PM Kisan 14th Installment : ರೈತ ಭಾಂದವರಿಗೆ ಗುಡ್‌ ನ್ಯೂಸ್‌ : ಪಿಎಂ ಕಿಸಾನ್‌ 14 ನೇ ಕಂತು ಯಾವಾಗ ಬಿಡುಗಡೆ

ನವದೆಹಲಿ : ದೇಶದಾದ್ಯಂತ ಲಕ್ಷಾಂತರ ರೈತರು (PM Kisan 14th Installment) ಪಿಎಂ ಕಿಸಾನ್‌ ಯೋಜನೆಯ 14 ನೇ ಕಂತಿಗಾಗಿ ಕಳೆದ ತಿಂಗಳಿಂದ ಕಾಯುತ್ತಿದ್ದಾರೆ. ಇದೀಗ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತಿಗೆ ಸಂಬಂಧಿಸಿದಂತೆ ಹೊಸ ಸುದ್ದಿಗಳು ಹೊರಬರುತ್ತಿವೆ. ಇದೀಗ 14ನೇ ಕಂತಿನ ದಿನಾಂಕಕ್ಕೆ ಸಂಬಂಧಿಸಿದಂತೆ ಹೊಸ ಅಪ್‌ಡೇಟ್‌ ಬಂದಿದೆ. ಅದರಂತೆ ಜೂನ್‌ 23ರಂದು ಕಿಸಾನ್‌ ಯೋಜನೆಯ 14ನೇ ಕಂತಿನ ಹಣ ರೈತರ ಖಾತೆಗೆ ಬರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಪಿಎಂ ಕಿಸಾನ್ ಯೋಜನೆಯ 14 ನೇ ಕಂತು ಬಿಡುಗಡೆ ದಿನಾಂಕ :
ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿಗೆ ಸಂಬಂಧಿಸಿದಂತೆ ಈಗ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಇದರಲ್ಲಿ ಈ ತಿಂಗಳು 14ನೇ ಕಂತು ಬರಬಹುದು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಕೆಲವು ವರದಿಗಳ ಪ್ರಕಾರ, 14 ನೇ ಕಂತು ಶುಕ್ರವಾರ, ಜೂನ್ 23, 2023 ರಂದು ರೈತರ ಖಾತೆಗಳಿಗೆ ಬರಬಹುದು. ಆದರೆ, ಈ ಬಗ್ಗೆ ಸರಕಾರದಿಂದ ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ ಈ ತಿಂಗಳು 14ನೇ ಕಂತು ಬರುವ ನಿರೀಕ್ಷೆ ಇದೆ. ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ ಲಾಭ ಪಡೆಯಲು ನೀವು ಸಹ ಬಡ ರೈತರಾಗಿದ್ದರೆ ಮತ್ತು ಇದರ ಲಾಭವನ್ನು ಪಡೆಯಲು ಬಯಸಿದರೆ, PM ಕಿಸಾನ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ : PM Kisan Scheme : ಪಿಎಂ ಕಿಸಾನ್ ಯೋಜನೆ, ರೈತರ ಖಾತೆಗಳಿಗೆ ಈ ವಾರವೇ ಜಮೆಯಾಗಲಿದೆ 14ನೇ ಕಂತು

  • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಲಾಗಿನ್‌ ಆಗಬೇಕು.
  • ನಂತರ New Farmer Registration ಮೇಲೆ ಕ್ಲಿಕ್ ಮಾಡಬೇಕು.
  • ನಿಮ್ಮಗೆ ಅಗತ್ಯವಿರುವ ಭಾಷೆಯನ್ನು ಆಯ್ಕೆಮಾಡಬೇಕು.
  • ನೀವು ನಗರ ಪ್ರದೇಶದ ರೈತರಾಗಿದ್ದರೆ ನಗರ ರೈತ ನೋಂದಣಿ ಆಯ್ಕೆ ಮಾಡಬೇಕು.
  • ನೀವು ಗ್ರಾಮೀಣರಾಗಿದ್ದರೆ ಗ್ರಾಮೀಣ ರೈತ ನೋಂದಣಿಯನ್ನು ಆಯ್ಕೆ ಮಾಡಬೇಕು.
  • ಇದರ ನಂತರ, ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ರಾಜ್ಯವನ್ನು ಆಯ್ಕೆ ಮಾಡಿ. ನಿಮ್ಮ ಜಮೀನಿನ ವಿವರಗಳನ್ನು ಇಲ್ಲಿ ಭರ್ತಿ ಮಾಡಬೇಕು.
  • ನಿಮ್ಮ ಪೋಷಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಮೇಲಿನ ಉಳಿಸು ಕ್ಲಿಕ್ ಮಾಡಬೇಕು.
  • ಕ್ಯಾಪ್ಚಾ ಕೋಡ್ ನಿಮ್ಮ ಮುಂದೆ ಕಾಣಿಸುತ್ತದೆ. ಯಾವುದನ್ನು ತುಂಬಬೇಕು. ನಂತರ ಒಟಿಪಿ ಪಡೆಯಿರಿ ಮತ್ತು ಸಲ್ಲಿಸಲು ಬಟನ್‌ ಒತ್ತಬೇಕು.

PM Kisan 14th Installment : Good News for Farmers Bhandar : When PM Kisan 14th Installment Released

Comments are closed.