ಭಾನುವಾರ, ಏಪ್ರಿಲ್ 27, 2025
HomeCinemaನಟಿ ಆಶಿಕಾ ರಂಗನಾಥ್‌ ಇನ್‌ಸ್ಟಾಗ್ರಾಮ್‌ ರೀಲ್‌ ಆಯ್ತು ವೈರಲ್‌ : ವಿಡಿಯೋದಲ್ಲಿ ಅಂತಹದೇನಿದೆ ?

ನಟಿ ಆಶಿಕಾ ರಂಗನಾಥ್‌ ಇನ್‌ಸ್ಟಾಗ್ರಾಮ್‌ ರೀಲ್‌ ಆಯ್ತು ವೈರಲ್‌ : ವಿಡಿಯೋದಲ್ಲಿ ಅಂತಹದೇನಿದೆ ?

- Advertisement -

ಸ್ಯಾಂಡಲ್‌ವುಡ್‌ನ ಬಹು ಬೇಡಿಕೆ ನಟಿಯರಲ್ಲಿ ಆಶಿಕಾ ರಂಗನಾಥ್‌ (Ashika Ranganath Reels) ಕೂಡ ಒಬ್ಬರು. ಕನ್ನಡ ಸಿನಿರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸಿನಿಪ್ರೇಕ್ಷಕರ ಮನ ಗೆದ್ದಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಆಶಿಕಾ ಆಗ್ಗಾಗ ಪೋಟೋ, ರೀಲ್ಸ್‌ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ. ಹೆಚ್ಚಿನ ಸ್ಟಾರ್‌ ಸೆಲೆಬ್ರಿಟಿಗಳು ತಮ್ಮ ಬಿಡುವಿನ ವೇಳೆಯಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ. ಅದರಲ್ಲೂ ಇತ್ತೀಚೆಗೆ ಮಾಲ್ಡೀವ್ಸ್‌ಗೆ ಹೆಚ್ಚಾಗಿ ಹೋಗುತ್ತಾರೆ. ಹಾಗೆಯೇ ನಟಿ ಆಶಿಕಾ ರಂಗನಾಥ್‌ ಕೂಡ ತಮ್ಮ ಸ್ನೇಹಿತರೊಂದಿಗೆ ಮಾಲ್ಡೀವ್ಸ್‌ಗೆ ಪಯಣ ಬೆಳೆಸಿದ್ದಾರೆ. ತಮ್ಮ ವಿದೇಶಿ ಪ್ರವಾಸದ ವೇಳೆಯಲ್ಲಿ ತಮಿಳು ಹಾಡಿಗೆ ರೀಲ್ಸ್‌ ಮಾಡಿ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು, ಕೆಲವರು ತಮ್ಮಗೆ ಮನ ಬಂದಂತೆ ಕಾಮೆಂಟ್‌ ಮಾಡಿದ್ದಾರೆ.

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ನಟಿ ಆಶಿಕಾ ರಂಗನಾಥ್‌ ಅಭಿನಯದ ಯಾವುದೇ ಸಿನಿಮಾ ಕೂಡ ಹಿಟ್‌ ಆಗಿರುವುದಿಲ್ಲ. ಅಷ್ಟೇ ಅಲ್ಲದೇ ಕಾಲಿವುಡ್‌ ಹಾಗೂ ಟಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದು, ಅಲ್ಲಿ ಕೂಡ ಸದ್ದು ಮಾಡದೇ ಸೈಲೆಂಟ್‌ ಆಗಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆಶಿಕಾ ತಮ್ಮ ವಿಭಿನ್ನ ರೀತಿಯ ಉಡುಗೆಯಲ್ಲಿ ಹಾಟ್‌ ಆಗಿ ಕಾಣುವ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ. ಮಾಲ್ಡೀವ್ಸ್‌ನಲ್ಲಿ “ಜಿಮಿಕಿ ಪೊನ್ನು” ಹಾಡಿಗೆ ಫಿಂಕ್ ಕಲರ್‌ ಶಾರ್ಟ್‌ ಫ್ರಾಂಕ್‌ನಲ್ಲಿ ಸೊಂಟ ಬಳುಕಿಸಿದ್ದಾರೆ. ಈ ರೀಲ್ಸ್‌ ತುಂಬಾ ಕೆಟ್ಟದಾಗಿ ನೆಟ್ಟಿಗರು ಕಾಮೆಂಟ್‌ನ್ನು ಮಾಡಿದ್ದಾರೆ.

ಇದನ್ನೂ ಓದಿ : “ನಮ್ಮ ಪವರ್‌ ರನ್‌” ಆಯೋಜನೆಗೆ ಚಾಲನೆ ನೀಡಲಿದ್ದಾರೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಇದನ್ನೂ ಓದಿ : ನಟ ವಿಜಯರಾಘವೇಂದ್ರ ಅಭಿನಯದ “ಕಾಸಿನ ಸರ” ರಿಲೀಸ್‌ಗೆ ರೆಡಿ

ಇದನ್ನೂ ಓದಿ : ಸ್ಯಾಂಡಲ್‌ವುಡ್‌ “ಕಬ್ಜ” ಸಿನಿಮಾದ ಟ್ರೈಲರ್‌ ಲಾಂಚ್‌ ಡೇಟ್‌ ಫಿಕ್ಸ್‌

ಆಕೆ ಡ್ರೆಸ್‌ ನೋಡಿದವರು ಕೆಲವರು “ಯಾಕೆ ಮೇಡಂ ಬರ್ತಾ ಬರ್ತಾ ಬಟ್ಟೆ ಕಮ್ಮಿ ಆಗ್ತಿದೆ” ಎಂದಿದ್ದಾರೆ. ಇನ್ನೊಬ್ಬರು ಆಶಿಕಾ ಕೂಡ ರಶ್ಮಿಕಾ ಆಗಿ ಬದಲಾಗುತ್ತಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರಿಗೆ ತಮಿಳು ಹಾಡಿಗೆ ರೀಲ್ಸ್‌ ಮಾಡಿರುವುದು ಬೇಸರ ಮೂಡಿಸಿದೆ. ಅದಕ್ಕೆ ಕನ್ನಡದಲ್ಲಿ ಯಾವ ಹಾಡು ಸಿಗಲಿಲ್ವಾ? ಎಂದು ಕೇಳಿದ್ದಾರೆ. ಹಾಗೆಯೇ ತೆಲುಗು, ತಮಿಳು ಸಿನಿರಂಗಕ್ಕೆ ನಟಿಯರು ಹೋದ ಕೂಡಲೇ ಮೈಮಾಟ ಪ್ರದರ್ಶನ ಹೆಚ್ಚಾಗುತ್ತಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.

ನಟಿ ಆಶಿಕಾ “ಅಮಿಗೋಸ್‌” ಸಿನಿಮಾದಲ್ಲಿ ಕೊನೆದಾಗಿ ನಟಿಸಿದ್ದಾಳೆ. ಈ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದರೂ ಅಷ್ಟೇನೂ ಸದ್ದು ಮಾಡಿರುವುದಿಲ್ಲ. ಇದಕ್ಕಿಂತ ಮೊದಲು “ಪತ್ತಾತು ಅರಸನ್”‌ ಎನ್ನು ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ತೆಲುಗು ಹಾಗೂ ತಮಿಳು ಸಿನಿಮಾಕ್ಕೆ ಅವಕಾಶಗಳು ಸಿಗುತ್ತಾ ಎಂದು ನೋಡಬೇಕಿದೆ ಅಷ್ಟೇ. ಇನ್ನು ನಟಿ ಆಶಿಕಾ ರಂಗನಾಥ ಎರಡು ಸಿನಿಮಾಗಳಲ್ಲಿ ನಟಿಸಲು ಬಾಕಿ ಇರುತ್ತದೆ. ಪಿಆರ್‌ಕೆ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಮೂಡಿ ಬರುತ್ತಿರುವ “೦೨” ಸಿನಿಮಾದ ಶೂಟಿಂಗ್‌ ಮುಕ್ತಾಯವಾಗಿದ್ದು, ರಿಲೀಸ್‌ಗೆ ಬಾಕಿರುತ್ತದೆ. ನಟಿ ಆಶಿಕಾ ರಂಗನಾಥ್‌ ನಿರ್ದೇಶಕ ಸಿಂಪಲ್‌ ಸುನಿ ನಿರ್ದೇಶನದ “ಗತವೈಭವ” ಸಿನಿಮಾದಲ್ಲಿ ದುಷ್ಯಂತರ ಜೋಡಿಯಾಗಿ ನಟಿಸಲಿದ್ದಾರೆ.

Ashika Ranganath Reels : Actress Ashika Ranganath Instagram Reel went viral: What’s in the video?

RELATED ARTICLES

Most Popular