ಮಂಗಳವಾರ, ಜೂನ್ 17, 2025
HomeCinemaತುಂಬು ಗರ್ಭಿಣಿ ಅನುಷ್ಕಾ ಶೀರ್ಷಾಶನ…! ಪೋಟೋ ಜೊತೆ ನಟಿಮಣಿ ಹೇಳಿದ್ದೇನು ಗೊತ್ತಾ…!!

ತುಂಬು ಗರ್ಭಿಣಿ ಅನುಷ್ಕಾ ಶೀರ್ಷಾಶನ…! ಪೋಟೋ ಜೊತೆ ನಟಿಮಣಿ ಹೇಳಿದ್ದೇನು ಗೊತ್ತಾ…!!

- Advertisement -


ಮುಂಬೈ: ಇನ್ನೇನು ಒಂದು ತಿಂಗಳಲ್ಲಿ ತಮ್ಮ ಮೊದಲ ಮಗುವಿನ ನೀರಿಕ್ಷೆಯಲ್ಲಿರೋ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಈ ಸಮಯ ವನ್ನು ಸಖತ್ ಎಂಜಾಯ್ ಮಾಡ್ತಿದ್ದಾರೆ. ಬೇಬಿ ಬಂಪ್ ಜೊತೆ ಸದಾ ಒಂದಿಲ್ಲೊಂದು ಪೋಟೋ ಹಂಚಿಕೊಳ್ಳೋ ಅನುಷ್ಕಾ ಇವತ್ತು ಪೋಸ್ಟ್ ಮಾಡಿರೋ ಪೋಟೋ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

1606061586 420 PreEven In The Seventh Month Of Pregnancy Anushka Sharma Is Working Flaunting Baby Bump On The Set 1

ಹೌದು, ಇನ್ನೇನು ಒಂದು ತಿಂಗಳಲ್ಲಿ ಹೆರಿಗೆಯಾಗೋ ಸ್ಥಿತಿಯಲ್ಲಿ ಇರೋ ಅನುಷ್ಕಾ ತಲೆಕೆಳಗಾಗಿಸಿ,ಕಾಲು ಮೇಲೆ ಮಾಡಿ ಶೀರ್ಷಾಸನದ ಯೋಗ ಭಂಗಿಯಲ್ಲಿ ಪೋಸು ನೀಡಿದ್ದಾರೆ. ಅನುಷ್ಕಾ ಈ ಅವತಾರ ನೋಡಿದವರೆಲ್ಲ ಅಯ್ಯೋ ತುಂಬು ಗರ್ಭಿಣಿಗೆ ಯಾಕಪ್ಪಾ ಬೇಕು ಇಂತವೆಲ್ಲ ಸರ್ಕಸ್ ಅಂತ ಬೈಯ್ದುಕೊಂಡಿದ್ದಾರೆ.

Anushka

ಪೋಟೋದಲ್ಲಿ ಜೊತೆಗೆ ಪತಿ ವಿರಾಟ್ ಕೊಹ್ಲಿ ಕೂಡ ಇದ್ದು,ಆಕೆಯ ಕಾಲುಗಳನ್ನು ಹಿಡಿದುಕೊಂಡು ಬ್ಯಾಲೆನ್ಸ್ ಮಾಡಲು ಸಹಾಯ ಮಾಡ್ತಿರೋದನ್ನು ಕಂಡು ಆಕೆಗಂತೂ ಬುದ್ದಿ ಇಲ್ಲ. ಈತನಾದ್ರೂ ಹೇಳಬಾರದೇ ಅಂತೆಲ್ಲ ಕೆಲವರು ಕಮೆಂಟ್ ಮಾಡ್ತಿದ್ದಾರೆ.

Virat Anushka 8

ಆದರೇ ಎಲ್ಲರ ಕಮೆಂಟ್ ಹಾಗೂ ಆತಂಕಕ್ಕೆ ಸರಿಯಾದ ಉತ್ತರವನ್ನು ನಟಿ ಹಾಗೂ ಕೊಹ್ಲಿ ಪತ್ನಿ ಅನುಷ್ಕಾ ನೀಡಿದ್ದು, ತಾನು ಬಹುಕಾಲದಿಂದ ಯೋಗಾಭ್ಯಾಸದಲ್ಲಿ ತೊಡಗಿದ್ದೇನೆ. ಆದರೇ ಗರ್ಭಿಣಿಯಾದ ಮೇಲೆ ಇದನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ನನಗೆ ಬೇಸರವಾಗಿತ್ತು. ಆದರೇ ಒಂದಷ್ಟು ಮುಂಜಾಗ್ರತಾ ಕ್ರಮಗಳ ಬಳಿಕ ಗರ್ಭಿಣಿಯಾದ ಕೆಲವು ತಿಂಗಳುಗಳ ಬಳಿಕ ಯೋಗ ಮಾಡಬಹುದೆಂದು ವೈದ್ಯರು ಅನುಮತಿ ನೀಡಿದ್ದಾರೆ.

Anushka And Virat 1

ವೈದ್ಯರ ಅನುಮತಿ ಹಾಗೂ ನನ್ನ ಯೋಗ ಟೀಚರ್ ಈಫಾಶ್ರಾಪ್ ಸಮ್ಮುಖದಲ್ಲಿ ಈ ಯೋಗ ಭಂಗಿ ಟ್ರೈ ಮಾಡ್ತಿರೋದಾಗಿ ಹೇಳಿರೋ ಅನುಷ್ಕಾ ಅದಕ್ಕಾಗಿ ಗೋಡೆ ಹಾಗೂ ಪತಿಯನ್ನು ಸಪೋರ್ಟಿವ್ ಆಗಿ ಬಳಸಿಕೊಂಡಿದ್ದೇನೆ ಎಂದಿದ್ದಾರೆ.

Virat Anushka

ಆದರೇ ಅನುಷ್ಕಾ ಈ ಸಾಹಸ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು ಮಗುವಿನ ತಾಯಿಯಾಗೋ ಹೊತ್ತಲ್ಲಿ ಇದೆಂಥ ಹುಚ್ಚಾಟ. ಇವೆಲ್ಲ ಬೇಕಿತ್ತಾ. ಡೆಲಿವರಿಯಾಗೋ ತನಕ ಇಂಥ ಸಾಹಸವೆಲ್ಲ ಬಿಟ್ಟು ಹೆಂಡ್ತಿನಾ ಹುಸಾರಾಗಿ ನೋಡ್ಕೋಳಪ್ಪ ವಿರಾಟ್ ಅಂತ ಜನ ಕಮೆಂಟ್ ಮಾಡ್ತಿದ್ದಾರೆ.

Virat Anushka 2

ಆದರೆ ಆರಂಭದಿಂದಲೂ ಪ್ರಗೆನ್ಸಿ ಕಾಯಿಲೆ ಅಲ್ಲ ಅಂತ ಸಾಬೀತು ಮಾಡುವಂತೆ ಕೆಲಸ,ಟ್ರಾವೆಲ್ ಎಲ್ಲ ಮಾಡ್ತಿದ್ದ ಅನುಷ್ಕಾ ಈಗ ಯೋಗ ಕೂಡಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

RELATED ARTICLES

Most Popular