ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ (Aryan Khan) ಡ್ರಗ್ ಪ್ರಕರಣದ ನಂತರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ತಂದೆ ಗಳಿಸಿದ ಹೆಸರಿಗೆ ಮಸಿ ಬಳಿಯುವಂಥ ಕೆಲಸ ಮಾಡಿದ್ದಾನೆ ಎನ್ನುವ ಆರೋಪ ಕೇಳಿದ ಬಂದ ನಂತರ ಆರ್ಯನ್ ಖಾನ್ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಅನ್ನೋದರ ಸುಳಿವು ಇರಲೇಇಲ್ಲ. ಕೆಲ ತಿಂಗಳ ಹಿಂದೆ ಆರ್ಯನ್ ಕೂಡ ನಿರ್ದೇಶನಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಓಡಾಡಿತು. ಇತ್ತ ಶಾರುಖ್ ಖಾನ್ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಪಠಾಣ್ ಸಿನಿಮಾದಲ್ಲಿ ಮಗ್ನರಾಗಿದ್ದರು.
ಆದರೆ, ಈಗ ಆರ್ಯನ್ ಖಾನ್ ನಿರ್ದೇಶನದ ಹಾದಿ ತುಳಿದಿದ್ದಾರೆ ಅನ್ನೋ ಗಾಳಿ ಸುದ್ದಿ ನಿಜವಾಗಿದೆ. ಸಿನಿಮಾ ನಿರ್ದೇಶನ ಮಾಡುತ್ತಿಲ್ಲ, ಬದಲಿಗೆ ವೆಬ್ ಸೀರೀಸ್ ಒಂದನ್ನು ಆರ್ಯನ್ ನಿರ್ದೇಶನ ಮಾಡುತ್ತಿದ್ದಾರೆ. ರೆಡ್ ಚಿಲ್ಲಿ ಎಂಟರ್ ಟೈನ್ ಮೆಂಟ್ ಕಂಪೆನಿಗೆ ಈ ಸಿರೀಸ್ ನಿರ್ದೇಶನ ಮಾಡಲಿದ್ದಾರೆ. ಒಂದು ಮೂಲದ ಪ್ರಕಾರ, ಆರ್ಯನ್ ಪರೀಕ್ಷಾರ್ತವಾಗಿ ಮುಂಬಯಿನ ಸ್ಟುಡಿಯೋ ಒಂದರಲ್ಲಿ ಶುಕ್ರವಾರ ಮತ್ತು ಶನಿವಾರದಂದು ಚಿತ್ರೀಕರಣ ನಡೆಸಲಿದ್ದಾರಂತೆ.
ವೆಬ್ ಸಿರೀಸ್ ನ ಅಂತಿಮ ಶೂಟಿಂಗ್ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈ ವೆಬ್ ಸಿರೀಸ್ ಸ್ಕ್ರಿಪ್ಟ್ ಜೊತೆಗೆ ನಿರ್ದೇಶನ ಜವಾಬ್ದಾರಿಯನ್ನು ಆರ್ಯನ್ ಹೊತ್ತಿದ್ದಾರೆ. ವೆಬ್ ಸೀರಿಸ್ ಚಿತ್ರೀಕರಣ ಆರಂಭಿಸುವ ಮೊದಲು, ಅದರ ಬಗ್ಗೆ ಎಲ್ಲರೂ ತಿಳಿದು ಕೊಳ್ಳಬೇಕು. ನಿರ್ದೇಶಕರ ಯೋಚನೆಯನ್ನು ಅರಿಯಬೇಕು. ಇದಕ್ಕಾಗಿ ಎಲ್ಲ ಕಲಾವಿದರು ಒಗ್ಗೂಡಬೇಕು ಎಂದು ಬಲವಾಗಿ ನಂಬಿರುವ ಆರ್ಯನ್ ಶುಕ್ರವಾರ, ಶನಿವಾರ ಟೆಸ್ಟಿಂಗ್ ಶೂಟ್ ಅನ್ನು ಏರ್ಪಡಿಸಿದ್ದಾರೆ ಎನ್ನುತ್ತದೆ ನಂಬಲರ್ಹ ಮೂಲಗಳು.
ಆದರೆ, ವೆಬ್ ಸಿರೀಸ್ ನ ನಿಜವಾದ ಚಿತ್ರೀಕರಣ ಎಂದಿನಿಂದ ಶುರುವಾಗುತ್ತದೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸಬೇಕಿದೆ. ಜರ್ಸಿ ಸಿನಿಮಾದ ಪ್ರೀತ್ ಕಮಾನಿ ಅವರು ಸೆಟ್ ನಲ್ಲಿ ಕಾಣಿಸಿಕೊಳ್ಳುವ ಸುದ್ದಿಯೂ ಇದೆ. ಈ ಬಗ್ಗೆ ಚಿತ್ರ ತಂಡವೇನು ಖಚಿತಪಡಿಸಿಲ್ಲ.
ಆರ್ಯನ್ ಖಾನ್ ಅಪ್ಪನ ಸಿನಿಮಾ ಹಾದಿಯನ್ನು ಹಿಡಿದಿರುವುದು ಶಾರುಖ್ ಖಾನ್ ಅವರಿಗೆ ನಿರಾಳತೆ ತಂದಿದೆಯಂತೆ. ಮುಂದೊಂದು ದಿನ ಅಪ್ಪನ ಸಿನಿಮಾವನ್ನು ಮಗ ನಿರ್ದೇಶಿಸುವ ಸಂದರ್ಭ ಕೂಡ ಬರಬಹುದು ಎನ್ನುವ ಮಾತು ಕೇಳಿಬರುತ್ತಿದೆ.
ಇದನ್ನೂ ಓದಿ : Shahrukh Khan : ತಮಿಳು ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಸುಳಿವು ಕೊಟ್ಟ ಶಾರುಖ್ ಖಾನ್
(Aryan Khan Bollywood Actor Shah Rukh Khan s son Aryan Khan will Direct web series)