CBSE Class 10 12 : ಕೊನೆಯ 15 ದಿನಗಳಲ್ಲಿ ಹೀಗಿರಲಿ ನಿಮ್ಮ ಪರೀಕ್ಷಾ ತಯಾರಿ

CBSE Class 10, 12 : CBSE 10 ಮತ್ತು 12 ನೇ ತರಗತಿಯ ಟರ್ಮ್ 2 ಪರೀಕ್ಷೆಗಳು ಏಪ್ರಿಲ್ 26, 2022 ರಂದು ಪ್ರಾರಂಭವಾಗಲಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೇವಲ 15 ದಿನ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಈ ಕೊನೆಯ 15 ದಿನಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ತಯಾರಿ ಹೇಗಿರಬೇಕು ಅನ್ನೋದಕ್ಕೆ ಇಲ್ಲಿದೆ ಒಂದಷ್ಟು ಮಾಹಿತಿ :

ಸಿಬಿಎಸ್​​ಇ ಬೋರ್ಡ್​ ವಿದ್ಯಾರ್ಥಿಗಳು ಇದೀಗ ತಮ್ಮ ಟರ್ಮ್​ 2 ಪರೀಕ್ಷಾ ತಯಾರಿಯ ಕೊನೆಯ ಹಂತದಲ್ಲಿದ್ದಾರೆ. 10 ಹಾಗೂ 12ನೇತರಗತಿಯ ಎಲ್ಲಾ ವಿದ್ಯಾರ್ಥಿಗಳು ಈಗಾಗಲೇ ತಾವು ಓದಿನ ವಿಷಯಗಳನ್ನು ಮರುಜ್ಞಾಪನ ಮಾಡಿಕೊಳ್ಳುವ ಹಂತದಲ್ಲಿದ್ದಾರೆ. ಈ ಕೊನೆಯ ಅವಧಿಯಲ್ಲಿ ನಿಮ್ಮ ಪರೀಕ್ಷೆಯ ತಯಾರಿ ಯಾವ ರೀತಿ ಇರಬೇಕು ಅನ್ನೋದಕ್ಕೆ ತಜ್ಞರು ಕೆಲವೊಂದಿಷ್ಟು ಟಿಪ್ಸ್​ಗಳನ್ನ ನೀಡಿದ್ದಾರೆ.

CBSE ತರಗತಿ 10, 12 ಬೋರ್ಡ್ ಪರೀಕ್ಷೆಗಳು: ಕಳೆದ 15 ದಿನಗಳಲ್ಲಿ ಪರಿಷ್ಕರಿಸುವುದು ಹೇಗೆ ?

ಈ ವರ್ಷದ CBSE ದಿನಾಂಕದ ಹಾಳೆಯನ್ನು ಸಮತೋಲನಗೊಳಿಸಲಾಗಿದೆ ಮತ್ತು ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಚೆನ್ನಾಗಿ ಸುತ್ತುತ್ತದೆ. ವಿದ್ಯಾರ್ಥಿಗಳ ಪರೀಕ್ಷೆಗೆ ಕೇವಲ 15 ದಿನಗಳು ಮಾತ್ರ ಉಳಿದಿವೆ. ಕಳೆದ 15 ದಿನಗಳಲ್ಲಿ ಏನು ಮಾಡಬಾರದು ಎಂಬುದು ಇಲ್ಲಿದೆ:

ಓದಿದ್ದನ್ನು ಜ್ಞಾಪಿಸಿಕೊಳ್ಳುವ ಕೆಲಸವನ್ನಷ್ಟೇ ಮಾಡಿ :

ಇದು ಕೇವಲ ನೀವು ಓದಿದ್ದನ್ನು ಮೆಲುಕು ಹಾಕುವ ಸಮಯ. ಹೀಗಾಗಿ ನೀವು ಈಗಾಗಲೇ ಓದಿರುವುದು ಎಷ್ಟು ನೆನಪಿದೆ ಎಂಬುದನ್ನು ಖಾತರಿಪಡಿಸಿಕೊಳ್ಲಿ. ಹೊಸ ಅಧ್ಯಯನ ಮಾಡುವುದಕ್ಕಿಂತ ಈಗ ನೀವು ಈ ಹಿಂದೆ ಓದಿದ್ದರಲ್ಲಿ ಎಷ್ಟನ್ನು ನೆನಪಿಟ್ಟುಕೊಂಡಿದ್ದೀರಿ ಎಂಬುದಷ್ಟನ್ನೇ ತಿಳಿದುಕೊಳ್ಳಿ.

ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡಿ :

ಈ 15 ದಿನಗಳಲ್ಲಿ ನೀವು ವಿವಿಧ ವಿಷಯಗಳ ಕನಿಷ್ಟ 4 ಹಳೆಯ ಪ್ರಶ್ನೆಪತ್ರಿಕೆಗಳನ್ನು ಪ್ರತಿದಿನ ಪರಿಶೀಲಿಸಿ. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಇದು ಅಷ್ಟೊಂದು ಕಷ್ಟ ಎನಿಸಲಿಕ್ಕಿಲ್ಲ. ಆದರೆ 12ನೇ ತರಗತಿ ವಿದ್ಯಾರ್ಥಿಗಳಿಗೆ ತುಂಬಾನೇ ವಿಷಯ ಇದೋದ್ರಿಂದ ಪ್ರತಿ ದಿನಕ್ಕೆ ಒಂದು ವಿಷಯದ ಕನಿಷ್ಟ 2 ಪೇಪರ್​ಗಳನ್ನು ಬಿಡಿಸಿ.

ನಿಮ್ಮ ಸ್ನೇಹಿತರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ :

ಸ್ಪರ್ಧಾ ಗುಣ ಇರುವುದು ಒಳ್ಳೆಯದೇ. ಆದರೆ ಇದು ಅತಿಯಾದರೆ ನಿಮ್ಮ ಮಾನಸಿಕ ನೆಮ್ಮದಿಯೇ ಹಾಳಾಗಲಿದೆ. ನಿಮ್ಮ ಕೈಲಾದಷ್ಟು ಪ್ರಯತ್ನವನ್ನು ಮಾಡಿ. ನಿಮ್ಮದೇ ಆದ ಗುರಿಯನ್ನು ರಚಿಸಿಕೊಳ್ಳಿ. ಹಾಗೂ ಅದನ್ನು ತಲುಪುವತ್ತ ನಿಮ್ಮ ತಯಾರಿ ಇರಲಿ.

ಇದನ್ನು ಓದಿ : CBSE term 2 admit cards : ಸಿಬಿಎಸ್​​ಇ ಟರ್ಮ್​ 2 ಪ್ರವೇಶ ಪತ್ರಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ಇದನ್ನೂ ಓದಿ : Deoghar Cable Cars Accident : ದಿಯೋಘರ್ ರೋಪ್‌ವೇ ದುರಂತ : 2 ಸಾವು, ಅಪಾಯದಲ್ಲಿ14 ಮಂದಿ

CBSE Class 10, 12 Term 2 Exams From 26th April How To Revise In Last 15 Days

Comments are closed.