Gurugram road accident: ರಾಂಗ್‌ ಸೈಡಿನಲ್ಲಿ ಬಂದ ಪೊಲೀಸ್‌ ವಾಹನ ಕಾರಿಗೆ ಢಿಕ್ಕಿ: 6ತಿಂಗಳ ಮಗು ಸಾವು, 4 ಮಂದಿಗೆ ಗಾಯ

ಗುರುಗ್ರಾಮ್:‌ (Gurugram road accident) ಗುರ್ಗಾಂವ್‌ – ಫರೀದಾಬಾದ್‌ ರಸ್ತೆಯಲ್ಲಿ ರಾಂಗ್‌ ಸೈಡ್‌ ನಲ್ಲಿ ಚಲಿಸುತ್ತಿದ್ದ ಪೊಲೀಸ್‌ ವಾಹನ ಮಾರುತಿ ಸ್ವಿಫ್ಟ್‌ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಆರು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಘಾಟಾ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಸಾವನ್ನಪ್ಪಿದ್ದ ಆರು ತಿಂಗಳ ಮಗುವನ್ನು ಸಾವಿ ಎಂದು ಗುರುತಿಸಲಾಗಿದೆ. ರಿಂಕು (23 ವರ್ಷ), ಅವರ ಮಗ ಪ್ರಿಯಾಂಕ, ಸಹೋದರಿ ಕಾಜಲ್‌ ಮತ್ತು ತಾಯಿ ಬಬಿತಾ ಎನ್ನುವವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಾಟಾ ಗ್ರಾಮದ ಬಳಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಪೊಲೀಸ್‌ ತಂಡವು ತುರ್ತು ಕರೆ ಸ್ವೀಕರಿಸಿದ್ದು, ನಂತರ ಟ್ರಾಫಿಕ್‌ ಜಾಮ್‌ ಆಗಿರುವ ಸ್ಥಳಕ್ಕೆ ಪೊಲೀಸ್‌ ವಾಹನ ತೆರಳುತ್ತಿತ್ತು. ಈ ಸಮಯದಲ್ಲಿ ಅಪಘಾತ ಸಂಭವಿಸಿದೆ. ಪೊಲೀಸ್‌ ವಾಹನ ಸ್ಥಳಕ್ಕೆ ತೆರಳುತ್ತಿದ್ದಾಗ ರಾಂಗ್‌ ಸೈಡಿನಲ್ಲಿ ಹೋಗುತ್ತಿದ್ದರು. ಎದುರಿಗೆ ಬರುತ್ತಿದ್ದ ಕಾರಿಗೆ ರಾಂಗ್‌ ಸೈಡಿನಲ್ಲಿ ಹೋಗುತ್ತಿದ್ದ ಪೊಲೀಸ್‌ ವಾಹನ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪಘಾತ ಸಂಭವಿಸುತ್ತಿದ್ದಂತೆ ತಪ್ಪಿತಸ್ಥರಾದ ಇಆರ್ ವಿ ಪೊಲೀಸ್‌ ವಾಹನದ ಚಾಲಕ, ಪೊಲೀಸ್ ಕಾನ್ಸ್ಟೇಬಲ್ ಹಾಗೂ ಪೊಲೀಸ್‌ ಅಧಿಕಾರಿಗಳು ಅಪಘಾತದ ಸ್ಥಳದಿಂದ ಪರಾರಿಯಾಗಿದ್ದಾರೆ.‌ ಇನ್ನೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯರು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : 9 year girl raped: 9 ವರ್ಷದ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತರಿಂದ ಅತ್ಯಾಚಾರ: ದೂರು ದಾಖಲು

ಇದನ್ನೂ ಓದಿ : Father get suicide: ಕುಂದಾಪುರ : ಮಗು ಅನಾರೋಗ್ಯದಿಂದ ಸಾವು, ತಂದೆ ಆತ್ಮಹತ್ಯೆ

ತಪ್ಪನ್ನು ತಿದ್ದಿ ಸರಿಪಡಿಸಬೇಕಾದ ಪೊಲೀಸ್‌ ಅಧಿಕಾರಿಗಳೇ ತಪ್ಪನ್ನು ಮಾಡಿದರೆ ಅವರಿಂದ ರಕ್ಷೆ ಪಡೆದುಕೊಳ್ಳಬೇಕಾದ ನಮ್ಮಂತ ಸಾಮಾನ್ಯರು ಮಾಡುವುದಾದರು ಏನು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Inhuman behavior of husband: ಗರ್ಭಿಣಿ ಪತ್ನಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದ ಪತಿ : ಅಮಾನವೀಯ ವರ್ತನೆಗೆ ಬಾರೀ ಆಕ್ರೋಶ

Gurugram road accident: Police vehicle coming on wrong side collides with car: 6-month-old baby dies, 4 injured

Comments are closed.