Desh Bhakti ‘Offer’ : ನಿಮ್ಮ ಹಳೆಯ ಮೊಬೈಲ್​ ನೀಡಿದರೆ ಉಚಿತವಾಗಿ ಸಿಗಲಿದೆ ಈ ಬ್ರ್ಯಾಂಡ್ ನ್ಯೂ ಸ್ಮಾರ್ಟ್​ ಫೋನ್​

Desh Bhakti ‘Offer’ :ಭಾರತ ಹಾಗೂ ಚೀನಾ ನಡುವೆ ಗಡಿ ಮಾತ್ರವಲ್ಲದೇ ಅನೇಕ ವಿಚಾರಗಳಲ್ಲಿ ಬಿಕ್ಕಟ್ಟು ಇದೆ. ಭಾರತ ಎಷ್ಟೇ ತಾಳ್ಮೆಯಿಂದ ವರ್ತಿಸಿದರೂ ಚೀನಾ ಒಂದಿಲ್ಲೊಂದು ರೀತಿಯಲ್ಲಿ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸುತ್ತಲೇ ಇರುತ್ತದೆ. ಹೀಗಾಗಿ ಚೀನಾದ ಪ್ರಾಡಕ್ಟ್​ಗಳಿಗೆ ನಿರ್ಬಂಧ ಹೇರುವ ಮೂಲಕ ಅದಕ್ಕೆ ಸರಿಯಾದ ಪಾಠ ಕಲಿಸಬೇಕು ಎಂಬ ಕೂಗು ಸಹ ಹಲವು ಬಾರಿ ಕೇಳಿ ಬಂದಿದೆ. ಇದೇ ಕಾರಣಕ್ಕೆ ಅನೇಕರು ಸ್ವದೇಶಿ ನಿರ್ಮಿತ ವಸ್ತುಗಳನ್ನೇ ಬಳಕೆ ಮಾಡಲು ಆರಂಭಿಸಿದ್ದಾರೆ.


ಆದರೆ ಮೊಬೈಲ್​ಗಳ ವಿಚಾರಕ್ಕೆ ಬಂದರೆ ಕಡಿಮೆ ದರದಲ್ಲಿ ಹೆಚ್ಚಿನ ಸೌಕರ್ಯ ನೀಡುವುದು ಚೀನಾ ಕಂಪನಿಯ ಮೊಬೈಲ್​ಗಳು. ಹೀಗಾಗಿ ಇದೊಂದು ವಿಚಾರದಲ್ಲಿ ಮಾತ್ರ ಭಾರತೀಯರಿಗೆ ಸ್ವದೇಶಿ ವಸ್ತುಗಳಿಗೆ ಮೊರೆ ಹೋಗಲು ಸಾಧ್ಯವಾಗುತ್ತಿಲ್ಲ. ಆದರೆ ಈ ಸಮಸ್ಯೆಗೂ ಇದೀಗ ಭಾರತದ ಜನಪ್ರಿಯ ಸ್ಮಾರ್ಟ್​ಫೋನ್​ ತಯಾರಕ ಕಂಪನಿ ಲಾವಾ ಪರಿಹಾರವೊಂದನ್ನು ಕಂಡು ಹಿಡಿದಿದೆ.

‘ದೇಶ ಭಕ್ತಿ’ಯ ಅಸ್ತ್ರವನ್ನು ಬಳಸಿ ತನ್ನ ಕಂಪನಿಯ ಲಾವಾ ಅಗ್ನಿ ಫೈವ್​ ಜಿ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡಲು ಮುಂದಾಗಿದೆ. ಚೀನಾ ಮೊಬೈಲ್​ ಕಂಪನಿಯ ನಿರ್ದಿಷ್ಟ ಬ್ರ್ಯಾಂಡ್​ನ ಸ್ಮಾರ್ಟ್ ಫೋನ್​ ಹೊಂದಿರುವವರು ಉಚಿತವಾಗಿಯೇ ತಮ್ಮ ಈ ಚೀನಾ ಫೋನ್​ಗಳನ್ನು ಲಾವಾ ಅಗ್ನಿ 5ಜಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದೊಂದು ಹೊಸ ರೀತಿಯ ಮಾರ್ಕೆಟಿಂಗ್​ ವಿಧಾನವಾಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿದೆ.


ಹೌದು..! ನೀವು ಉಚಿತವಾಗಿ ಲಾವಾ 5 ಜಿ ಸ್ಮಾರ್ಟ್​ಫೋನ್​ ಪಡೆಯಬೇಕು ಅಂತಿದ್ದರೆ ಇದಕ್ಕಾಗಿ ನಿಮ್ಮ ಬಳಿ ಒಂದು ನಿರ್ದಿಷ್ಟವಾದ ಸ್ಮಾರ್ಟ್​ಫೋನ್​ ಇರಬೇಕು. ರಿಯಲ್​ ಮಿ ಕಂಪನಿಯ ರಿಯಲ್​ ಮೀ 8 ಎಸ್​ ಸ್ಮಾರ್ಟ್​ಫೋನ್​ ಹೊಂದಿರುವವರಿಗೆ ಲಾವಾ ಅಗ್ನಿ 5 ಜಿ ಮೊಬೈಲ್​ ಫೋನ್​ ಉಚಿತ ವಿನಿಮಯಕ್ಕೆ ಸಿಗಲಿದೆ. ಇದಕ್ಕಾಗಿ ನೀವು ಲಾವಾ ಮೊಬೈಲ್ಸ್​ನಲ್ಲಿ ಜನವರಿ 7 ನೇ ತಾರೀಖಿನ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು.
ಭಾರತದ ಮೊದಲ 5ಜಿ ಸ್ಮಾರ್ಟ್​ ಫೋನ್​ ಎಂದು ಹೇಳಿಕೊಂಡಿರುವ ಲಾವಾ ಕಂಪನಿಯು ಭಾರತ ನನ್ನ ದೇಶ. ಆದರೆ ನನ್ನ ಸ್ಮಾರ್ಟ್ ಫೋನ್​ ಚೈನೀಸ್​ ಆಗಿದೆ ಎಂದ ಘೋಷ ವಾಕ್ಯದ ಮೂಲಕ ಈ ರೀತಿ ಸ್ಮಾರ್ಟ್ ಫೋನ್​ ವಿನಿಮಯಕ್ಕೆ ಮುಂದಾಗಿದೆ.


ಮ್ಯಾಟ್​ ಫಿನಿಶ್​ ಅನ್ನು ಹೊಂದಿರುವ ಲಾವಾ ಅಗ್ನಿ 5ಜಿ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಯಿಂದ 8GB RAM ಮತ್ತು 128GB ಮೆಮೊರಿ ಹೊಂದಿದೆ. ಇದರಲ್ಲಿ ನೀವು 256 ಜಿಬಿಯವೆರೆಗೆ ಹೆಚ್ಚುವರಿ ಸಂಗ್ರಹಣೆಯನ್ನೂ ಮಾಡಬಹುದು. 6.78-ಇಂಚಿನ ಪೂರ್ಣ-HD+ ಡಿಸ್ಪ್ಲೇಯ ಹಾಗೂ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ.

Desh Bhakti ‘Offer’: This Indian Mobile Brand Will Replace Your ‘Chinese Phone’ For Free

ಇದನ್ನು ಓದಿ : Remove Credit, Debit Card Details from Google: ಇದು ಪೇಮೆಂಟ್ ಮಾಡುವಾಗ ಡೆಬಿಟ್, ಕ್ರೆಡಿಟ್ ಕಾರ್ಡ್ ವಿವರಗಳನ್ನು ಸೇವ್ ಮಾಡುವವರು ಗಮನಸಲೆಬೇಕಾದ ಅಪ್‌ಡೇಟ್

ಇದನ್ನೂ ಓದಿ : Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

Comments are closed.