ಸ್ಯಾಂಡಲ್ವುಡ್ ಕ್ಯೂಟ್ ನಟಿ ಅಮೂಲ್ಯಾ (Amulya ) ಇಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪತಿ, ಜಗದೀಶ್ ಆರ್ ಚಂದ್ರ ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಈ ಖುಷಿಯನ್ನು ಫೇಸ್ಬುಕ್ ಮೂಲಕ ಹಂಚಿದ್ದು, ತಮ್ಮೊಡನೆ ನಿಂತ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಜಯನಗರದ ಕ್ಲೈಡ್ ನೈಟ್ ಆಸ್ಪತ್ರೆಯಲ್ಲಿ ಅಮೂಲ್ಯ ಇಂದು 11.45ಕ್ಕೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಶಿಕ ರಂಗನಾಥ್, ಹರ್ಷಿಕ ಪೂಣಚ್ಚ, ಸೋನು ಗೌಡ ಮುಂತಾದ ಸ್ಯಾಂಡಲ್ ವುಡ್ ನಟಿಯರು ಶುಭಾಶಯ ಕೋರಿದ್ದಾರೆ.

ಸ್ಯಾಂಡಲ್ ವುಡ್ ನ ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಪಾಲಿಗೆ ಶಿವರಾತ್ರಿ ಡಬ್ಬಲ್ ಧಮಾಕಾತಂದಿದೆ. ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದ ಅಮೂಲ್ಯ ಅವಳಿ ಜವಳಿ (Amulya Twin Babies )ಮಕ್ಕಳಿಗೆ ಜನ್ಮವಿತ್ತಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಿದ್ದಾರೆ ಎಂದು ಅಮೂಲ್ಯ ಪತಿ ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಹಾಶಿವರಾತ್ರಿಯ ಪುಣ್ಯ ದಿನದಂದು ಅವಳಿ ಮಕ್ಕಳೊಂದಿಗೆ (Amulya Jagadeesh ) ಆಶೀರ್ವದಿಸಲ್ಪಟ್ಟಿದ್ದಾರೆ . ಶಿವರಾತ್ರಿಯ ಶುಭ ದಿನದಂದು ಮಹಾದೇವನ ಆಶೀರ್ವಾದವಾಗಿದ್ದು ಸಂತೋಷ ತಂದಿದೆ. ತಾಯಿ ಮತ್ತು ಮಕ್ಕಳಿಬ್ಬರೂ ಸಂಪೂರ್ಣವಾಗಿ ಆರೋಗ್ಯದಿಂದಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು, ಈ ಜೀವನದ ಪ್ರಯಾಣದುದ್ದಕ್ಕೂ ನಮ್ಮ ಮೇಲೆ ನಿಮ್ಮ ಶುಭ ಹಾರೈಕೆಗಳಿರಲಿ ಎಂದು ಅಮೂಲ್ಯ ಫೇಸ್ ಬುಕ್ ಮಾಹಿತಿ ನೀಡಲಾಗಿದೆ.

ಕೆಲದಿನಗಳ ಹಿಂದೆಯಷ್ಟೇ ಅಮೂಲ್ಯ ಹೊಸ ಪೋಟೋಶೂಟ್ ಶೇರ್ ಮಾಡಿದ್ದರು. ಅದಕ್ಕೂ ಮೊದಲು ಅದ್ದೂರಿ ಹೂವಿನ ಸೆಟ್ ನಲ್ಲಿ ಗ್ರ್ಯಾಂಡ್ ಸೆಟ್ ನಲ್ಲಿ ಸೀಮಂತ ಮಾಡಲಾಗಿತ್ತು.ಇದಲ್ಲದೇ ಸ್ಯಾಂಡಲ್ ವುಡ್ ನಟ- ನಟಿಯರನ್ನೆಲ್ಲ ಕರೆದು ನಟಿ ಅಮೂಲ್ಯ ಪತಿ ಜಗದೀಶ್ ಪತ್ನಿಗೆ ಗ್ರ್ಯಾಂಡ್ ಬೇಬಿ ಶೋವರ್ ಪಾರ್ಟಿ ನಡೆಸಿದ್ದರು. ಈ ಪಾರ್ಟಿಯಲ್ಲಿ ನಟಿ ರಾಧಿಕಾ ಪಂಡಿತ್, ರಾಗಿಣಿ ದ್ವಿವೇದಿ , ಸುಧಾರಾಣಿ, ಶೃತಿ ಸೇರಿದಂತೆ ಹಲವು ಸ್ಯಾಂಡಲ್ ವುಡ್ ನಟಿಯರು ಪಾಲ್ಗೊಂಡಿದ್ದರು. ಎಲ್ಲರೂ ಚೊಚ್ಚಲ ಬಸುರಿ ಅಮೂಲ್ಯ ಜೊತೆ ಪೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದರು. ಎಲ್ಲರೂ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದಾದ ಮೇಲೂ ಕೆರೆಯಲ್ಲಿ ಹೂವು ಅಲಂಕೃತ ಉಯ್ಯಾಲೆ ಯಲ್ಲಿ ಕೂತು ತಿಳಿನೀಲಿ ಗೌನ್ ನಲ್ಲಿ ಬೇಬಿ ಬಂಪ್ ಜೊತೆ ಪೋಟೋಶೂಟ್ ನಡೆಸಿ ಆ ಪೋಟೋಗಳನ್ನು ಹಂಚಿಕೊಂಡಿದ್ದರು.

ಬಾಲನಟಿಯಾಗಿ ಚಂದನವನಕ್ಕೆ ಕಾಲಿಟ್ಟ ನಟಿ ಅಮೂಲ್ಯ (Amulya ) ಈಗ ನಾಯಕಿಯಾಗಿ ಹಲವು ಸಿನಿಮಾದಲ್ಲಿ ಮಿಂಚಿದ್ದು, 2017 ರಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ಅಮೂಲ್ಯ ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಯಶ್, ನೆನಪಿರಲಿ ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಹಲವು ಸ್ಟಾರ್ ಗಳ ಜೊತೆ ನಟಿಸಿದ ಅಮೂಲ್ಯ ಸ್ಯಾಂಡಲ್ ವುಡ್ ನಿಂದ ದೂರ ಉಳಿದರೂ ಅಭಿಮಾನಿಗಳ ಅಭಿಮಾನ ಕಡಿಮೆಯಾಗಿಲ್ಲ. ಈಗಲೂ ಚಂದನವನದ ಐಶು ಎಂದು ಅಮೂಲ್ಯರನ್ನು ನೆನಪಿಸಿಕೊಳ್ಳುತ್ತಾರೆ.

ಮಕ್ಕಳು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರೂ ಕೂಡ ಖಚಿತಪಡಿಸಿದ್ದಾರೆ. ಈ ವಿಚಾರವನ್ನು ಪತಿ ಜಗದೀಶ್ ಶ್ಚಂದ್ರ ತಮ್ಮ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಮೂಲ್ಯ 2001ರಲ್ಲಿ ವಿಷ್ಣುವರ್ಧನ್ ಅಭಿನಯ ಪರ್ವ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 2007ರಲ್ಲಿ ತೆರೆಕಂಡ ಗಣೇಶ್ ನಾಯಕನಟನಾಗಿ ಅಭಿನಯಿಸಿದ ಚೆಲುವಿನ ಚಿತ್ತಾರ ಅಮೂಲ್ಯಗೆ ಹೆಸರು ತಂದುಕೊಟ್ಟಿತು. ಆನಂತರ, ಚೈತ್ರದ ಚಂದ್ರಮ, ನಾನೂ ನನ್ನ ಕನಸು ಚಿತ್ರದಲ್ಲಿ ಅಭಿಯನಸಿದ್ದಾರೆ. 2013ರಲ್ಲಿ ಅಮೂಲ್ಯ-ನಟ ಗಣೇಶ್ ನಾಯಕನಟನೆಯ ಶ್ರಾವಣೀ ಸುಬ್ರಮಣ್ಯ ಚಿತ್ರ ಅದ್ಬುತ ಯಶಸ್ಸು ಗಳಿಸಿತು. 2016 ರಲ್ಲಿ ತೆರೆಕಂಡ ಮದುವೆ ಮಮತೆಯ ಕರೆಯೋಲೆ ಸೇರಿದಂತೆ ಒಟ್ಟು 25 ಚಿತ್ರಗಳಲ್ಲಿ ಅಮೂಲ್ಯ ಅಭಿನಯಿಸಿದ್ದಾರೆ.
ಇದನ್ನೂ ಓದಿ : ನೀರ ನಡುವೆ ಹೂವು ಉಯ್ಯಾಲೆಯಲ್ಲಿ ಚಿತ್ತಾರದ ಬೆಡಗಿ : ಮನಸೆಳೆದ ಅಮೂಲ್ಯ ಬೇಬಿ ಬಂಪ್ ಪೋಟೋಶೂಟ್
ಇದನ್ನೂ ಓದಿ : ಪುನೀತ್ ಹೆಸರಿನಲ್ಲಿ ಉಡಾವಣೆಯಾಗಲಿದೆ ಉಪಗ್ರಹ
( Amulya Jagadeesh blessed with twin babies)