ಮಂಗಳವಾರ, ಏಪ್ರಿಲ್ 29, 2025
HomeCinemaAnchor Anushree: ಮತ್ತೆ ಹಿರಿತೆರೆಗೆ ಜಿಗಿದ ಆ್ಯಂಕರ್ ಅನುಶ್ರೀ; ಹಾರರ್ ಚಿತ್ರಕ್ಕೆ ಗೋವಾದಲ್ಲಿ ಶೂಟಿಂಗ್

Anchor Anushree: ಮತ್ತೆ ಹಿರಿತೆರೆಗೆ ಜಿಗಿದ ಆ್ಯಂಕರ್ ಅನುಶ್ರೀ; ಹಾರರ್ ಚಿತ್ರಕ್ಕೆ ಗೋವಾದಲ್ಲಿ ಶೂಟಿಂಗ್

- Advertisement -

ಕನ್ನಡದ ದುಬಾರಿ ಮತ್ತು ಅತಿ ಬೇಡಿಕೆಯ ನಿರೂಪಕಿ ಅಂದರೆ ಅನುಶ್ರೀ (Anchor Anushree). ಅವರು ಈಗ ಮತ್ತಷ್ಟು ಬ್ಯುಸಿಯಾಗಲಿದ್ದಾರೆ. ಹೇಗೆಂದರೆ, ನಾಲ್ಕು ವರ್ಷದ ನಂತರ ಅವರು ಮತ್ತೆ ಹಿರಿತೆರೆಗೆ ಬಣ್ಣ ಹಚ್ಚುತ್ತಿದ್ದಾರೆ. ಅವರ ನಟಿಸುತ್ತಿರುವ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಮಮ್ಮಿ, ದೇವಕಿ ಚಿತ್ರಗಳನ್ನು ನಿರ್ದೇಶಿಸಿರುವ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ಲೋಹಿತ್ ಜೊತೆಗೆ ಸಹಾಯಕ ನಿರ್ದೇಶಕರಾಗಿದ್ದ ಪ್ರಭಾಕರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದೊಂದು ಹಾರರ್ ಚಿತ್ರ (Sandalwood Horror Film) ಅನ್ನೋ ಸುಳಿವನ್ನು ಚಿತ್ರ ತಂಡ ಬಿಟ್ಟುಕೊಟ್ಟಿದೆ.

ಹಾರರ್ ಅಂದರೆ ನನಗಿಷ್ಟ. ಅದರಲ್ಲಿ ಥ್ರಿಲ್ಲಿಂಗ್ ಎಲಿಮೆಂಟ್ ಇರುತ್ತದೆ. ಹಾಗಾಗಿ ಕತೆ ಕೇಳುತ್ತಲೇ ಮತ್ತೆ ಬಣ್ಣ ಹಚ್ಚುವ ಆಸೆ ಬಂತು. ನಟಿಸಬೇಕು ಅನ್ನೋ ಆಸೆ ನನಗೂ ಇತ್ತು. ಅಷ್ಟರಲ್ಲಿ ಈ ಕತೆ ಇಷ್ಟವಾಯಿತು. ಹಾಗಾಗಿ, ಮತ್ತೆ ಬಣ್ಣ ಹಚ್ಚುವ ನಿರ್ಧಾರಕ್ಕೆ ಬಂದೆ ಅಂತಾರೆ ಅನುಶ್ರೀ.

ಹೆಸರಿಡದ ಚಿತ್ರದ ಬಹುತೇಕ ಚಿತ್ರೀಕರಣ ಗೋವಾದಲ್ಲಿ ನಡೆಯಲಿದೆಯಂತೆ. ಅನುಶ್ರೀ ಅವರಿಗೆ ಇದು ನಾಲ್ಕನೆ ಚಿತ್ರ. ಮೊದಲನೆಯದು ಬೆಂಕಿಪಟ್ಣ, ಎರಡನೆಯದು ರಿಂಗ್ ಮಾಸ್ಟರ್, ಮೂರನೆಯದು ಉಪ್ಪು ಹುಳಿ ಖಾರ.

ಅನುಶ್ರೀ ನಾಯಕಿಯಾಗಬೇಕು ಅಂತ ಬಂದವರು. ಕೊನೆಗೆ ನಿರೂಪಕಿಯಾದರು. ಈ ಚಿತ್ರದ ಕಥಾಹಂದರ ಬಹಳ ಕೂತೂಹಲಕಾರಿಯಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ದೈವಿಕ ಶಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಹಾಗೂ ದುಷ್ಟ ಶಕ್ತಿಗಳನ್ನು ಆರಾಧಿಸುತ್ತ ತಮ್ಮದೇ ಶೈಲಿಯಲ್ಲಿ ಬದುಕುವವರ ವರ್ಗವನ್ನು ಇಟ್ಟುಕೊಂಡು ಚಿತ್ರಮಾಡುತ್ತಿದೆ. ಅಲ್ಲಿ ನಡೆಯುವ ನೈಜ ಘಟನೆಗಳನ್ನು ಆಧಾರಿಸಿ ಚಿತ್ರದ ಕಥೆಯನ್ನು ಹೆಣೆದಿದ್ದಾರಂತೆ. ಇದರ ಜೊತೆಗೆ ಸ್ವಲ್ಪ ಹಾರರ್ ಅಂಶವನ್ನು ಸೇರಿಸಿದ್ದಾರೆ.

ಅನುಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರು ನಾಲ್ಕು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿರುವುದು ಖುಷಿ ಸಮಾಚಾರ. ಮೂರು ಚಿತ್ರಗಳಲ್ಲಿ ನಟಿಸಿರುವುದರಿಂದ ಅವರು ಮಾಗಿದ ನಟಿಯಾಗಿದ್ದಾರೆ. ಸಧ್ಯದಲ್ಲೇ ಚಿತ್ರದ ಟೈಟಲ್, ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುತ್ತೇವೆ. ಅದಕ್ಕೆ ಬೇಕಾದ ಎಲ್ಲ ತಯಾರಿಗಳೂ ನಡೆಯುತ್ತಿವೆ ಎಂದು ನಿರ್ದೇಶಕ ಪ್ರಭಾಕರ್ ಹೇಳುತ್ತಾರೆ. ಅನುಶ್ರೀ ಅವರ ಉಪ್ಪು ಹುಳಿ ಖಾರ ಚಿತ್ರವು 2017ರಲ್ಲಿ ಬಿಡುಗಡೆಯಾಗಿತ್ತು.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(Anchor Anushree returns to sandalwood announce new horror film)

RELATED ARTICLES

Most Popular