ಸೋಮವಾರ, ಏಪ್ರಿಲ್ 28, 2025
HomeCinemaAppu Cup Season-2 : ಅಪ್ಪು ಕಪ್ ಸೀಸನ್-2 ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಲೀಗ್ : ಲೋಗೋ...

Appu Cup Season-2 : ಅಪ್ಪು ಕಪ್ ಸೀಸನ್-2 ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಲೀಗ್ : ಲೋಗೋ ಅನಾವರಣಗೊಳಿಸಿದ ಪ್ರಕಾಶ್ ಪಡುಕೋಣೆ

- Advertisement -

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ (Appu Cup Season-2) ಆಯೋಜಿಸಲಾಗಿರುವ ಅಪ್ಪು ಕಪ್ ಸೀಸನ್-2 ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್ ಹಮ್ಮಿಕೊಳ್ಳಲಾಗಿದೆ. ಇದೀಗ ಅದರ ಲೋಗೋ ಬಿಡುಗಡೆ ಸಮಾರಂಭವನ್ನು ಇಂದು ಬೆಂಗಳೂರಿನಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಲ್ಲಿ ನೆರವೇರಿದೆ. ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಲೋಗೋ ಅನಾವರಣ ಮಾಡಿ ಆಟಗಾರರಿಗೆ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ರಾಜೇಶ್ ರೆಡ್ಡಿ, ವಾಣಿಜ್ಯಚಲನಚಿತ್ರ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್, ಹಿರಿಯ ಸಿನಿಮಾ ಪತ್ರಕರ್ತರಾದ ಸದಾಶಿವ ಶೆಣೈ ಉಪಸ್ಥಿತರಿದ್ದರು.

ಬಳಿಕ ಪ್ರಕಾಶ್ ಪಡುಕೋಣೆ, ಪುನೀತ್ ರಾಜ್ ಕುಮಾರ್ ಅವರು ನನಗೆ ಪರ್ಸನಲ್ ಆಗಿ ಗೊತ್ತಿದ್ದರು. ತುಂಬಾ ಫ್ರೆಂಡ್ಲಿಯಾಗಿದ್ದವರು. ಐದಾರು ವರ್ಷದ ಹಿಂದೆ ನಾವೊಂದು ಇವೆಂಟ್ ಮಾಡಿದ್ದೇವು. ಒಂದೇ ಒಂದು ಫೋನ್ ಕಾಲ್‌ಗೆ ಬಂದು ನಮ್ಮ ಜೊತೆ ಎಕ್ಸಿಬ್ಯೂಷನ್ ಮ್ಯಾಚ್ ಆಡಿದ್ದರು. ಸ್ಯಾಂಡಲ್ ವುಡ್ ಇಂಡಸ್ಟ್ರೀಯಲ್ಲಿ ತುಂಬಾ ಜನ ಬ್ಯಾಡ್ಮಿಂಟನ್ ಆಡುತ್ತಾರೆ ಅನ್ನೋದನ್ನು ಕೇಳಿ ಖುಷಿ ಆಯ್ತು. ಅಪ್ಪು ಕಪ್ ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಹೀಗೆ ಮುಂದುವರೆಯಲಿ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Radhika Kumarswamy : ಅಂತರಾಷ್ಟ್ರೀಯ ಯೋಗ ದಿನ : ಯೋಗ ಭಂಗಿಯಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ

ಇದನ್ನೂ ಓದಿ : TV actor Prajwal : ಬಾರ್‌ನಲ್ಲಿ ಕಿರಿಕ್‌ : ಅಮೃತವರ್ಷಿಣಿ ಧಾರಾವಾಹಿ ನಟನ ವಿರುದ್ದ ಎಫ್‌ಐಆರ್‌ ದಾಖಲು

ಕನ್ನಡ ಕಲಾವಿದರು, ತಂತ್ರಜ್ಞನರು ಹಾಗೂ ಮಾಧ್ಯಮದವರು ಆಡಲಿರುವ ಈ ಪಂದ್ಯಾವಳಿ ಆಗಸ್ಟ್ ತಿಂಗಳಾಂತ್ಯಕ್ಕೆ ಶುರುವಾಗಲಿದೆ. ಕಳೆದ ಬಾರಿ ಒಟ್ಟು ಎಂಟು ತಂಡಗಳು ಭಾಗಿಯಾಗಿದ್ದವು. ದಿಗಂತ್, ಸೃಜನ್ ಲೋಕೇಶ್, ವಸಿಷ್ಠ ಸಿಂಹ, ಪ್ರಿಯಾಂಕಾ ಉಪೇಂದ್ರ, ರಾಗಿಣಿ, ಕವಿತಾ ಲಂಕೇಶ್, ಶ್ವೇತಾ ಶ್ರೀವಾಸ್ತವ್, ಮಾಸ್ಟರ್ ಆನಂದ್ ತಂಡದ ಪೈಕಿ ಸೃಜನ್ ಲೋಕೇಶ್ ನೇತೃತ್ವದ ರಾಜ್ ಕುಮಾರ್‌ ಕಿಂಗ್ಸ್ ಕಳೆದ ಬಾರಿ ಗೆಲುವು ಸಾಧಿಸಿತ್ತು. ಈ ಬಾರಿ ಮತ್ತಷ್ಟು ತಾರೆಯರು ಅಪ್ಪು ಕಪ್ ಸೀಸನ್-2 ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಲೀಗ್ ಮೆರಗು ಹೆಚ್ಚಿಸಲಿದ್ದಾರೆ.

Appu Cup Season-2 Sandalwood Badminton League : Logo unveiled by Prakash Padukone

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular