ಸೋಮವಾರ, ಜೂನ್ 16, 2025
HomeCinemaGandhada Gudi : Puneeth ಕನಸಿಗೆ ಜೀವತುಂಬಿದ ಅಶ್ವಿನಿ ಪುನೀತ್ ರಾಜ್ ಕುಮಾರ್ : ಡಿ.6...

Gandhada Gudi : Puneeth ಕನಸಿಗೆ ಜೀವತುಂಬಿದ ಅಶ್ವಿನಿ ಪುನೀತ್ ರಾಜ್ ಕುಮಾರ್ : ಡಿ.6 ರಂದು ಗಂಧದಗುಡಿ ಟ್ರೇಲರ್ ರಿಲೀಸ್

- Advertisement -

ಪುನೀತ್ ರಾಜ್ ಕುಮಾರ್ ಕರುನಾಡಿನ ಅಭಿಮಾನಿಗಳನ್ನು, ತಮ್ಮ ಆಪ್ತರನ್ನು ಅಗಲಿ ಒಂದು ತಿಂಗಳು ಕಳೆದಿದೆ. ತಮ್ಮ‌ ಕನಸುಗಳನ್ನು ಅರ್ಧದಲ್ಲೇ ಬಿಟ್ಟು ಹೋದ ಪುನೀತ್ ರಾಜ್ ಕುಮಾರ್ ಅವರ ಕನಸುಗಳಿಗೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ( Ashwini Puneeth Rajkumar ) ಜೀವತುಂಬುತ್ತಿದ್ದು ಡಿ.6 ರಂದು ಪುನೀತ್ (Puneeth) ಅಪರೂಪದ ಕನಸೊಂದು (Gandhada Gudi) ಟ್ರೇಲರ್ ರೂಪದಲ್ಲಿ ಬರಲಿದೆ.

good news for Puneeth Raj Kumar Fans, Appu's name for the city road
ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್

ಇತ್ತೀಚಿಗೆ ನಟ ಪುನೀತ್ ರಾಜ್ ಕುಮಾರ್ ಕಂಡಿದ್ದ ಕನಸು ಗಂಧದ ಗುಡಿ ( Gandhada Gudi ) ಸಾಕ್ಷ್ಯ ಚಿತ್ರ. ಕನ್ನಡನಾಡಿನ ಹಿರಿಮೆ ಸಾರುವ ಈ ಸಾಕ್ಷ್ಯಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ನಾಡಿನಾದ್ಯಂತ ಸಂಚರಿಸಿ ಅಪರೂಪದ ಸ್ಥಳಗಳನ್ನು ಶೂಟ್ ಮಾಡಿಸಿದ್ದರು. ಎಲ್ಲ ಅಂದಕೊಂಡಂತೆ‌ ಆಗಿದ್ದರೇ, ಪುನೀತ್ ಕನಸಾಗಿದ್ದ ಗಂಧದಗುಡಿ ಟ್ರೇಲರ್ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ವೇಳೆ ರಿಲೀಸ್ ಆಗಬೇಕಿತ್ತು.

Kannada Film Chamber of Commerce
ಪುನೀತ್‌ ರಾಜ್‌ ಕುಮಾರ್‌

ಆದರೆ ಈ ಟ್ರೇಲರ್ ರಿಲೀಸ್ ಗೂ ಮುನ್ನವೇ ಪುನೀತ್ ಅಕ್ಟೋಬರ್ 29 ರಂದು ನಮ್ಮೆಲ್ಲರನ್ನು ಅಗಲಿ ಹೋದರು. ಆದರೆ ಅಪ್ಪು ಅಗಲಿಕೆಯ ನೋವಿನ ನಡುವೆಯೂ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಪ್ಪು ಕನಸುಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಅಶ್ವಿನಿ ಡಿಸೆಂಬರ್ ೬ ರಂದು ಗಂಧದಗುಡಿ ಟ್ರೇಲರ್ ರಿಲೀಸ್ ಗೆ ಸಿದ್ಧವಾಗಿದ್ದಾರೆ. ಡಿಸೆಂಬರ್ ೬ ಪಾರ್ವತಮ್ಮ ರಾಜ್ ಕುಮಾರ್ ಹುಟ್ಟುಹಬ್ಬ. ಹೀಗಾಗಿ ಅಂದೇ ಟ್ರೇಲರ್ ರಿಲೀಸ್ ಗೆ ಅಶ್ವಿನಿ ಪುನೀತ್ ನಿರ್ಧರಿಸಿದ್ದಾರಂತೆ.

ಈ ವಿಚಾರವನ್ನು ಸ್ವತಃ ಅಶ್ವಿನಿ ಪುನೀತ್ ರಾಜ್ ಕುಮಾರ್ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಅವರ ಅಮೋಘವಾದ ಕನಸಿನ ಪಯಣ.ಹಿಂದೆಂದೂ ಕಾಣದ ರೋಮಾಂಚಕ ಅನುಭವ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಬರೆದಿದ್ದಾರೆ. ಅಶ್ವಿನಿಯವರ ಪೋಸ್ಟ್ ನ್ನು ರಾಘವೇಂದ್ರ ರಾಜ್ ಕುಮಾರ್ ಕೂಡ ಶೇರ್ ಮಾಡಿಕೊಂಡಿದ್ದಾರೆ.

ದೊಡ್ಡ ಬ್ಯಾಕ್ ಪ್ಯಾಕ್ ವೊಂದನ್ನು ಹೊತ್ತು ಪುನೀತ್ ರಾಜ್ ಕುಮಾರ್ ಕಾಡಿನತ್ತ ಹೆಜ್ಜೆ ಹಾಕುವ ಪೋಟೋವನ್ನು ಗಂಧದಗುಡಿ ಟ್ರೇಲರ್ ಪೋಸ್ಟ್ ಒಳಗೊಂಡಿದೆ. ಅಮೋಘವರ್ಷ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಸಾಕ್ಷ್ಯ ಚಿತ್ರವನ್ನು ಪುನೀತ್ ಅವರ ಸ್ವಂತ ಪ್ರೊಡಕ್ಷನ್ ಪಿ.ಅರ್‌.ಕೆ. ನಿರ್ಮಿಸಿದೆ. ಡಿಸೆಂಬರ್ 1 ರಂದು ಅಶ್ವಿನಿಯವರೊಂದಿಗೆ ತಮ್ಮ ೨೨ ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿದ್ದ ಪುನೀತ್ ಒಂದು ತಿಂಗಳ ಮೊದಲು ಕುಟುಂಬವನ್ನು,ಅಭಿಮಾನಿಗಳನ್ನು ಅಗಲಿದ್ದಾರೆ.

ಇದನ್ನೂ ಓದಿ :‌ Pawan Kalyan: ಪವನ್ ಕಲ್ಯಾಣ್ ಅಭಿಮಾನಿಗಳಿಂದ ಪುನೀತ್ ಹೆಸರಲ್ಲಿ ಆರೋಗ್ಯ ಶಿಬಿರ

ಇದನ್ನೂ ಓದಿ : Puneeth Raj kumar : ಪುನೀತ್‌ ರಾಜ್‌ ಕುಮಾರ್‌ ಮನೆಗೆ ನಿರ್ಮಲಾನಂದ ಶ್ರೀ ಭೇಟಿ

(Ashwini Puneeth Rajkumar Aannounced Puneeth documentry film Gandhada Gudi teaser date)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular