ಬಿಟ್ರನ್ ರಾಣಿಯನ್ನು ಮೀರಿಸಿದ ಕನ್ನಡತಿ….! ಇನ್ಪೋಸಿಸ್ ಉತ್ತರಾಧಿಕಾರಿ ಬಳಿ ಇದೆ 4,200 ಕೋಟಿ ಆಸ್ತಿ…!!

ಬ್ರಿಟನ್ : ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆ ಅನ್ನೋ ಖ್ಯಾತಿ ಬ್ರಿಟನ್ ಮಹಾರಾಣಿ ಕ್ವೀನ್ ಎಲಿಜಿಬೆತ್ ರಿಗಿದೆ. ಆದರೆ ಈ ಪ್ರಭಾವವನ್ನು ಮೀರಿಸುವ ಶ್ರೀಮಂತೆ ಕನ್ನಡತಿ ಅನ್ನೋದು ಈಗ ಕನ್ನಡಿಗರ ಹೆಮ್ಮೆ.

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಆಸ್ತಿ ಬ್ರಿಟನ್ ಮಹಾರಾಣಿ ಆಸ್ತಿಗಿಂತಲೂ ಅಧಿಕ ಅನ್ನೋ ಸಂಗತಿ ಈಗ ಬಯಲಾಗಿದ್ದು,ಮಹಾರಾಣಿಗಿಂತ ಹೆಚ್ಚಿನ ಆಸ್ತಿ ಹೊಂದಿದ ಹೆಮ್ಮೆಗೆ ಕನ್ನಡತಿ ಅಕ್ಷತಾಮೂರ್ತಿ ಭಾಜನರಾಗಿದ್ದಾರೆ.

ಸಧ್ಯ ಇಂಗ್ಲೆಂಡ್ ನ ಹಣಕಾಸು ಸಚಿವರಾಗಿರುವ ಪತಿ ರಿಶಿ ಸುನಾಕ್ ಜೊತೆ ಲಂಡನ್ ನಲ್ಲಿ ನೆಲೆಸಿರುವ ಅಕ್ಷತಾ, ಇನ್ಪೋಸಿಸ್ ನಲ್ಲಿ ಶೇಕಡಾ 0.91ರಷ್ಟು ಶೇರು ಹೊಂದಿದ್ದಾರೆ. ಇದರ ಮೌಲ್ಯ 450 ಮಿಲಿಯನ್ ಯುರೋ ಅಂದ್ರೇ ಭಾರತದ ಲೆಕ್ಕಾಚಾರದಲ್ಲಿ ಸುಮಾರು 4,200 ಕೋಟಿ ರೂಪಾಯಿ.

ಆದರೆ ತಲೆತಲಾಂತರದಿಂದ ರಾಜಮನೆತನದಲ್ಲೇ ಹುಟ್ಟಿ ಬೆಳೆದ ಬ್ರಿಟನ್ ರಾಣಿಯ ಆದಾಯ 350 ಮಿಲಿಯನ್ ಅಂದ್ರೇ ಭಾರತದ ಪ್ರಕಾರ 3,444 ಕೋಟಿ ರೂಪಾಯಿ ಎನ್ನಲಾಗಿದೆ.

ಈ ಆಸ್ತಿ ಹೊರತುಪಡಿಸಿ ಅಕ್ಷತಾ ಮೂರ್ತಿ ಬ್ರಿಟನ್ ನಲ್ಲಿ ವೆಂಚರ್ ಕ್ಯಾಪಿಟಲ್ ಎಂಬ ಸಣ್ಣ ಕಂಪನಿ ಕೂಡ ಹೊಂದಿದ್ದಾರಂತೆ. ಭಾರತದಲ್ಲಿ ಇನ್ಪೋಸಿಸ್ ನಾರಾಯಣಮೂರ್ತಿ ಗಳ ಆಸ್ತಿ ಒಟ್ಟು ಮೌಲ್ಯ16 ಸಾವಿರ ಕೋಟಿ ರೂಪಾಯಿ. ಈ ಪೈಕಿ ಪುತ್ರಿ ಅಕ್ಷತಾ 4,200 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.

ಆದರೇ ಬ್ರಿಟನ್ ರಾಣಿಗಿಂತ ಹೆಚ್ಚು ಶ್ರೀಮಂತೆ ಕನ್ನಡತಿ ಎಂದು ನಾವು ಹೆಮ್ಮೆ ಪಡುವ ಹೊತ್ತಿನಲ್ಲೇ ಅಕ್ಷತಾ ಅವರ ಈ ಅಪಾರ ಪ್ರಮಾಣದ ಆಸ್ತಿ ಪತಿಗೆ ಮುಳುವಾಗಿದ್ದು, ಅಕ್ಷತಾ ಮೂರ್ತಿ ಪತಿ ರಿಶಿ ಸುನಾಕ್ ಚುನಾವಣೆ ವೇಳೆ ಪತ್ನಿಯ ಆಸ್ತಿ ಘೋಷಣೆ ಮಾಡದೇ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಸಂಕಷ್ಟಕ್ಕಿಡಾಗಿದ್ದಾರೆ.

ರಿಶಿ ಸುನಾಕ್ ಕೂಡ ಹಲವು ವರ್ಷದಿಂದ ಲಂಡನ್ ನಲ್ಲೇ ವಾಸವಾಗಿದ್ದು ಅವರ ತಂದೆ ಲಂಡನ್ ನಲ್ಲಿ ಫಾರ್ಮಸ್ಯೂಟಿಕಲ್ ಸಂಸ್ಥೆ ಹೊಂದಿದ್ದಾರೆ. 10 ವರ್ಷಗಳ ಹಿಂದೆ ಅಕ್ಷತಾಮೂರ್ತಿ ಹಾಗೂ ರಿಶಿ ಅವರ ವಿವಾಹ ನಡೆದಿದ್ದು 2018 ರಿಂದ ರಿಶಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ.

Comments are closed.