್ನು ಕಬಳಿಸುವ ಪ್ಲ್ಯಾನ್ ಮಾಡಿದೆ. ರವಿವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದ ಅಂಬರೀಶ್ ಸಮಾಧಿ ಬಳಿ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಸಿಎಂ ಚಾಲನೆ ನೀಡಿದ್ದಾರೆ. ಈ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ, ಸಚಿವ ಗೋಪಾಲಯ್ಯ, ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ರಾಜ್ಯ ಸರಕಾರ 1.35 ಎಕರೆ ಜಾಗದಲ್ಲಿ 12 ಕೋಟಿ ವೆಚ್ಚದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣ ಮಾಡಲಿದೆ.

ಇದನ್ನೂ ಓದಿ : ಹರ್ಷ ತಾಯಿಗೆ ಬಿಜೆಪಿ ಕೊಟ್ಟರೇ ಕಾಂಗ್ರೆಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಲ್ಲ: ಬಿ.ಕೆ.ಹರಿಪ್ರಸಾದ್ ಸ್ಪೋಟಕ ಹೇಳಿಕೆ

ಇದನ್ನೂ ಓದಿ : ಸದ್ಯದಲ್ಲೇ ನಿಷೇಧವಾಗುತ್ತಾ ಪಿಎಫ್ಐ : ಸಿಎಂ ಬೊಮ್ಮಾಯಿ ಕೊಟ್ರು ಸುಳಿವು

(Construction of Ambareesh Monument Cone establishment by cm Basavaraj Bommai)

Comments are closed.