ಸ್ಯಾಂಡಲ್‌ವುಡ್‌ನಲ್ಲಿ ಅರ್ಜುನ್ ಜನ್ಯ (Arjun Janya) ದಿ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇದೀಗ ಅರ್ಜುನ್ ಜನ್ಯ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಮಧ್ಯೆ ನಟ ಸುದೀಪ್ ಅವರನ್ನು ಭೇಟಿ ಮಾಡಿ ಅರ್ಜುನ್ ಜನ್ಯ (Arjun Janya -Kichcha Sudeep) ಸಂಕ್ರಾಂತಿ ಹಬ್ಬಕ್ಕೆ ವಿಶೇಪ ಉಡುಗೊರೆಯನ್ನು ನೀಡಿದ್ದಾರೆ.
ನಟ ಸುದೀಪ್ ಅಭಿನಯದ “ಕೆಂಪೇಗೌಡ” ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ ಮೇಲೆ ಅರ್ಜುನ್ ಜನ್ಯ ಅದೃಷ್ಟ ಖುಲಾಯಿಸಿತು ಅಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೇ ಈ ಸಿನಿಮಾಕ್ಕೆ ಮ್ಯೂಸಿಕ್ ಕಂಪೋಸ್ ಮಾಡಲು ಅವಕಾಶ ಕೊಟ್ಟಿದ್ದು ಬೇರೆ ಯಾರು ಅಲ್ಲ ಕಿಚ್ಚ ಸುದೀಪ್. ಈ ಕುರಿತಂತೆ ಅರ್ಜುನ್ ಜನ್ಯ ಸುದೀಪ್ ಅವರು ನನ್ನ ಪಾಲಿನ ಗಾಡ್ ಫಾದರ್ ಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಈ ಸಲದ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಟ ಸುದೀಪ್ ಅವರಿಗೆ ವಿಶೇಷವಾಗಿ ಕಿಚ್ಚನ ಹೆಸರಿನ ಜರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
Love you Godfather @KicchaSudeep sir
— Arjun Janya (@ArjunJanyaMusic) January 14, 2023
❤️
Thank you for the Love and Blessings you shower always 🙏
#bleedforkichha #KichhaSudeep #abhinayachakravarthy pic.twitter.com/0SrVoL0Vmb
ಇದನ್ನೂ ಓದಿ : ವಿರಾಟ್ ಕೊಹ್ಲಿ ಸಂಚುರಿ ದಾಖಲೆ : ಸಂತಸ ವ್ಯಕ್ತಪಡಿಸಿದ ಪತ್ನಿ ಅನುಷ್ಕಾ ಶರ್ಮಾ
ಇದನ್ನೂ ಓದಿ : “ಗೋಲ್ಡನ್ ಗ್ಲೋಬ್” ಬಳಿಕ ‘ಅತ್ಯುತ್ತಮ ವಿದೇಶಿ ಚಿತ್ರ’ ಪ್ರಶಸ್ತಿ ಬಾಚಿಕೊಂಡ ಆರ್‌ಆರ್‌ಆರ್
ಇದನ್ನೂ ಓದಿ : ಮಂಗಳೂರು ಕಡಲ ಕಿನಾರೆಯಲ್ಲಿ ಅರಳಿದ ಕಾಂತಾರ ಮರಳು ಶಿಲ್ಪ
ಇತ್ತೀಚಿಗಷ್ಟೇ ತೆರೆಕಂಡ ಸೆಂಚುರಿ ಸ್ಟಾರ್ “ವೇದ ಸಿನಿಮಾಕ್ಕೂ ಉತ್ತಮ ಸಂಗೀತ ನಿರ್ದೇಶನವನ್ನು ನೀಡಿದ್ದಾರೆ. ಆ ಸಿನಿಮಾದ ಹಾಡುಗಳು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಸರಿಗಮಪ ಲಿಟಲ್ ಚಾಂಪ್ಸ್ 19” ರಿಯಾಲಿಟಿ ಶೋನ ಜಡ್ಜ್ ಆಗಿದ್ದು, ಅದರ ಜೊತೆಯಲ್ಲಿ ಸಾಕಷ್ಟು ಸಿನಿಮಾಗಳ ಸಂಗೀತ ನಿರ್ದೇಶನದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
ಇದನ್ನೂ ಓದಿ : ಪ್ರೀತಿಸಿದ ಹುಡುಗನ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ ರಜನಿ
ಇದನ್ನೂ ಓದಿ : ಕ್ರಾಂತಿ ಸಿನಿಮಾದ ನಾಲ್ಕನೇ ಹಾಡು ರಿಲೀಸ್ : ವೈರಲ್ ಆಯ್ತು ಮಾಸ್ ಸಾಂಗ್
Arjun Janya -Kichcha Sudeep : Arjun Janya gave a special gift to Kichcha Sudeep on Sankranti.