ಮಂಗಳವಾರ, ಮೇ 6, 2025
HomeCinemaAnanth Nag : ಕೆಜಿಎಫ್‌ ನಿಂದ ಅನಂತನಾಗ್ ದೂರ ಸರಿದದ್ದು ಅವರ ವೈಯುಕ್ತಿಕ ಕಾರಣಗಳಿಂದ, ಅದನ್ನು...

Ananth Nag : ಕೆಜಿಎಫ್‌ ನಿಂದ ಅನಂತನಾಗ್ ದೂರ ಸರಿದದ್ದು ಅವರ ವೈಯುಕ್ತಿಕ ಕಾರಣಗಳಿಂದ, ಅದನ್ನು ಪ್ರಶ್ನಿಸುವುದು ಸರಿಯಲ್ಲ ಎಂದ ಪ್ರಶಾಂತ್ ನೀಲ್

- Advertisement -

ಕೆಜಿಎಫ್ ಸಿನಿಮಾ ಅಂದರೆ ಕೇವಲ ನಟ ಮಾತ್ರವಲ್ಲ. ಅದರಲ್ಲಿ ಬಹಳಷ್ಟು ಜನರ ಹೋರಾಟವಿದೆಯಂತೆ. ಮುಖ್ಯವಾಗಿ, ನಿರ್ದೇಶಕರ ಕನಸಿಗೆ ತಮ್ಮ ಕ್ರಿಯೇಟಿವಿಟಿ ಹೊಂದಿಸಿದ್ದು ನಟ ಯಶ್ ಅವರಂತೆ. ಹೀಗಂತ, ಪ್ರಶಾಂತ್ ನೀಲ್ ನಟ ಯಶ್ ಅವರನ್ನು ಹೊಗಳಿದರು. ಈ ಚಿತ್ರದ ಇನ್ನೊಂದು ಹೈಲೇಟ್ ಅಂದರೆ, ಯಶ್ ತಮ್ಮ ಪಾತ್ರಕ್ಕೆ ತಾವೇ ಡೈಲಾಗ್ ಬರೆದುಕೊಂಡಿದ್ದಾರೆ ಎನ್ನುವ ವಿಚಾರವನ್ನು ಪ್ರಶಾಂತ್ ನೀಲ್ ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

‘ಯಶ್ ಅವರ ಜೀವನಾನುಭವ ಬಹಳ ದೊಡ್ಡದು. ಅದನ್ನು ಬಳಸಿಕೊಂಡು ತಮ್ಮ ಪಾತ್ರಕ್ಕೆ ತಾವೇ ಸಂಭಾಷಣೆ ಬರೆದುಕೊಂಡಿದ್ದಾರೆ. ಅವರೇನು ಮೊದಲೇ ಸನ್ನಿವೇಶ ಪಡೆದುಕೊಂಡು ಸಂಭಾಷಣೆ ಸಿದ್ದ ಮಾಡಿಕೊಂಡು ಸೆಟ್ ಗೆ ಬರುತ್ತಿರಲಿಲ್ಲ. ಸೆಟ್ಟಲ್ಲೇ ಕೂತು ಅವರ ಸಂಭಾಷಣೆಯನ್ನು ಬರೆದು ಕೊಳ್ಳುತ್ತಿದ್ದರು. ಅದರಲ್ಲಿ ಅವರ ಅನುಭವ ಇರುವುದರಿಂದ ಬಹಳ ಪರಿಣಾಮಕಾರಿಯಾಗಿದೆ’ ಎಂದು ನೀಲ್ ವಿವರಣೆ ಕೊಟ್ಟರು.

ಇದನ್ನೂ ಓದಿ : KGF 2 : ಕೆಜಿಎಫ್ ಅನ್ನು ಪಾನ್ ಇಂಡಿಯಾ, ಸೌತ್ ಇಂಡಿಯಾ ಸಿನಿಮಾ ಅನ್ನ ಬೇಡಿ! ಅದು ಅದ್ಭುತ ಹಿಂದೂಸ್ತಾನ್ ಮೂವಿ ಎಂದ ಸಂಜಯ್ ದತ್

ಪ್ರಶಾಂತ್ ನೀಲ್ ಯಶ್ ಜೊತೆಗೆ ನಿರ್ಮಾಪಕರ ಗುಣಗಾನವನ್ನೂ ಮಾಡಿದರು. ‘ನೀವು ಕೆಜಿಎಫ್ ಬಗ್ಗೆ ಏನು ನೋಡುತ್ತಿದ್ದೀರಿ, ಏನು ಓದಿದ್ದೀರಿ ಅದಕ್ಕೆಲ್ಲಾ ಕಾರಣ ನಿರ್ಮಾಪಕ ವಿಜಯ್ ಕುಮಾರ್ ಕಿರಗಂದೂರು. ಅವರೇ ಈ ಚಿತ್ರದ ಬೆನ್ನೆಲುಬು. ಅವರು ಯಾವತ್ತೂ ಬಂದು ಚಿತ್ರದ ಬಜೆಟ್ ಕಡಿಮೆ ಮಾಡಿ ಅನ್ನಲಿಲ್ಲ. ಹಾಗಾಗಿ, ನಾವು ಬೌಂಡರಿ ಇಲ್ಲದೆ ಯೋಚನೆ ಮಾಡುತ್ತಾ ಹೋದೆವು. ಎಲ್ಲವೂ ಸಿನಿಮಾದಲ್ಲಿ ನೋಡಲಿದ್ದೀರಿ’ ಎಂದು ನೀಲ್ ಹೇಳಿದರು.

ಅನಂತನಾಗ್ ಸಿನಿಮದಲ್ಲಿ ನಟಿಸಬೇಕಿತ್ತು. ಆದರೆ, ಅವರು ಮಧ್ಯಂತರದಲ್ಲಿ ಸಿನಿಮಾ ತಂಡ ತೊರೆದರು. ಇದಕ್ಕೆ ಕಾರಣ ಏನು ಅನ್ನೋದನ್ನು ನೀಲ್ ಬಹಿರಂಗ ಪಡಿಸಲಿಲ್ಲ. ‘ಅವರ ಹಿರಿಯನಟರು, ನಮ್ಮ ಸಿನಿಮಾದಲ್ಲಿ ಇರಬೇಕಿತ್ತು. ಆದರೆ, ಸಿನಿಮಾ ಬಿಟ್ಟಿದ್ದ ಅವರ ವೈಯುಕ್ತಿಕ ಕಾರಣಕ್ಕೆ. ಅವರ ಇಷ್ಟವನ್ನು ನಾವು ಪ್ರಶ್ನಿಸುವುದು ಸರಿಯಲ್ಲ.ಅನಂತ್ ನಾಗ್ ಅವರ ಮಾಡಬೇಕಾದ ಪಾತ್ರಕ್ಕೆ ನಾವು ನ್ಯಾಯ ಸಲ್ಲಿಸಿದ್ದೇವೆ’ ಎಂದು ಪ್ರಶಾಂತ್ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ : KGF 2 : ಕೆಜಿಎಫ್ 2 ಟಿಕೆಟ್‌ ಬೊಂಬಾಟ್‌ ಸೇಲ್‌! ಕೇವಲ 12 ಗಂಟೆಯಲ್ಲಿ 1.7 ಲಕ್ಷ ಮುಂಗಡ ಟಿಕೆಟ್ ಬುಕ್ಕಿಂಗ್ !

(Ananth Nag We dont question his personal decision said Prashant)

RELATED ARTICLES

Most Popular